ಬ್ರೇಕಿಂಗ್ ನ್ಯೂಸ್
09-09-21 04:07 pm Headline Karnataka News Network ಕ್ರೈಂ
ತಿರುವನಂತಪುರಂ, ಸೆ.9 : ನಾಯಿ, ಬೆಕ್ಕುಗಳನ್ನು ಮನೆಯ ಒಳಗೇ ಇರಿಸಿಕೊಂಡು ತಮ್ಮ ಮಕ್ಕಳ ರೀತಿಯಲ್ಲೇ ನೋಡಿಕೊಳ್ಳುವ ಮಂದಿ ಇದ್ದಾರೆ. ಆದರೆ, ಕೇರಳದಲ್ಲಿ ಇಬ್ಬರು ಮಹಿಳೆಯರು ಸೇರಿ ಹೆಣ್ಣು ನಾಯಿ ಹಾಗೂ ಅದರ ಒಂದು ತಿಂಗಳ ಪ್ರಾಯದ 7 ಮರಿಗಳನ್ನು ಜೀವಂತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸೆರೆಯಾಗಿದ್ದು ಭಾರೀ ಆಕ್ರೋಶ ಕೇಳಿಬಂದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಮಂಜಲಿ ಎಂಬ ಸಣ್ಣ ಹಳ್ಳಿಯಲ್ಲಿ ಸೆ. 4ರಂದು ನಡೆದಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ತಮ್ಮ ಮನೆಯ ಬಳಿ ತಾಯಿ ನಾಯಿ ಹಾಗೂ ಅದರ 7 ಮರಿಗಳಿಗೆ ಬೆಂಕಿ ಹಾಕಿದ್ದಾರೆ. 5 ಮರಿಗಳು ಹಾಗೂ ತಾಯಿ ನಾಯಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿವೆ. ಅವುಗಳ ಮೈಯ ಚರ್ಮ ಸುಟ್ಟುಹೋಗಿದೆ. ಆದರೆ, ಎರಡು ಮರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸುಟ್ಟ ಗಾಯದಿಂದ ನರಳುತ್ತಿದ್ದ ನಾಯಿಯನ್ನು ನೋಡಿದ ಮಹಿಳೆಯೊಬ್ಬರು ಪ್ರಾಣಿ ರಕ್ಷಣಾ ತಂಡಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಂಘದ ಸದಸ್ಯರು ನಾಯಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ.
ಲಕ್ಷ್ಮೀ ಮತ್ತು ಮೇರಿ ಎಂಬ ಮಹಿಳೆಯರು ಸೇರಿಕೊಂಡು ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ್ದು ಇದನ್ನು ಪಕ್ಕದ ಮನೆಯವರು ವಿಡಿಯೋ ಮಾಡಿದ್ದರು. ವಿಡಿಯೋದ ಆಧರಿಸಿ ಪೊಲೀಸರು ಕೇಸು ದಾಖಲಿಸಿದ್ದಾರೆ.
In Kerala, two women have allegedly set a dog and her litter of month old seven puppies on fire. The gruesome incident, which was caught on camera, took place in Manjali a small village under Alangad police limits in Ernakulam district, Kerala on Saturday, September 4.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm