ಬ್ರೇಕಿಂಗ್ ನ್ಯೂಸ್
09-08-21 12:42 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 9: ಪಾರ್ಕ್ ಮಾಡಿಟ್ಟ ಕಾರಿನ ಗ್ಲಾಸ್ ಒಡೆದು ಅದರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವ ಕೃತ್ಯಗಳು ಕರಾವಳಿಯಲ್ಲಿ ಹೆಚ್ಚುತ್ತಿದ್ದು ಇದರ ಹಿಂದೆ ಉತ್ತರ ಪ್ರದೇಶ ಮೂಲದ ದರೋಡೆಕೋರರು ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಉರ್ವಾ ಸ್ಟೋರ್ ನಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಲ್ಯಾಪ್ಟಾಪ್, ಐಫೋನ್ ದೋಚಿದ್ದ ಕೃತ್ಯ ನಡೆದಿತ್ತು. ಅದೇ ದಿನ ಮಧ್ಯಾಹ್ನ ಲೇಡಿಹಿಲ್ ನಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 40 ಸಾವಿರ ನಗದು, ದಾಖಲೆಗಳನ್ನು ಹೊಂದಿದ್ದ ಬ್ಯಾಗನ್ನು ಕಳವು ಮಾಡಲಾಗಿತ್ತು.


ಒಂದೇ ಮಾದರಿಯ ಪ್ರಕರಣ ಒಂದೇ ದಿನ ನಡೆದಿದ್ದು ಇದರಲ್ಲಿ ಒಂದೇ ತಂಡದ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಓಜಿ ಕೊಪ್ಪಮ್ ಎನ್ನುವ ಉತ್ತರ ಪ್ರದೇಶ ಮೂಲದ ಗ್ಯಾಂಗ್ ಇದರ ಹಿಂದಿದೆ ಎನ್ನುವ ಸಂಶಯ ಪೊಲೀಸರಲ್ಲಿದೆ. ಈ ಹಿಂದೆ ಇದೇ ತಂಡದ ಕೆಲವು ಸದಸ್ಯರು ಕರ್ನಾಟಕದ ವಿವಿಧ ಕಡೆಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಸೆರೆಸಿಕ್ಕಿದ್ದರು. ಆನಂತರ ಬಿಡುಗಡೆಯಾಗಿ ಊರು ಬದಲಿಸಿ ಕೃತ್ಯ ನಡೆಸುತ್ತಿದ್ಧಾರೆಯೇ ಎನ್ನುವ ಶಂಕೆ ಮೂಡಿದೆ.
ಮಂಗಳೂರಿನ ಪ್ರಕರಣದ ಬೆನ್ನಲ್ಲೇ ಉಡುಪಿಯಲ್ಲೂ ಅದೇ ಮಾದರಿಯ ಕೃತ್ಯ ನಡೆದಿತ್ತು. ಪಾರ್ಕ್ ಮಾಡಿಟ್ಟು ಹೋಗಿದ್ದ ಕಾರಿನಿಂದ ಲ್ಯಾಪ್ಟಾಪ್ ಅನ್ನು ಕಳವು ಮಾಡಲಾಗಿತ್ತು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಶೆಟ್ಟಿ ಎಂಬವರು ಕಾರಿನಲ್ಲಿ ಕೊಲ್ಲೂರು, ಕಟೀಲು ಪ್ರವಾಸ ಮುಗಿಸಿ ಉಡುಪಿಗೆ ಬಂದಿದ್ದರು. ಉಡುಪಿ ಪೇಟೆಯಲ್ಲಿ ಕಾರು ಪಾರ್ಕ್ ಮಾಡಿ, ಫುಡ್ ಪಾರ್ಸೆಲ್ ತರಲೆಂದು ತೆರಳಿದ್ದರು. ಹಿಂತಿರುಗಿ ಬಂದಾಗ ಕಾರಿನ ಸೀಟಿನಲ್ಲಿ ಇಟ್ಟಿದ್ದ ಲ್ಯಾಪ್ಟಾಪ್ ಇರಲಿಲ್ಲ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಿಂದ ನಗದು, ವಿದೇಶಿ ಕರೆನ್ಸಿ, ದಾಖಲೆಗಳಿದ್ದ ಬ್ಯಾಗ್ ಕಳವು
The city police suspect that a gang of Uttar Pradesh origin is going rampant in the city, stealing valuables by breaking open the windows of parked cars. Some days ago, a laptop, iPhone and other valuables were stolen by breaking open the rear window glass from a parked car at Urwa Store in the city. On the same day at around 1.15 pm Rs 40,000 cash and a bag containing documents was stolen by breaking open the window glass of a parked car at Light House Hill Road.
20-03-26 12:02 pm
HK News Staffer
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
20-03-26 03:39 pm
HK News Staffer
ದ.ಕ. ಜಿಲ್ಲೆಯಲ್ಲಿ ಮಾರ್ಚ್ 20ರಂದೇ ಈದುಲ್ ಫಿತರ್ ಹಬ...
19-03-26 11:30 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm