ಬ್ರೇಕಿಂಗ್ ನ್ಯೂಸ್
13-09-21 10:48 am Headline Karnataka News Network ಕ್ರೈಂ
ಚೆನ್ನೈ, ಸೆ.13: ಸೆವೆನ್ ಸ್ಟಾರ್ ಹೊಟೇಲಿನಲ್ಲಿ ಬಿರಿಯಾನಿ ತಿಂದು ಹತ್ತು ವರ್ಷದ ಬಾಲಕಿ ಮೃತಪಟ್ಟು 29ಕ್ಕೂ ಹೆಚ್ಚು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿದೆ.
ಆರಣಿ ಎಂಬಲ್ಲಿನ ಬಸ್ ನಿಲ್ದಾಣದ ಬಳಿಯಿರುವ ಸೆವೆನ್ ಸ್ಟಾರ್ ಹೊಟೇಲಿನಲ್ಲಿ ಪ್ರವಾಸಕ್ಕೆ ಬಂದಿದ್ದ ಜನರು ಆಹಾರ ಸೇವಿಸುತ್ತಿದ್ದಾಗ ಘಟನೆ ನಡೆದಿದೆ. ಆಹಾರ ತಿಂದ ಕೆಲವೇ ಹೊತ್ತಲ್ಲಿ ವಾಂತಿ ಮತ್ತು ತೀವ್ರ ಬಳಲಿಕೆ ಉಂಟಾಗಿದ್ದು, ಅಸ್ವಸ್ಥರಾಗಿದ್ದರು.
ಆನಂದ್ ಮತ್ತು ಅವರ ಪತ್ನಿ ಪ್ರಿಯದರ್ಶಿನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಹೊಟೇಲಿಗೆ ಬಂದು ಬಿರಿಯಾನಿ ಮತ್ತು ಚಿಕನ್ ತಿಂದಿದ್ದರು. ಕೂಡಲೇ ಮಕ್ಕಳಾದ ಚರಣ್ ಮತ್ತು ಲೋಶ್ನಿಗೆ ಫುಡ್ ಪಾಯ್ಸನ್ ಆಗಿದ್ದು, ಅಸ್ವಸ್ಥರಾಗಿದ್ದಾರೆ. ಅವರನ್ನು ಅಲ್ಲಿಯೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ಲೋಶ್ನಿ ಮೃತಪಟ್ಟಿದ್ದಾಳೆ. ಆನಂತರ ಇನ್ನೊಬ್ಬ ಹುಡುಗ ಮತ್ತು ಹೆತ್ತವರನ್ನು ಕೂಡ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ, ಹೆಚ್ಚುವರಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದೇ ವೇಳೆ, ಇತರ 26 ಮಂದಿ ಅದೇ ಹೊಟೇಲಿನಲ್ಲಿ ಆಹಾರ ಸೇವಿಸಿದ್ದು, ಅಸ್ವಸ್ಥರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಹೊಟೇಲಿನಲ್ಲಿ ಯಾವೆಲ್ಲಾ ಆಹಾರ ಸೇವಿಸಿದ್ದರು, ಏನಾಗಿತ್ತು ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಹೊಟೇಲ್ ಮಾಲಕ ಅಮ್ಜದ್ ಭಾಷಾ ಮತ್ತು ಚೆಫ್ ಮುನ್ನಿಯಾಂಡಿ ಅವರನ್ನು ಬಂಧಿಸಿದ್ದಾರೆ.
People who consumed food at the 7 Star hotel near Arani bus stop started showing symptoms of vomiting and giddiness.
04-07-25 06:52 pm
Bangalore Correspondent
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 02:38 pm
Mangalore Correspondent
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
04-07-25 06:21 pm
Mangalore Correspondent
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm