ಬ್ರೇಕಿಂಗ್ ನ್ಯೂಸ್
12-07-21 05:45 pm Headline Karnataka News Network ಕ್ರೈಂ
ಕಣ್ಣೂರು, ಜುಲೈ 12: 40 ವರ್ಷದ ಮಹಿಳೆಯೊಬ್ಬರನ್ನು ಲಾಡ್ಜ್ ನಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಬೀಯರ್ ಬಾಟಲಿಗಳಿಂದ ಗುಪ್ತಾಂಗಕ್ಕೆ ತುರುಕಿಸಿ ಹಲ್ಲೆ ನಡೆಸಿರುವ ಪೈಶಾಚಿಕ ಘಟನೆ ತಮಿಳುನಾಡಿನ ಪಳನಿಯಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆ ಮತ್ತು ಆಕೆಯ ಗಂಡ ತೀರ್ಥಕ್ಷೇತ್ರ ದರ್ಶನಕ್ಕಾಗಿ ಜೂನ್ 19ರಂದು ಪಳನಿಗೆ ತೆರಳಿದ್ದು ಅಲ್ಲಿನ ಲಾಡ್ಜ್ ಒಂದರಲ್ಲಿ ತಂಗಿದ್ದರು. ಈ ವೇಳೆ, ಗಂಡ ಆಹಾರ ತರುವುದಕ್ಕಾಗಿ ಹೊರಗೆ ಹೋಗಿದ್ದ ವೇಳೆ ಮಹಿಳೆಯ ಮೇಲೆರಗಿದ ಕಿರಾತಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅದರಲ್ಲಿ ಲಾಡ್ಜ್ ಮ್ಯಾನೇಜರ್ ಕೂಡ ಸೇರಿದ್ದಾನೆ. ಬಳಿಕ ಗಂಡ ಮರಳಿದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾರೆ.
ಮೂರು ದಿನಗಳ ಬಳಿಕ ದಂಪತಿ ಕೇರಳದ ಕಣ್ಣೂರಿಗೆ ಆಗಮಿಸಿದ್ದು, ಇಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಕಣ್ಣೂರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಮಹಿಳೆ ಬಳಿಕ ತನಗಾದ ಅನ್ಯಾಯದ ಬಗ್ಗೆ ಕೇರಳ ಡಿಜಿಪಿಗೆ ದೂರು ನೀಡಿದ್ದು, ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ. ಎರಡು ವಾರದ ಬಳಿಕ ಮಹಿಳೆಯನ್ನು ಕಣ್ಣೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ನಡೆಸಲಾಗಿದೆ. ಆದರೆ, ಪರೀಕ್ಷೆ ವೇಳೆ ಹಲ್ಲೆ ನಡೆಸಿರುವುದಕ್ಕೆ ಸಾಕ್ಷ್ಯವಾಗಿ ಯಾವುದೇ ಗುರುತು ಕಂಡುಬಂದಿಲ್ಲ. ಹಲವು ದಿನಗಳು ಆಗಿರುವುದರಿಂದ ಹಲ್ಲೆ ಗಾಯ ಮಾಸಿರಬಹುದು. ಈ ಬಗ್ಗೆ ಪಳನಿ ಪೊಲೀಸರಿಗೆ ತಿಳಿಸಿದ್ದು ಮಾಹಿತಿ ಸಂಗ್ರಹಿಸಿದ್ದೇವೆ ಎಂದು ತಲಶ್ಶೇರಿ ಡಿವೈಎಸ್ಪಿ ಮೂಸಾ ವಲ್ಲಿಕಾಡನ್ ತಿಳಿಸಿದ್ದಾರೆ.
ಪಳನಿ ಪೊಲೀಸರಿಗೆ ಈ ಮಾಹಿತಿ ನೀಡಲಾಗಿದ್ದು, ಅವರು ಅಲ್ಲಿನ ಹೊಟೇಲ್ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಜೂನ್ 19ರಂದು ಹೊಟೇಲಿಗೆ ಬಂದಿರುವುದು ದಾಖಲಾಗಿದ್ದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ಕಣ್ಣೂರಿನ ಪೆರಿಯಾರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಂಪತಿ ಮೂಲತಃ ತಮಿಳುನಾಡಿನವರೇ ಆಗಿದ್ದು, ಉದ್ಯೋಗ ನಿಮಿತ್ತ ಕಣ್ಣೂರಿನಲ್ಲಿ ನೆಲೆಸಿದ್ದರು. ದೇವಸ್ಥಾನಕ್ಕೆಂದು ಪಳನಿಗೆ ತೆರಳಿದ್ದ ವೇಳೆ ಕಾಮುಕರು ಕೃತ್ಯ ಎಸಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.
A 40-year-old woman from Kannur district has lodged a complaint with Kerala’s Director-General of Police that she was gang-raped by some persons at a lodge in Palani in Dindigul district last month. But the Tamil Nadu police said no such complaint had been received in Palani.
02-07-25 02:21 pm
HK News Desk
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ; ಸಿಬಿಐ ತನಿಖೆಗೆ...
01-07-25 10:52 pm
ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯ...
01-07-25 09:57 pm
Stampede, IPS Officer Vikas Kumar Suspension:...
01-07-25 04:19 pm
Sri Rama Sene, Belagavi, SP: ಶ್ರೀರಾಮಸೇನೆ ಸೇನೆ...
30-06-25 10:30 pm
02-07-25 05:31 pm
HK News Desk
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
02-07-25 11:39 am
Mangalore Correspondent
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
02-07-25 12:24 pm
Mangalore Correspondent
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm