ಬ್ರೇಕಿಂಗ್ ನ್ಯೂಸ್
02-08-21 12:49 pm Mangaluru Correspondent ಕ್ರೈಂ
ಕಾಸರಗೋಡು, ಆ.2: ಮಂಜೇಶ್ವರದ ಹೊಸಂಗಡಿಯಲ್ಲಿರುವ ರಾಜಧಾನಿ ಜುವೆಲ್ಲರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ತೃಶ್ಶೂರು ಕೊಡಂಗಲ್ಲೂರಿನ ಸತ್ಯೇಶ್ ಕೆ.ಪಿ. ಯಾನೆ ಕಿರಣ್ (35) ಬಂಧಿತ ಆರೋಪಿ. ಆರೋಪಿ ವಿರುದ್ಧ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜುಲೈ 26 ರಂದು ನಸುಕಿನ ಜಾವದಲ್ಲಿ ದರೋಡೆ ಕೃತ್ಯ ನಡೆದಿತ್ತು. ಏಳು ಮಂದಿಯ ತಂಡ ಜುವೆಲ್ಲರಿ ಕಾವಲುಗಾರ ಅಬ್ದುಲ್ಲ ಎಂಬವರನ್ನು ಥಳಿಸಿ ಬಳಿಕ ಗೋಣಿಚೀಲದಲ್ಲಿ ಕಟ್ಟಿ ಹಾಕಿ ದರೋಡೆ ಕೃತ್ಯ ನಡೆಸಿದ್ದರು. ಹದಿನೈದು ಕೆಜಿ ಬೆಳ್ಳಿಯ ಆಭರಣ, ನಾಲ್ಕೂವರೆ ಲಕ್ಷ ರೂ. ನಗದು ದರೋಡೆ ಮಾಡಿತ್ತು. ದರೋಡೆಗೆ ಬಳಸಿದ್ದ ಇನ್ನೋವಾ ಕಾರಿನಲ್ಲಿ ಅದೇ ದಿನ ನಸುಕಿನಲ್ಲಿ ತಲಪಾಡಿ ಮೂಲಕ ಉಳ್ಳಾಲ ಪ್ರವೇಶ ಮಾಡುತ್ತಿದ್ದಂತೆ ಪೊಲೀಸರು ತಡೆದಿದ್ದರು. ಆದರೆ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಕಾರನ್ನು ತಪಾಸಣೆ ನಡೆಸಿದಾಗ ಏಳು ಕಿಲೋ ಬೆಳ್ಳಿ ಆಭರಣ ಹಾಗೂ ಎರಡು ಲಕ್ಷ ರೂ. ನಗದು ಪತ್ತೆಯಾಗಿತ್ತು. ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು ಸದ್ಯದಲ್ಲೇ ಬಂಧನ ಆಗಲಿದೆ.
ರಾಜಧಾನಿ ಜುವೆಲ್ಲರ್ಸ್ ದರೋಡೆ ; ಇನ್ನೋವಾ ಕಾರು, ಬೆಳ್ಳಿ ಆಭರಣ ವಶಕ್ಕೆ, ಆರೋಪಿಗಳು ಪರಾರಿ !!
ರಾಜಧಾನಿ ಜುವೆಲ್ಲರಿ ದರೋಡೆ ಕೃತ್ಯದಲ್ಲಿ ಫರಂಗಿಪೇಟೆ ಗೌಸ್ ಗ್ಯಾಂಗ್ ! ಆರೋಪಿಗಳ ಹಿಂದೆ ಬಿದ್ದ ಪೊಲೀಸರು
In connection with the robbery in Rajdhani Jewellery Store at Hosangady, Manjehwar in the district, the investigation team has succeeded in arresting the main accused, The arrested accused happens to be Satyesh K P alias Kiran (35), a resident of Kodangallur, Thrissur. The officials probing the robbery case said that the accused faces several cases filed against him in Kerala, Karnataka and Tamil Nadu.
31-03-25 07:41 pm
Bangalore Correspondent
Yatnal, Lakshmi Hebbalkar, Controversy: ಯತ್ನಾ...
31-03-25 12:24 pm
Areca Nut, Machine Accident, Sirsi: ಅಡಿಕೆ ಸುಲ...
29-03-25 09:19 pm
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
31-03-25 04:07 pm
HK News Desk
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
31-03-25 12:26 pm
Mangalore Correspondent
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm