ಬ್ರೇಕಿಂಗ್ ನ್ಯೂಸ್
08-09-21 10:53 am Headline Karnataka News Network ಕ್ರೈಂ
ಇಸ್ರೇಲ್, ಸೆ.8: ಊಟಕ್ಕೆ ಬಳಸುವ ಚಮಚಾಗಳನ್ನೇ ಆಯುಧಗಳನ್ನಾಗಿಸಿ ಅತಿ ಭದ್ರತೆಯ ಜೈಲಿನ ನೆಲ ಹಾಸನ್ನು ಅಗೆದು ಸುರಂಗ ಕೊರೆದು, ಆರು ಕೈದಿಗಳು ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿರುವ ಪ್ರಕರಣ ಇಸ್ರೇಲ್ನಲ್ಲಿ ನಡೆದಿದೆ.
ಇಸ್ರೇಲಿಗಳ ಮೇಲೆ ದಾಳಿ, ಹತ್ಯೆ ಸಂಚು, ಹತ್ಯೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪ್ಯಾಲಿಸ್ತೇನಿಯ ಆರು ಉಗ್ರರನ್ನು ಅತ್ಯಂತ ಬಿಗಿಭದ್ರತೆಯ ಗಿಲ್ಬೋವಾ ಜೈಲಿನಲ್ಲಿ ಇರಿಸಲಾಗಿತ್ತು. ಅವರೆಲ್ಲರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಯುವಕರಾಗಿದ್ದ ಈ ಉಗ್ರರು ಶಿಕ್ಷೆ ಪೂರೈಸುವ ಹೊತ್ತಿಗೆ ವೃದ್ಧರಾಗುತ್ತಿದ್ದರು. ತಮಗೆ ಉಳಿಗಾಲ ಇಲ್ಲವೆಂದು ಅರಿತ ಪಾತಕಿಗಳು ಸಾವನ್ನು ಲೆಕ್ಕಿಸದೇ ಜೈಲಿನ ನೆಲಹಾಸು ಕೊರೆದು ಪರಾರಿಯಾಗಿದ್ದಾರೆ.
ಕಾಂಕ್ರಿಟ್ ಹಾಸನ್ನು ಚಮಚದಂತಹ ಸಣ್ಣ ಆಯುಧಗಳಿಂದ ಅಗೆದಿದ್ದಾರೆ. ಟಾಯ್ಲೆಟ್ ಪಕ್ಕದಲ್ಲಿ ಮೆತ್ತನೆಯ ಜಾಗ ನೋಡಿ ಹಲವು ದಿನಗಳ ಕಾಲ ಸುರಂಗ ಕೊರೆದು ಪಾರಾಗಿದ್ದಾರೆ. ತೀವ್ರ ತಪಾಸಣೆಯ ಜೈಲಿನಲ್ಲಿ ಅಷ್ಟೊಂದು ದೊಡ್ಡ ಸುರಂಗ ಕೊರೆದು ಪರಾರಿಯಾಗಿದ್ದು ನಿಜಕ್ಕೂ ಅಚ್ಚರಿಯಾಗಿದೆ ಎಂದು ಇಸ್ರೇಲಿ ಅಧಿಕಾರಿಗಳೇ ಹುಬ್ಬೇರಿಸಿದ್ದಾರೆ.
ರಾತ್ರಿ ನಡೆದ ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಇಸ್ರೇಲಿ ಭದ್ರತಾ ಪಡೆಗಳು, ಪರಾರಿಯಾದವರ ಶೋಧ ಕಾರ್ಯಕ್ಕೆ ಇಳಿದಿವೆ. ಬೆಳಗಿನ ಜಾವ ತಾನು ಜಾಮೀನಿನಲ್ಲಿ ಆಗಂತುಕರನ್ನು ಕಂಡಿರುವುದಾಗಿ ದಕ್ಷಿಣ ಇಸ್ರೇಲ್ನ ರೈತನೊಬ್ಬ ಮಾಹಿತಿ ನೀಡಿದ್ದು, ಆ ಭಾಗದತ್ತ ವಿಶೇಷ ತುಕಡಿಗಳನ್ನು ಕಳಿಸಲಾಗಿದೆ. ಏತನ್ಮಧ್ಯೆ, ಇಸ್ರೇಲಿ ಉಕ್ಕಿನ ಕೋಟೆ ಭೇದಿಸಿದ ಜಿಹಾದಿಗಳ ಸಾಹಸಕ್ಕೆ ಪ್ಯಾಲೆಸ್ತೇನಿ ಜನರು ಭಾರಿ ಸಂಭ್ರಮಾಚರಣೆ ಮಾಡಿದ್ದಾರೆ. ಗಾಜಾ ಪಟ್ಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ.
Israel launched a massive manhunt in the country's north and the occupied West Bank early Monday after six Palestinian prisoners tunneled out of their cell and escaped from a high-security facility in the biggest prison break of its kind in decades.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm