ಬ್ರೇಕಿಂಗ್ ನ್ಯೂಸ್
09-09-21 12:42 pm Headline Karnataka News Network ಕ್ರೈಂ
ಮುಂಬೈ, ಸೆ.9 : 13 ವರ್ಷದ ಬಾಲಕಿಯನ್ನು 15ಕ್ಕೂ ಹೆಚ್ಚು ಕಾಮುಕರು ಸೇರಿ ಎರಡು ದಿನಗಳ ಪರ್ಯಂತ ವಿವಿಧ ಕಡೆಗಳಿಗೆ ಒಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 31ರಂದು ರಾತ್ರಿ 13 ವರ್ಷದ ಹುಡುಗಿಯೊಬ್ಬಳು ತನ್ನ ಗೆಳೆಯ ರೈಲಿನಲ್ಲಿ ಬರುತ್ತಾನೆಂದು ಪುಣೆ ರೈಲ್ವೇ ಸ್ಟೇಶನಿಗೆ ತೆರಳಿದ್ದಳು. ಆದರೆ, ನಿಗದಿತ ರೈಲಿನಲ್ಲಿ ಗೆಳೆಯ ಬರದೇ ಇದ್ದುದರಿಂದ ರೈಲ್ವೇ ಪ್ಲಾಟ್ ಫಾರಂನಲ್ಲಿ ನಿಂತುಕೊಂಡಿದ್ದ ಹುಡುಗಿಯನ್ನು ಆಟೋ ಚಾಲಕರಿಬ್ಬರು ನಿನ್ನನ್ನು ಮನೆಗೆ ಬಿಡುತ್ತೇವೆಂದು ಹೇಳಿ ಹತ್ತಿಸಿಕೊಂಡಿದ್ದಾರೆ. ಆನಂತರ ಬೇರೆಯದೇ ಜಾಗಕ್ಕೆ ಕೊಂಡೊಯ್ದು ಅಲ್ಲಿ ಬೇರೆ ಕೆಲವರನ್ನು ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಅಲ್ಲದೆ, ಆಕೆಯನ್ನು ಮರುದಿನ ಇನ್ನಿತರ ಕೆಲವು ಯುವಕರು ಸೇರಿಕೊಂಡು ಬೇರೆ ಬೇರೆ ಕಡೆಗಳಿಗೆ ಸುತ್ತಾಡಿಸಿ, ಲಾಡ್ಜ್, ಹೊಟೇಲ್, ನಿಗೂಢ ಜಾಗಗಳಲ್ಲಿ ಇರಿಸಿ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ಬಳಿಕ ಮುಂಬೈಗೆ ತೆರಳುವ ಬಸ್ಸಿನಲ್ಲಿ ಹುಡುಗಿಯನ್ನು ಆರೋಪಿಗಳು ಬಿಟ್ಟಿದ್ದು, ಈ ಬಗ್ಗೆ ಯಾರಿಗಾದ್ರೂ ಹೇಳಿದರೆ ನಿನ್ನ ಹೆತ್ತವರನ್ನು ಸಾಯಿಸುತ್ತೇವೆಂದು ಬೆದರಿಸಿದ್ದಾರೆ. ಆನಂತರ, ಹುಡುಗಿ ತನ್ನ ಗೆಳೆಯನಿಗೆ ಫೋನ್ ಮಾಡಿದ್ದು ವಿಷಯ ತಿಳಿಸಿದ್ದಲ್ಲದೆ, ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಆಕೆ ನೀಡಿದ ಸುಳಿವು ಆಧರಿಸಿ, ಬೇರೆ ಬೇರೆ ಕಡೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ಪೈಕಿ ಆರು ಮಂದಿ ಆಟೋ ಚಾಲಕರಾಗಿದ್ದು, ನಾಲ್ವರು ರೈಲ್ವೇ ಸ್ಟೇಶನ್ ಸಿಬಂದಿಯಾಗಿದ್ದರು. ಹುಡುಗಿಯ ಗೆಳೆಯನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
Fourteen have been arrested for allegedly kidnapping and raping a 13-year-old girl in Maharashtra's Pune, the police said today. The girl has been admitted to a hospital and is undergoing treatment.
11-05-26 09:36 pm
HK News Staffer
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm