ಬ್ರೇಕಿಂಗ್ ನ್ಯೂಸ್
26-08-21 12:36 pm Mangaluru Correspondent ಕ್ರೈಂ
ಉಳ್ಳಾಲ, ಆ.26: ಕೇರಳದಿಂದ ಕರ್ನಾಟಕಕ್ಕೆ ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ತೋರಿಸಿ ಬಂದಿದ್ದ ಕಾಸರಗೋಡು ಜಿಲ್ಲೆಯ ನಾಲ್ವರನ್ನ ಉಳ್ಳಾಲ ಪೊಲೀಸರು ತಲಪಾಡಿ ಗಡಿಭಾಗದಲ್ಲಿ ಬಂಧಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿದ ನಿಟ್ಟಿನಲ್ಲಿ ಕರ್ನಾಟಕ - ಕೇರಳ ನಡುವಿನ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು RTPCR ರಿಪೋರ್ಟ್ ಇದ್ದವರನ್ನು ಮಾತ್ರ ಕರ್ನಾಟಕ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ತಲಪಾಡಿ ಗಡಿ ಪ್ರದೇಶದಲ್ಲೂ ದಕ್ಷಿಣ ಕನ್ನಡ ಜಿಲ್ಲಾಡಳಿತವು ತಪಾಸಣೆ ನಡೆಸುತ್ತಿದೆ. ಈ ವೇಳೆ ನಕಲಿ RTPCR ಪರೀಕ್ಷೆ ವರದಿ ತೋರಿಸಿ ಕರ್ನಾಟಕ ಪ್ರವೇಶಿಸಿದ ಕಾಸರಗೋಡು ಜಿಲ್ಲೆಯ ನಾಲ್ವರು ವ್ಯಕ್ತಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಇನ್ನೋವಾ ಕಾರಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್ (25) ಮತ್ತು ಕಡಪುರ ನಿವಾಸಿ ಇಸ್ಮಾಯಿಲ್(48) ಹಾಗೂ ಬೈಕ್ ಮೂಲಕ ಬಂದು ಗಡಿ ಪ್ರವೇಶ ಮಾಡಿದ್ದ ಕಾಸರಗೋಡು, ಚೆರ್ವತ್ತೂರು ನಿವಾಸಿ ಹನೀನ್(31) ಮತ್ತು ಬಸ್ ಮೂಲಕ ಬಂದಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್ (19) ನನ್ನ ಉಳ್ಳಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರ ವಿರುದ್ಧ ಉಳ್ಳಾಲ ಪೊಲೀಸರು ಎಪಿಡಮಿಕ್ ಆಕ್ಟ್, ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ. ಆರ್ ಟಿಪಿಸಿಆರ್ ಪರೀಕ್ಷೆ ವರದಿಯ ಮಾದರಿಯಲ್ಲೇ ನಕಲಿ ಪ್ರಮಾಣ ಪತ್ರ ಮಾಡಿಸಿಕೊಂಡು ಇವರು ಕರ್ನಾಟಕ ಪ್ರವೇಶ ಮಾಡಿದ್ದರು. ತಲಪಾಡಿ ಗಡಿಯಲ್ಲಿ ವರದಿಯನ್ನು ಪರಿಶೀಲನೆ ನಡೆಸಿದಾಗ, ನಕಲಿ ಆಗಿರುವುದು ಕಂಡುಬಂದಿದೆ.
Ullal police arrest four Keralites at Talapady for showing fake RTPCR report. The four have come through car from Kerala and when asked for Rtpcr test report it was said to be fake when examined.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 01:02 pm
HK News Desk
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm