ಬ್ರೇಕಿಂಗ್ ನ್ಯೂಸ್
17-08-21 02:34 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 17: ಲಿಥುವಾನಿಯಾದಲ್ಲಿ ಕೆಲಸ ಇದೆಯೆಂದು ಹೇಳಿ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ನಕಲಿ ಏಜನ್ಸಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ಬಲ್ಮಠದಲ್ಲಿ ಜೀರೇ ಪಾತ್ ವೇ ಅಬ್ರಾಡ್ ಅಫೀಸ್ ಎಂಬ ಹೆಸರಲ್ಲಿ ಕಚೇರಿ ಮಾಡಿಕೊಂಡಿದ್ದ ಜೆರಿ ಇಥಿಲ್ ಸಿಖಾ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಆರೋಪಿ ಜೆರಿ, ಲಿಥುವಾನಿಯಾದಲ್ಲಿ ಆಫೀಸ್ ಕೆಲಸದ ಬಗ್ಗೆ ವರ್ಕ್ ವೀಸಾ ಇದೆ. ಅದಕ್ಕಾಗಿ 5 ಲಕ್ಷ 50 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ಮಹಿಳೆಯೊಬ್ಬರನ್ನು ನಂಬಿಸಿದ್ದಾರೆ. ಅಲ್ಲದೆ, ತಿಂಗಳಿಗೆ 3 ಲಕ್ಷ 50 ಸಾವಿರ ರೂ. ಸಂಬಳ ಇದೆಯೆಂದು ಹೇಳಿದ್ದರು.


ಇದನ್ನು ನಂಬಿದ ಕಾವೂರು ಮೂಲದ ಮಹಿಳೆ ತನ್ನ ಚಿನ್ನಾಭರಣ ಅಡವಿಟ್ಟು ಒಂದು ಲಕ್ಷ ನಗದು ನೇರವಾಗಿ ಮತ್ತು ಒಂದು ಲಕ್ಷ ರೂ. ಹಣವನ್ನು ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಸಲ್ಲಿಸಿದ್ದ. ಈ ಬಗ್ಗೆ ದೂರುದಾರ ವ್ಯಕ್ತಿ ಇತ್ತೀಚೆಗೆ ಕೆಲವರಲ್ಲಿ ವಿಚಾರಿಸಿದಾಗ ಜೀರೇ ಪಾತ್ ವೇ ಸಂಸ್ಥೆಯ ಬಗ್ಗೆ ಸಂಶಯ ಮೂಡಿತ್ತು. ಅಲ್ಲದೆ, ಕಳೆದ ವಾರ ಪೊಲೀಸರು ಅಧಿಕೃತ ವೀಸಾ ಏಜನ್ಸಿಗಳ ಬಗ್ಗೆ ಪಟ್ಟಿ ಬಿಡುಗಡೆಗೊಳಿಸಿದ್ದರು. ಇದರಲ್ಲಿ ಜಿರೇ ಪಾತ್ ವೇ ಸಂಸ್ಥೆಯ ಹೆಸರು ಉಲ್ಲೇಖ ಆಗಿರದ ಕಾರಣ ದೂರುದಾರ ಮಹಿಳೆಗೆ ಸಂಶಯ ಬಂದು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅದರಂತೆ, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
The Mangalore police have arrested owner of Jireh Pathway Abraod travel agency for cheating woman of Three lakhs stating to send her aboard for Job in Lithuania. The arrested has been identified as Jireh Sika.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm