ಬ್ರೇಕಿಂಗ್ ನ್ಯೂಸ್
24-06-21 02:00 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 24:ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಗಾಳಿಪಟ ದಾರ ಸಿಕ್ಕಿಕೊಂಡು ಕತ್ತು ಸೀಳಿರುವ ಘಟನೆ ಆಡುಗೋಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಆಸ್ಪತ್ರೆಯಿಂದ ವಿಡಿಯೋ ಮಾಡುವ ಮೂಲಕ ಯುವಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇನ್ನೇನು ಕುತ್ತಿಗೆ ಸೀಳಿ ತಲೆ ಬೇರ್ಪಡಬೇಕಿತ್ತು. ಚಾಣಾಕ್ಷತೆ ಮೆರೆದು ಜೀವ ಉಳಿಸಿಕೊಂಡಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ವಿಡಿಯೋ ಮಾಡಿದ್ದು, ಎಲ್ಲರಿಗೂ ನಮಸ್ಕಾರ, ನಾನು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಹೋಗುತ್ತಿದ್ದೆ. ಆಡುಗೋಡಿ ಪೊಲೀಸ್ ಠಾಣೆ ಮುಂದೆ ಹೋಗುತ್ತಿದ್ದೆ. ಗಾಳಿಪಟದ ದಾರವೊಂದು ಕುತ್ತಿಗೆಗೆ ಸಿಕ್ಕಿದೆ. ಕೂಡಲೇ ಎಚ್ಚೆತ್ತು ಕೈಯಿನಿಂದ ದಾರವನ್ನು ಎಳೆದೆ. ಅದರಿಂದ ನನ್ನ ಎರಡೂ ಬೆರಳು ತುಂಡಾಗುವಷ್ಟು ದಾರ ಕತ್ತರಿಸಿದೆ. ನಾನು ಸರ್ಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವುದು ಇಷ್ಟೇ. ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧ ಮಾಡಿ. ಎಷ್ಟೋ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ. ಇದರ ಜತೆಗೆ ಇದೀಗ ಜನರು ಜೀವ ಕಳೆದುಕೊಳ್ಳುವಂತಾಗಿದೆ. ನಾನು ಸ್ವಲ್ಪ ಯಾಮಾರಿದ್ದರೆ ನನ್ನ ರುಂಡ ನೋಡಬೇಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧ ಮಾಡಿ ಎಂದು ಆತ ಮನವಿ ಮಾಡಿಕೊಂಡಿದ್ದಾನೆ. ಅಂದಹಾಗೆ ಈ ವ್ಯಕ್ತಿಯ ವಿವರ ಬಹಿರಂಗ ಪಡಿಸಿಲ್ಲ. ಆದರೆ ಈತ ಮಾಡಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಗಾಳಿಪಟದ ದಾರಗಳು ಪಕ್ಷಿಗಳ ಜೀವಕ್ಕೂ ಅಪಾಯ ತಂದೊಡ್ಡಿವೆ. ಇತ್ತೀಚೆಗೆ ದಾರಕ್ಕೆ ನವಿಲು ಸಿಲುಕಿ ಮೂರು ದಿನ ಒದ್ದಾಡಿತ್ತು. ಬಳಿಕ ವನ್ಯ ಜೀವಿ ಸಂರಕ್ಷಕರು ಅದನ್ನು ರಕ್ಷಿಸಿದ್ದರು. ಅನೇಕ ಹದ್ದುಗಳು ಬೆಂಗಳೂರಿನಲ್ಲಿ ಜೀವ ಕಳೆದುಕೊಂಡಿವೆ. ಪಾರಿವಾಳಗಳೂ ಕೂಡ ಗಾಳಿಪಟ ದಾರಕ್ಕೆ ಸಿಲುಕಿ ಒದ್ದಾಡಿ ಜೀವ ಕಳೆದುಕೊಂಡಿವೆ. ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಂತನೆ ಮಾಡಬೇಕಿದೆ.
A Two-wheeler rider was seriously injured when his neck was cut by a thread used to fly kites. The incident took place in Bangalore. The video of this has gone viral on social media.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
11-05-26 02:14 pm
HK News Staffer
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
11-05-26 01:08 pm
HK News Staffer
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm