ಬ್ರೇಕಿಂಗ್ ನ್ಯೂಸ್
23-04-21 10:11 pm Mangaluru correspondent ಕ್ರೈಂ
ಮಂಗಳೂರು, ಎ.23 : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದೇ ದರೋಡೆ ಹಾಗೂ ವಿರೋಧಿ ಗ್ಯಾಂಗಿನ ರೌಡಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ರೌಡಿಶೀಟರ್ ಆಕಾಶಭವನ ಶರಣ್ನನ್ನು ಮಂಗಳೂರು ಪೊಲೀಸರು ಜೈಲಿನಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಮಾ.17ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ದರೋಡೆ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ರೌಡಿಶೀಟರ್ ಚಂದ್ರಹಾಸ ಪೂಜಾರಿ ಕೂಡ ಒಬ್ಬ. ತನಿಖೆ ವೇಳೆ ಆರೋಪಿ ಚಂದ್ರಹಾಸ, ನಟೋರಿಯಸ್ ರೌಡಿ ಆಕಾಶಭವನ ಶರಣ್ ಸಹಚರನಾಗಿದ್ದು, ಆತನ ಸೂಚನೆಯಂತೆ ವಿರೋಧಿಗಳ ಕೊಲೆಗೈದು ಡಾನ್ ಆಗಲು ಸಂಚು ರೂಪಿಸಿದ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆಕಾಶಭವನ ಶರಣ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಆಕಾಶಭವನ ಶರಣ್ ಸಹಚರರು ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಹಫ್ತಾ ವಸೂಲಿಯಲ್ಲದೆ ದರೋಡೆ ಕೃತ್ಯ ನಡೆಸುತ್ತಿದ್ದರು. ಅಲ್ಲದೆ, ವಿರೋಧಿ ಗ್ಯಾಂಗ್ ಸದಸ್ಯರ ಕೊಲೆಗೆ ಸಂಚು ರೂಪಿಸಿದ್ದರು. ಈ ಮೂಲಕ ತಾವೇ ಡಾನ್ ಆಗಲು ನಿರ್ಧರಿಸಿದ್ದರು. ಇವೆಲ್ಲವನ್ನೂ ಆಕಾಶಭವನ ಶರಣ್ ಜೈಲಿನಿಂದಲೇ ರೂಪಿಸುತ್ತಿರುವುದನ್ನು ಬಂಧಿತರಾಗಿದ್ದ ಆರೋಪಿಗಳು ಬಹಿರಂಗಪಡಿಸಿದ್ದರು. ಆಕಾಶಭವನ ಶರಣ್ ಮೇಲೆ 20 ವಿವಿಧ ಕೇಸ್ಗಳಿದ್ದು, ಬಂಟ್ವಾಳದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣವನ್ನು ಜೈಲಿನಲ್ಲಿದ್ದುಕೊಂಡೇ ಹೆಣೆದಿದ್ದ. ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ಬೆಂಗಳೂರು ಜೈಲು ಸೇರಿದ್ದ. ಈತನನ್ನು ಒಂದು ವಾರ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಜೈಲಿನಿಂದಲೇ ಇಂಟರ್ನೆಟ್ ಕರೆ ಮಾಡುತ್ತಿದ್ದ ರೌಡಿ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆಕಾಶಭವನ ಶರಣ್ ಅಲ್ಲಿಂದಲೇ ಇಂಟರ್ನೆಟ್ ಕರೆ ಮೂಲಕ ಅಪರಾಧ ಕೃತ್ಯಕ್ಕೆ ಸ್ಕೆಚ್ ಹಾಕುತ್ತಿದ್ದುದನ್ನು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆತನ ಭೇಟಿಗೆ ಜೈಲಿಗೆ ತೆರಳುವವರ ಜೊತೆ ತನ್ನ ಕೃತ್ಯ ನಡೆಸುವುದಕ್ಕೆ ಬೇಕಾದ ಸಲಹೆ, ಸೂಚನೆಗಳನ್ನು ನೀಡುತ್ತಿದ್ದ. ಈತ ಜೈಲಿನಲ್ಲಿರುವುದರಿಂದ ಈತನ ಸಹೋದರ ಸಹಚರರೊಂದಿಗೆ ಕೃತ್ಯಕ್ಕೆ ನೆರವಾಗುತ್ತಿದ್ದ ಎಂದು ಕಮಿಷನರ್ ತಿಳಿಸಿದರು.
ರವಿ ಪೂಜಾರಿ ಗ್ಯಾಂಗಿನ ಹಳೆ ರೌಡಿಗಳ ಕೊಲೆಗೆ ಸ್ಕೆಚ್ ; ಬೈಕ್ ರಾಬರಿ ಮಾಡಿ ಸಿಕ್ಕಿಬಿದ್ದ ನಟೋರಿಯಸ್ ಗ್ಯಾಂಗ್ !!
The Mangaluru City Police have taken Notorious Rowdy Sheetter Akash Bhavan into custody in connection to Plotting the Murder of Monkey stand Vijay and Pradeep Mendon.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm