ಬ್ರೇಕಿಂಗ್ ನ್ಯೂಸ್
13-04-21 02:46 pm Headline Karnataka News Network ಕ್ರೈಂ
ನವದೆಹಲಿ, ಎ.13: ಮಹಿಳೆ ಮತ್ತು ಆಕೆಯ ಪತಿ ಜೊತೆಯಾಗಿ ಜನನಿಬಿಡ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆದರೆ, ಅವನಿಗೆ ಅದೇನಾಯ್ತೋ ಏನೋ.. ದಿಢೀರ್ ಆಗಿ ಚಾಕು ಹೊರತೆಗೆದು ಆಕೆಯ ಮೇಲೆ ಯದ್ವಾತದ್ವಾ ಇರಿದಿದ್ದಾನೆ. ಸಾವಿರಾರು ಮಂದಿ ಓಡಾಡುವ ರಸ್ತೆಯಾಗಿದ್ದರಿಂದ ವಾಹನಗಳು ಅದೇ ರಸ್ತೆಯಲ್ಲಿ ಸರಣಿಯಂತೆ ಸಾಗುತ್ತಿದ್ದವು. ಅಕ್ಕಪಕ್ಕದ ಕಟ್ಟಡದಲ್ಲಿ ನಿಂತಿದ್ದ ಜನ ಇದನ್ನು ನೋಡುತ್ತಾ ವಿಡಿಯೋ ಮಾಡಿದ್ದರೇ ವಿನಾ ಯಾರು ಕೂಡ ತಡೆಯಲು ಬರಲಿಲ್ಲ. ಆರೋಪಿ ಇರಿದ ಬಳಿಕ ಏನೂ ಆಗದಂತೆ ನಡೆದು ಹೋಗಿದ್ದಾನೆ.
ಹೌದು.. ಈ ರೀತಿಯ ಭೀಭತ್ತ ಘಟನೆ ನಡೆದಿದ್ದು ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ನಗರದಲ್ಲಿ. ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಶೇಷ ಅಂದ್ರೆ, ಯುವತಿ ರಸ್ತೆಗೆ ಬಿದ್ದು ಸತ್ತ ಬಳಿಕವೂ ಆರೋಪಿ 25 ಬಾರಿ ಚಾಕುವಿನಿಂದ ಯದ್ವಾತದ್ವಾ ಇರಿದಿದ್ದಾನೆ.
ಮೃತ ಯುವತಿಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ನೀಲು ಮೆಹ್ತಾ ಎಂದು ಗುರುತಿಸಲಾಗಿದೆ. ಆರೋಪಿ, ನೀಲುವಿನ ಪತಿಯನ್ನು ಹರೀಶ್ ಮೆಹ್ತಾ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯಾರೇಜ್ ಬ್ಯೂರೋದಲ್ಲಿ ಉದ್ಯೋಗಿ ಆಗಿದ್ದ ಹರೀಶ್ ಮೆಹ್ತಾ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಇಬ್ಬರೂ ಗುಜರಾತಿನ ರಾಜಕೋಟ್ ನಿವಾಸಿಗಳಾಗಿದ್ದು, ದೆಹಲಿಯ ಬುದ್ಧ್ ವಿಹಾರ್ ಫೇಸ್ ಒಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು.
ಪತ್ನಿ ಬಗ್ಗೆ ಶಂಕೆ ಹೊಂದಿದ್ದ ಹರೀಶ್ ಮೆಹ್ತಾ ಈ ಕೃತ್ಯ ಮಾಡಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೋ ಭಾರೀ ವೈರಲ್ ಆಗಿದ್ದು ಪತಿಯೇ ಪತ್ನಿಯನ್ನು ಕೈಯಾರೆ ಭೀಭತ್ಸವಾಗಿ ಇರಿದು ಕೊಲ್ಲುವ ದೃಶ್ಯ ಮನಕಲಕುತ್ತಿದೆ.
A 26-year-old woman was stabbed to death by her husband, 40, at a crowded market place in Delhi's Rohini area on Saturday (April 10) on the suspicion of her having an affair with another person. The accused has been arrested by the Delhi Police.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm