ಬ್ರೇಕಿಂಗ್ ನ್ಯೂಸ್
29-04-21 04:25 pm Headline Karnataka News Network ಕ್ರೈಂ
ಬೆಂಗಳೂರು, ಎ.29: ಪ್ರೀತಿ, ಪ್ರೇಮ, ಕಾಮಕ್ಕೆ ಅಡ್ಡ ಬಂದರೆ, ಕೆಲವೊಮ್ಮೆ ಏನೆಲ್ಲಾ ಅನಾಹುತಗಳಾಗುತ್ತೆ, ಸಂಬಂಧಗಳನ್ನೇ ನೋಡದೆ ದುರಂತವನ್ನೇ ತಂದುಕೊಳ್ಳುತ್ತಾರೆ ಅನ್ನೋದಕ್ಕೆ ಈ ಘಟನೆ ನಿದರ್ಶನ. ಹುಬ್ಬಳ್ಳಿ ಪೊಲೀಸರು ಶಾನ್ಯಾ ಕಾಟ್ವೆ ಎನ್ನುವ ಕನ್ನಡದ ಚಿತ್ರನಟಿಯನ್ನು ಬಂಧಿಸಿದ್ದು ಸೋದರನ ಕೊಲೆಗೆ ಆಕೆಯೇ ಸಂಚು ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎ.9ರಂದು ರಾಕೇಶ್ ಕಾಟ್ವೆ ಎಂಬ 32 ವರ್ಷದ ಯುವಕನನ್ನು ಕೊಲೆಗೈದು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ್ ಎಂಬಲ್ಲಿ ದೇಹವನ್ನು ತುಂಡರಿಸಿ ಎಸೆಯಲಾಗಿತ್ತು. ಭೀಭತ್ಸವಾಗಿ ಕೊಲೆಯಾದ ವಿಚಾರ ತಿಳಿಯುತ್ತಲೇ ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರು. ನಿಯಾಜ್ ಅಹ್ಮದ್ ಕಾಟಿಗೇರ್ (21), ತೌಸಿಫ್ ಚನ್ನಾಪುರ್(21), ಅಲ್ತಾಫ್ ಮುಲ್ಲಾ (24) ಮತ್ತು ಅಮಾನ್ ಗಿರಾಣಿವಾಲೆ(19) ಎಂಬ ನಾಲ್ವರು ಯುವಕರು ಬಂಧಿತರು.
ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆಯ ನೈಜ ಕತೆ ಹೊರಬಿದ್ದಿದೆ. ಚಿತ್ರನಟಿಯಾಗಿದ್ದ ಶಾನ್ಯಾ ಕಾಟ್ವೆ ಮತ್ತು ಆರೋಪಿಗಳಲ್ಲಿ ಒಬ್ಬನಾದ ನಿಯಾಜ್ ಅಹ್ಮದ್ ನಡುವೆ ಲವ್ ಇತ್ತು. ತಂಗಿಯ ಸಂಬಂಧಕ್ಕೆ ಸೋದರ ಅಡ್ಡ ಬಂದಿದ್ದಲ್ಲದೆ, ಆರೋಪಿ ನಿಯಾಜ್ ಗೆ ವಾರ್ನ್ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಗೆಳೆಯರು ಮತ್ತು ಶಾನ್ಯಾ ಜೊತೆ ಸೇರಿ ರಾಕೇಶ್ ನನ್ನು ಮುಗಿಸಲು ನಿಯಾಜ್ ಪ್ಲಾನ್ ಹಾಕಿದ್ದ.

ಎಪ್ರಿಲ್ 9ರಂದು ಹುಬ್ಬಳ್ಳಿಯ ತನ್ನ ಮನೆಯಲ್ಲಿದ್ದ ರಾಕೇಶ್ ನನ್ನು ಉಪಾಯದಿಂದ ಕರೆದೊಯ್ದಿದ್ದ ಗೆಳೆಯರು ಕೊಲೆಗೈದು ದೇಹದ ಭಾಗಗಳನ್ನು ಸಿಗಿದು ಹಲವೆಡೆ ಬಿಸಾಕಿದ್ದರು. ಹುಬ್ಬಳ್ಳಿ- ಗದಗ ರಸ್ತೆಯಲ್ಲೂ ದೇಹದ ಭಾಗಗಳು ಪತ್ತೆಯಾಗಿದ್ದವು. ಆನಂತರ ದೇವರ ಗುಡಿಹಾಳದ ಕಾಡಿನಲ್ಲೂ ಕೈ, ಕಾಲುಗಳ ತುಂಡುಗಳು ಪತ್ತೆಯಾಗಿದ್ದವು. ಇದೇ ಸಂದರ್ಭದಲ್ಲಿ ಶಾನ್ಯಾ ಕಾಟ್ವೆ ತನ್ನ ಚಿತ್ರದ ಶೂಟಿಂಗ್ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದಳು. ಒಂದು ಘಂಟೆಯ ಕತೆ ಎನ್ನುವ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಾರಣ ಹುಬ್ಬಳ್ಳಿಯಲ್ಲೇ ನೆಲೆಸಿದ್ದಳು. ಇದೇ ಸಂದರ್ಭದಲ್ಲಿ ಸೋದರನ ಕೊಲೆಗೆ ಸ್ಕೆಚ್ ಹಾಕಿದ್ದಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಾಡೆಲ್ ಆಗಿದ್ದ ಶಾನ್ಯಾ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದಳು. ಇದಂ ಪ್ರೇಮಂ ಜೀವನಂ ಎನ್ನುವ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಈಗ ಒಂದು ಘಂಟೆಯ ಕತೆ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಅಜಯ್ ರಾಜ್ ಮತ್ತು ಸ್ವಾತಿ ಶರ್ಮಾ ಜೊತೆ ಪಾತ್ರ ಹಂಚಿಕೊಂಡಿದ್ದಳು. ಈಗ ಸೋದರನನ್ನೇ ಕೊಲ್ಲಲು ಸಂಚು ಹೂಡಿದ್ದ ಆರೋಪದಲ್ಲಿ ಚಿತ್ರನಟಿ ಜೈಲು ಕಂಬಿ ಎಣಿಸುತ್ತಿದ್ದಾಳೆ.
Promising Kannada actress Shanaya Katwe and her live-in partner Niyaz allegedly killed her brother and disposed of the body in a jungle here, for objecting to their relationship, police said. The young actress was allegedly in a relationship with a small-time realtor, which her brother opposed, Dharwad Superintendent of Police P Krishnakant said.
19-03-26 05:01 pm
HK News Staffer
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm