ಬ್ರೇಕಿಂಗ್ ನ್ಯೂಸ್
24-06-21 10:01 pm Satish, Bengaluru ಕ್ರೈಂ
ಬೆಂಗಳೂರು, ಜೂನ್ 24: ಬರ್ಬರವಾಗಿ ಕೊಲೆಯಾಗಿರುವ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ಕೊಲೆಗೈದವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಮೂಲಗಳ ಪ್ರಕಾರ, ಆಕೆಯ ಜೊತೆಗೆ ಸದಾ ಇರುತ್ತಿದ್ದ ಬಾಡಿಗಾರ್ಡ್ ಗಳೇ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ರೇಖಾ ಅವರನ್ನು 17 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಹೆಣ್ಣು ಅನ್ನೋದನ್ನೂ ನೋಡದೆ ಮನಸೋ ಇಚ್ಚೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ದಿನಾ ಬೆಳಗಾದ್ರೆ ರೇಖಾ ಜೊತೆಗೇ ಇರುತ್ತಿದ್ದ ಯುವಕರಾದ ಪೀಟರ್, ಸೂರ್ಯ , ಸ್ಟೀಫನ್ ಎಂಬವರೇ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಸುಪಾರಿ ಕೊಟ್ಟು ಕೊಲ್ಲಿಸಿದ್ದಾರೆ ಎನ್ನುವ ಅನುಮಾನ ಪೊಲೀಸರದ್ದು. ಕಳೆದ ಬಾರಿ 2018 ರ ಫೆಬ್ರವರಿಯಲ್ಲಿ ಕದಿರೇಶ್ ಕೊಲೆಯಾದಾಗ ಎದುರಾಳಿ ಗ್ಯಾಂಗಿನ ಒಬ್ಬನನ್ನು ಪೀಟರ್ ತನ್ನ ಸಹಚರರ ಜೊತೆ ಸೇರಿ ಕೊಲೆಗೈದಿದ್ದ. ಕೊಲೆ ಕೇಸಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಕಾಟನ್ ಪೇಟೆ ಠಾಣೆಯಲ್ಲಿ ಪೀಟರ್ ವಿರುದ್ಧ ರೌಡಿಶೀಟ್ ಓಪನ್ ಮಾಡಲಾಗಿತ್ತು.
ಇದಲ್ಲದೆ, ಸದಾ ರೇಖಾ ಜೊತೆಗೇ ಇರುತ್ತಿದ್ದ ಪೀಟರ್ ಮತ್ತು ಸೂರ್ಯನ ಮನೆಯೂ ರೇಖಾ ಮನೆ ಬಳಿಯಲ್ಲೇ ಇತ್ತು. ಸ್ಟೀಫನ್ ಕೂಡ ಅದೇ ಏರಿಯಾದವನಾಗಿದ್ದು ದಿನವೂ
ರೇಖಾ ಕದಿರೇಶ್ ರಕ್ಷಣೆಗೆ ಇರ್ತಿದ್ರು. ಭಕ್ಷಿ ಗಾರ್ಡನ್ ನ ರೇಖಾ ಕದಿರೇಶ್ ಕಚೇರಿಯ ಎದುರಿನ ಅರಳೀಮರದ ಕಟ್ಟೆಯ ಮೇಲೆ ಪ್ರತಿದಿನ ಕುಳಿತು ಪೀಟರ್ ಎಲ್ಲವನ್ನೂ ವಾಚ್ ಮಾಡ್ತಿದ್ದ ಕೆಲಸ ಮಾಡುತ್ತಿದ್ದ.
ಆದರೆ, ಇದೀಗ ರೇಖಾಳ ಆಪ್ತ ಬಾಡಿಗಾರ್ಡ್ ಗಳಿಗೇ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಹೀಗಾಗಿ ಕೊಲೆಗೆ ಸುಪಾರಿ ಕೊಟ್ಟವರು ಯಾರು ಎನ್ನುವ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಪೀಟರ್, ಸ್ಟೀಫನ್ ಮತ್ತು ಸೂರ್ಯ ಜೊತೆಯಾಗಿ ಕೊಲೆಗೈದಿರುವ ಮಾಹಿತಿ ಹಿನ್ನೆಲೆಯಲ್ಲಿ ತನಿಖೆಗೆ ವಿಶೇಷ ತಂಡ ಫೀಲ್ಡಿಗೆ ಇಳಿದಿದೆ.
ರಾಜಕೀಯ ಕಾರಣದ ಜೊತೆಗೆ ಕುಟುಂಬ ಕಲಹ, ರಾಜಕೀಯ ವಿರೋಧಿಗಳು ಮತ್ತು ವಿರೋಧಿ ರೌಡಿಗಳ ದ್ವೇಷ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕುಟುಂಬ ಸದಸ್ಯರು ಮತ್ತು ರಾಜಕೀಯ ವಿರೋಧಿಗಳ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.
ಸಿಎಂ ಯಡಿಯೂರಪ್ಪ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿಕೆ ನೀಡಿರುವುದರಿಂದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಜಿ ಕಾರ್ಪೊರೇಟರ್ ಹತ್ಯೆ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾಗಿ ತಿಳಿಸಿದ್ದಾರೆ.
Peter and Surya who were said to be the Bodygaurds of BBMP councillor Rekha Kadiresh are the prime suspect of the Police in the brutal murder that took place in Bengaluru. A financial dispute is said to be the reason as per sources.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 04:02 pm
Mangalore Correspondent
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm