ಬ್ರೇಕಿಂಗ್ ನ್ಯೂಸ್
29-06-21 04:56 pm Bangalore Correspondent ಕ್ರೈಂ
ಬೆಂಗಳೂರು, ಜೂ. 29: ನಿವೃತ್ತ ಐಎಎಸ್ ಅಧಿಕಾರಿಯೊಬ್ಬರಿಗೆ ಮನೆ ಕೆಲಸಗಾರನೇ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ವಂತ ಮಗನಂತೆ ಬಿಂಬಿಸಿಕೊಂಡಿದ್ದ ಕೆಲಸಗಾರ ಐಎಎಸ್ ಅಧಿಕಾರಿಯ ಚೆಕ್ಗಳನ್ನು ಕದ್ದು ಹದಿನಾಲ್ಕು ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದಾನೆ.
ಹೌದು ಇದು ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಅವರ ಕಥೆ. ಕೋರಮಂಗಲದಲ್ಲಿ ನೆಲೆಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಅವರು ಸೆಕ್ಯುರಿಟಿ ಏಜೆನ್ಸಿ ಮೂಲಕ ಕಾಸಿಂ ಸಾಬ್ ಎಂಬ ಕೆಲಸಗಾರನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಸ್ವಂತ ಮಗನಂತೆ ಬಿಂಬಿಸಿಕೊಂಡಿದ್ದ ಕಾಸಿಂಸಾಬ್ಗೆ ಸಂಬಳ ಜತೆಗೆ ಹೆಚ್ಚುವರಿ ಹಣ ಕೂಡ ನೀಡುತ್ತಿದ್ದರು. ವಿಜಯ್ ಅವರಿಗೆ ಹಣ ಬೇಕೆಂದಾಗ ಕಾಸಿಂ ಸಾಬ್ ತಂದು ಕೊಡುತ್ತಿದ್ದ. ಕಾಸಿಂ ಸಾಬ್ನನ್ನು ವಿಜಯ್ ಕೂಡ ನಂಬಿದ್ದರು.
ಇತ್ತೀಚೆಗೆ ತನ್ನ ಅಣ್ಣನ ಮದುವೆಗೆಂದು ಊರಿಗೆ ಹೋಗಿರುವ ಕಾಸಿಂ ಸಾಬ್ ವಾಪಸು ಬಂದಿಲ್ಲ. ಒಂದು ವಾರ ಕಳೆದರೂ ವಾಪಸು ಬಂದಿಲ್ಲ. ಅನುಮಾನಗೊಂಡು ಸೆಕ್ಯುರಿಟಿ ಕಂಪನಿಯಲ್ಲಿ ವಿಚಾರಿಸಿದಾಗ ಆತ ಕೆಲಸ ಬಿಟ್ಟಿರುವ ವಿಷಯ ಗೊತ್ತಾಗಿದೆ. ಅನುಮಾನಗೊಂಡ ನಿವೃತ್ತ ಐಎಎಸ್ ಅಧಿಕಾರಿ ಬ್ಯಾಂಕ್ಗೆ ಹೋಗಿ ಪರಿಶೀಲನೆ ನಡೆಸಿದಾಗ ಬ್ಯಾಂಕ್ ನಲ್ಲಿದ್ದ ಹದಿನಾಲ್ಕು ಲಕ್ಷ ರೂ. ಹಣ ಲಪಟಾಯಿಸಿರುವುದು ಬೆಳಕಿಗ ಬಂದಿದ್ದು, ಕೋರಮಂಗಲ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
House Maid runs aways with 14 Lakhs Cheque from Retired DC house in Bangalore. A case has been registered at the Koramangala Police Station.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm