ಬ್ರೇಕಿಂಗ್ ನ್ಯೂಸ್
06-09-21 07:27 pm Headline Karnataka News Network ಕ್ರೈಂ
ನವದೆಹಲಿ, ಸೆ.6 : ಮಹಿಳೆಯ ಜೊತೆ ಅಫೇರ್ ಹೊಂದಿದ್ದ ಯುವಕನೊಬ್ಬ ಆಕೆಯನ್ನು ಮದುವೆಯಾಗದಿದ್ದರೆ, ತನ್ನ ಮೇಲೆ ರೇಪ್ ಕೇಸ್ ಕೊಡುತ್ತಾಳೆಂಬ ಭಯದಲ್ಲಿ ಮಹಿಳೆಯನ್ನೇ ಭೀಭತ್ಸವಾಗಿ ಕೊಲೆಗೈದು ಮುಖವನ್ನು ಗುರುತು ಸಿಗದಂತೆ ಜಜ್ಜಿಹಾಕಿದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧಿಸಿ ಸೂರತ್ ಪೊಲೀಸರು 38 ವರ್ಷದ ವಿನಯ್ ರಾಯ್ ಎಂಬ ಬಿಹಾರ ಮೂಲದ ಯುವಕನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ಸಂಶಯದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ನಂದೂರ್ ಬಾರ್ ರೈಲು ಹಳಿಯ ಬಳಿ ಕುತ್ತಿಗೆ ಸೀಳಿ, ಮುಖದ ಚರ್ಮವನ್ನು ಸುಲಿದು ಗುರುತು ಸಿಗದಂತೆ ಮಾಡಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.
ಮೂಲತಃ ಬಿಹಾರದವನಾಗಿರುವ ವಿನಯ್ ರಾಯ್, ಸೂರತ್ ನಲ್ಲಿ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಾರಜ್ ಎಂಬ ಗ್ರಾಮದಲ್ಲಿ ವಾಸವಿದ್ದ. ಆತನಿಗೆ ಮದುವೆಯಾಗಿದ್ದು ಎರಡು ಮಕ್ಕಳನ್ನು ಹೊಂದಿದ್ದ. ಈ ನಡುವೆ, ಬೇರೊಬ್ಬ ಮಹಿಳೆಯೊಂದಿಗೆ ಎರಡು ವರ್ಷಗಳಿಂದ ಸಂಬಂಧವನ್ನೂ ಇಟ್ಟುಕೊಂಡಿದ್ದ. ಇವರ ನಡುವೆ ಇತ್ತೀಚೆಗೆ ಜಟಾಪಟಿ ನಡೆದಿದ್ದು, ತನ್ನನ್ನು ಮದುವೆಯಾಗದಿದ್ದರೆ ಅತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಸಿದ್ದಳು. ಆಕೆಗೆ ಈ ಹಿಂದೆಯೂ ಬೇರೊಬ್ಬನ ಜೊತೆ ಸಂಪರ್ಕ ಇದ್ದುದು ತಿಳಿದುಬಂದಿತ್ತು. ಅಲ್ಲದೆ, ಆ ಬಗ್ಗೆ ವ್ಯಕ್ತಿಯ ವಿರುದ್ಧ ಅತ್ಯಾಚಾರ ದೂರು ನೀಡಿ, ಜೈಲು ಪಾಲಾಗುವಂತೆ ಮಾಡಿದ್ದಳು. ಹಳೆ ವಿಚಾರವನ್ನು ಹೇಳುತ್ತಾ ತನ್ನನ್ನು ಮದುವೆಯಾಗದಿದ್ದರೆ, ನಿನ್ನ ವಿರುದ್ಧವೂ ಅತ್ಯಾಚಾರ ಕೇಸು ದಾಖಲಿಸುವುದಾಗಿ ಬೆದರಿಸಿದ್ದಳು. ಹಾಗಾಗಿ ಆಕೆಯನ್ನು ಮುಗಿಸಲು ಪ್ಲಾನ್ ಹಾಕಿ, ನಂದೂರ್ ಬಾರ್ ಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ನಂದೂರ್ ಬಾರ್ ರೈಲು ಹಳಿಯ ಬಳಿ ಮಹಿಳೆಯ ಶವ ಪತ್ತೆಯಾಗಿತ್ತು. ಅಲ್ಲಿನ ಪೊಲೀಸರು ತನಿಖೆ ನಡೆಸಿದಾಗ, ಮಹಿಳೆ ಮತ್ತು ಆಕೆಯನ್ನು ಕೊಲೆಗೈದ ಆರೋಪಿ ಇಬ್ಬರೂ ಸೂರತ್ ನವರು ಅನ್ನೋದು ಗೊತ್ತಾಗಿತ್ತು. ಸೂರತ್ ಪೊಲೀಸರು ಬೆನ್ನತ್ತಿದ್ದು, ಆರೋಪಿ ವಿನಯ್ ರಾಯ್ ಕೈವಾಡ ಕಂಡುಬಂದು ವಿಚಾರಣೆ ನಡೆಸಿದಾಗ ಮಹಿಳೆಯನ್ನು ವಿಕೃತವಾಗಿ ಕೊಂದು ಹಾಕಿರುವ ವಿಚಾರ ಬಯಲಾಗಿದೆ.
A 38-year-old man has allegedly murdered a woman with whom he was having an affair - afraid that she might lodge a complaint of rape against him if he did not marry her.
09-04-25 09:31 pm
HK News Desk
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
Karwar Sp Narayana, Bhatkal News: ಭಟ್ಕಳ ; ವಿಚ...
09-04-25 11:25 am
09-04-25 04:07 pm
HK News Desk
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
Karnataka Bhavan, Sujay Kumar Shetty: ದಿಲ್ಲಿಯ...
06-04-25 09:23 pm
Waqf land in India: ದೇಶದಲ್ಲಿ ಒಟ್ಟು ಎಷ್ಟು ವಕ್ಫ...
06-04-25 06:39 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
09-04-25 11:17 pm
HK News Desk
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm
Raichur, Bank of Maharashtra, Gold fraud: 30...
08-04-25 09:26 pm