ಬ್ರೇಕಿಂಗ್ ನ್ಯೂಸ್
19-06-21 02:12 pm Headline Karnataka News Network ಕ್ರೈಂ
ಮಂಡ್ಯ, ಜೂನ್ 19: ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರ ಪಿಎ ಅಂತ ಹೇಳಿಕೊಂಡು ಯುವಕನೊಬ್ಬ ಧರ್ಮಸ್ಥಳದ ಕೆಎಸ್ಆರ್ಟಿಸಿ ಚಾಲಕನಿಂದ ಹಣ ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಬಸ್ ಚಾಲಕನಾಗಿರುವ, ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಪುರುಷೋತ್ತಮ್ ಎಂಬಾತ ವಂಚನೆಗೊಳಗಾದ ವ್ಯಕ್ತಿ. ಧರ್ಮಸ್ಥಳ ಡಿಪೋದಲ್ಲಿ ಚಾಲಕನಾಗಿದ್ದ ವೇಳೆ ಶೈಲೇಶ್ ಎಂಬ ಯುವಕ ಪರಿಚಯವಾಗಿದ್ದ. ಧರ್ಮಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗಿದ್ದು ಸಿಎಂ ಯಡ್ಡಿಯೂರಪ್ಪ ನನಗೆ ತುಂಬಾ ಹತ್ತಿರದವರು ಅಂತ ತನ್ನ ಮೊಬೈಲಿನಲ್ಲಿ ಫೋಟೋ ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ಯಡ್ಡಿಯೂರಪ್ಪ ಚುನಾವಣೆ ಸಂದರ್ಭ ಹಣ ಹಂಚಲು ನನಗೇ ಹಣ ಕೊಟ್ಟಿದ್ದರು ಅಂತ ಕಂತೆ ಕಂತೆ ನೋಟಿನ ಫೋಟೋವನ್ನೂ ತೋರಿಸಿ ಶೈಲೇಶ್ ನಂಬಿಕೆ ಹುಟ್ಟಿಸಿದ್ದಾನೆ. ಮುಖ್ಯಮಂತ್ರಿ ಬಳಿ ಹೇಳಿಸಿ ಏನು ಬೇಕಾದ್ರೂ ಕೆಲಸ ಮಾಡಿಸ್ತೀನಿ ಅಂತ ಹೇಳಿದ್ದಾನೆ.

ಇದನ್ನು ನಂಬಿದ ಚಾಲಕ ಪುರುಷೋತ್ತಮ್, ತನ್ನನ್ನು ಧರ್ಮಸ್ಥಳ ಡಿಪೋದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಿಸಲು ಹೇಳಿದ್ದಾನೆ. ನಿನ್ನ ಕೆಲಸ ಮಾಡಿಕೊಡುವುದಾಗಿ ಹೇಳಿದ ಶೈಲೇಶ್, ಅದಕ್ಕೆ ಅಧಿಕಾರಿಗಳಿಗೆ ಒಂದಿಷ್ಟು ಕೊಡಬೇಕಾಗುತ್ತೆ ಅಂತ ಹೇಳಿ ಹಣದ ಬೇಡಿಕೆ ಇಟ್ಟಿದ್ದಾನೆ. ಆತನ ಮಾತನ್ನು ನಂಬಿದ ಚಾಲಕ ಪುರುಷೋತ್ತಮ್, 98 ಸಾವಿರ ರೂ. ಹಣವನ್ನು ನೀಡಿದ್ದಾನೆ. ಆದರೆ, ಶೈಲೇಶ್ ಹಣ ಪಡೆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಹಣ ಕಳೆದುಕೊಂಡ ಚಾಲಕ ಪುರುಷೋತ್ತಮ್ ಈ ಬಗ್ಗೆ ಮಂಡ್ಯದಲ್ಲಿ ದೂರು ದಾಖಲಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು ಆರೋಪಿಯ ಹುಡುಕಾಟ ನಡೆದಿದೆ.
Mandya Man poses himself as CM Yediyurappas PA cheats KSRTC Driver telling him that he would make his transfer from Dharmasthala Depo to Mandya and flees with Rs. 98,000. A case has been registered at the Mandya Police Station.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm