ಬ್ರೇಕಿಂಗ್ ನ್ಯೂಸ್
24-07-21 12:55 pm Mangalore Correspondent ಕ್ರೈಂ
ಮಂಗಳೂರು, ಜುಲೈ 24: ತನ್ನನ್ನು ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಸಂಪರ್ಕಿಸಿ, ಮನೆ ಮಾಲೀಕನಿಂದಲೇ ಲಕ್ಷಾಂತರ ರೂ. ಎಗರಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಕುಳಾಯಿಯಲ್ಲಿ ಫ್ಲ್ಯಾಟ್ ಹೊಂದಿರುವ ವ್ಯಕ್ತಿಯೊಬ್ಬರು ಮ್ಯಾಜಿಕ್ ಬ್ರಿಕ್ ಎನ್ನುವ ವೆಬ್ಸೈಟ್ನಲ್ಲಿ ಫ್ಲಾಟ್ ಬಾಡಿಗೆ ನೀಡುವುದಾಗಿ ಜಾಹಿರಾತು ಹಾಕಿದ್ದರು. ಇದನ್ನು ನೋಡಿದ ಅಂಕಿತ್ ವಿಜಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಜು.20 ರಂದು ಕರೆ ಮಾಡಿದ್ದು ಸೈನಿಕ ವೃತ್ತಿಯಲ್ಲಿದ್ದು ಪ್ರಸ್ತುತ ಅಹಮದಾಬಾದ್ನಲ್ಲಿ ಕರ್ತವ್ಯದಲ್ಲಿದ್ದೇನೆ. ಈಗ ಮಂಗಳೂರಿಗೆ ವರ್ಗಾವಣೆಯಾಗಿದ್ದೇನೆ. ತನಗೆ ಕುಳಾಯಿಯಲ್ಲಿರುವ ಫ್ಲಾಟ್ ಬಾಡಿಗೆಗೆ ಬೇಕೆಂದು ತಿಳಿಸಿ ಮಿಲಿಟರಿ ಸಮವಸ್ತ್ರದಲ್ಲಿರುವ ತನ್ನ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ಅನ್ನು ವಾಟ್ಸಪ್ ಮಾಡಿದ್ದ. ಬಳಿಕ ಮನೆಯ ಫೋಟೊಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದಾನೆ.

ಅದರಂತೆ ಫ್ಲಾಟ್ನ ಭಾವಚಿತ್ರವನ್ನು ಕಳುಹಿಸಿದ್ದು, ಜು.20ರಂದು ಆರೋಪಿ ಕರೆಮಾಡಿ ಮನೆಯವರಿಗೆ ಫ್ಲ್ಯಾಟ್ ಇಷ್ಟವಾಗಿದ್ದು ಫ್ಲಾಟ್ ಬಾಡಿಗೆಗೆ ನೀಡುವಂತೆ ತಿಳಿಸಿದ್ದಾನೆ. ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಹಾಗೂ 25 ಸಾವಿರ ರೂ. ಡೆಪಾಸಿಡ್ ಬಗ್ಗೆ ತಿಳಿಸಿದ್ದರು. ಆರೋಪಿ ವ್ಯಕ್ತಿ ಮುಂಗಡ ಹಣವನ್ನು ಮೇಲಾಧಿಕಾರಿಯ ಮೂಲಕ ಪಾವತಿಸುವುದಾಗಿ ತಿಳಿಸಿ ಅಕೌಂಟ್ ಮಾಹಿತಿ ಪಡೆದಿದ್ದ.
ಬಳಿಕ ಆರೋಪಿ ಕಡೆಯಿಂದ ಫ್ಲ್ಯಾಟ್ ಮಾಲೀಕರಿಗೆ 50 ರೂ. ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಬಂದಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಮನೆ ಮಾಲೀಕರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2,23,500 ರೂ. ಖಾಲಿಯಾಗಿದೆ. ಈ ಹಣವನ್ನು ಆರೋಪಿಯೇ ಆತನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಮನೆ ಮಾಲೀಕ ವ್ಯಕ್ತಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Flat house owner cheated in the name of Indian Army soldier lakhs of the amount lost case filed. A case has been registered at the cybercrime police station in Mangalore.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm