ಬ್ರೇಕಿಂಗ್ ನ್ಯೂಸ್
05-07-21 01:12 pm Mangalore Correspondent ಕ್ರೈಂ
ಮಂಗಳೂರು, ಜುಲೈ 5: ನಗರದ ಬಲ್ಮಠದಲ್ಲಿರುವ ಮೇಪಲ್ ಶೋರೂಂಗೆ ಕಳ್ಳರು ನುಗ್ಗಿದ್ದು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್, ಏಪಲ್ ಫೋನ್ ಗಳನ್ನು ಕಳವು ಮಾಡಿದ್ದಾರೆ.
ಶನಿವಾರ, ಭಾನುವಾರ ವೀಕೆಂಡ್ ಲಾಕ್ಡೌನ್ ಇದ್ದುದರಿಂದ ಇಂದು ಬೆಳಗ್ಗೆ ಶೋರೂಂ ಓಪನ್ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹಿಂಭಾಗದ ಕಿಟಕಿಯನ್ನು ಒಡೆದು ಕಳ್ಳರು ನುಗ್ಗಿದ್ದು ಒಳಭಾಗದಲ್ಲಿ ತಡಕಾಡಿ ಲಕ್ಷಕ್ಕೂ ಹೆಚ್ಚು ಬೆಲೆಯ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಶೋರೂಂ ಸಿಬಂದಿ ಇಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿದ್ದು ಕಂಡುಬಂದಿದ್ದು ಕದ್ರಿ ಪೊಲೀಸರು ಬಂದು ತನಿಖೆ, ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಕೃತ್ಯದ ಬಳಿಕ ಶೋರೂಂ ಒಳಗಿದ್ದ ಸಿಸಿಟಿವಿಯ ಡಿವಿಆರ್ ಎತ್ತಿಕೊಂಡು ಹೋಗಿದ್ದಾರೆ. ಹೀಗಾಗಿ ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿರುವ ಮಂದಿಯೇ ಆಗಿರಬೇಕು ಎಂಬ ಸಂಶಯ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಇರುವ ಏಕೈಕ ಏಪಲ್, ಐಫೋನ್ ಡೀಲರ್ ಶಾಪ್ ಇದಾಗಿದ್ದು ಅತ್ಯಧಿಕ ಬೆಲೆಯ ಮೊಬೈಲ್ ಗಳು ಮಾತ್ರ ಇಲ್ಲಿರುತ್ತವೆ. ಐಫೋನ್ ಸಾಧಾರಣ ಮಟ್ಟದ್ದು ಕನಿಷ್ಠ ಅಂದ್ರೆ 70 ಸಾವಿರ ರೂ. ಮೌಲ್ಯ ಇದ್ದು ಒಂದೂವರೆ ಲಕ್ಷದ ವರೆಗೂ ಬೆಲೆಯದ್ದಿದೆ. ಹೀಗಾಗಿ ನೂರಕ್ಕೂ ಹೆಚ್ಚು ಮೊಬೈಲ್ ಕಳವಾಗಿದ್ದರೂ ಅದರ ಮೌಲ್ಯ 50ರಿಂದ 70 ಲಕ್ಷ ಆಗುತ್ತದೆ. ಈಗ ಎಷ್ಟು ಮೊಬೈಲ್ ಕಳವಾಗಿದೆ ಎಂದು ಸರಿಯಾದ ಲೆಕ್ಕ ಸಿಕ್ಕಿಲ್ಲ.
ಐದು ವರ್ಷಗಳ ಹಿಂದೆಯೂ ಕಳವು ನಡೆದಿತ್ತು !
2015 ರ ಆಗಸ್ಟ್ ನಲ್ಲಿ ಇದೇ ಏಪಲ್ ಶೋರೂಂನಿಂದ ಭಾರೀ ಪ್ರಮಾಣದ ಕಳವು ಆಗಿತ್ತು. ಅಂದು 20 ಲಕ್ಷದ ಮೊಬೈಲ್ ಗಳು ಕಳವಾಗಿದ್ದವು. ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಬಳಿಕ ನೇಪಾಳ ಮೂಲದ ನಾಲ್ವರನ್ನು ಬಂಧಿಸಿದ್ದರು. ಶೋರೂಮಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದವರೇ ಕೃತ್ಯಕ್ಕೆ ಸಾಥ್ ನೀಡಿದ್ದು ಬೆಳಕಿಗೆ ಬಂದಿತ್ತು.
Robbery in Balmatta Maple iPhone Showroom 50 lakhs worth iPhone Mobile phones stolen. Robbers flee away with CCTV Hard drive. In 2015 more than 20 lakhs worth of Mobile phones were stolen. Kadri Police and CCB have are now investigating the case.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm