ಬ್ರೇಕಿಂಗ್ ನ್ಯೂಸ್
12-04-21 04:36 pm Headline Karnataka News Network ಕ್ರೈಂ
ಹಾಸನ, ಎ.12: ಮಂಗಳೂರು- ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಇದೆಯೆಂದು ರೇವ್ ಪಾರ್ಟಿ ಮಾಡಲು ಹಾಸನಕ್ಕೆ ತೆರಳಿದ್ದ ನೂರಕ್ಕೂ ಹೆಚ್ಚು ಯುವಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಲೂರು ಠಾಣೆ ವ್ಯಾಪ್ತಿಯ ಹೊಂಗರವಳ್ಳಿ ಗ್ರಾಮದ ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು 120ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮುಂಜಾವಿಗೆ ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದು 50ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಜೊತೆಯಾಗಿಸಿ ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ವಶಕ್ಕೆ ಪಡೆದ ನೂರಕ್ಕೂ ಹೆಚ್ಚು ಮಂದಿಯಲ್ಲಿ ಬಹುತೇಕರು ಮಂಗಳೂರು ಮತ್ತು ಬೆಂಗಳೂರು ಮೂಲದ ಯುವಕ- ಯುವತಿಯರು ಅನ್ನೋ ವಿಚಾರ ಬಯಲಾಗಿದೆ. ಅಲ್ಲದೆ, ಪಾರ್ಟಿಯಲ್ಲಿ ಮದ್ಯ, ಡ್ರಗ್ಸ್, ಗಾಂಜಾ ರೀತಿಯ ಮಾದಕ ದ್ರವ್ಯ ಸೇವಿಸಿದ್ದು ಪತ್ತೆಯಾಗಿದೆ.
ನೈಟ್ ಕರ್ಫ್ಯೂ ಇದ್ದ ಕಾರಣ ಮಂಗಳೂರು, ಬೆಂಗಳೂರಿನ ಯುವಕ- ಯುವತಿಯರು ಪಾರ್ಟಿಗೆಂದು ಸಕಲೇಶಪುರಕ್ಕೆ ಬಂದಿದ್ದರು. ತಾವು ಬಂದಿದ್ದ ವಾಹನಗಳಲ್ಲಿ ಎಮರ್ಜೆನ್ಸಿ ಸ್ಟಿಕ್ಟರ್ ಹಾಕ್ಕೊಂಡು ಪೊಲೀಸರ ಕಣ್ತಪ್ಪಿಸಿ ಬಂದಿದ್ದು ಪತ್ತೆಯಾಗಿದೆ. ರೇವ್ ಪಾರ್ಟಿ ಆಗುತ್ತಿದ್ದಲ್ಲಿಗೆ ಮದ್ಯ ಮತ್ತು ಡ್ರಗ್ಸ್ ಮಾತ್ರೆಗಳನ್ನು ಅಕ್ರಮವಾಗಿ ಪೂರೈಕೆ ಮಾಡಲಾಗಿತ್ತು. ದಾಳಿ ವೇಳೆ ಎಲ್ ಎಸ್ ಡಿ, ಎಂಡಿಎಂಎ ಮಾತ್ರೆಗಳು, ಗಾಂಜಾ ಪತ್ತೆಯಾಗಿದೆ. ಹೋಮ್ ಸ್ಟೇ ಆವರಣದಲ್ಲಿ ನಿಲ್ಲಿಸಲಾಗಿದ್ದ 50ರಷ್ಟು ಟೂ ವೀಲರ್ ಮತ್ತು 20ರಷ್ಟು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕ- ಯುವತಿಯರ ಜೊತೆಗೆ ಹೋಮ್ ಸ್ಟೇ ಮಾಲಕ ಎನ್ನಲಾಗಿರುವ ಗಗನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಎಸ್ಪಿ ಬಿ.ಆರ್. ಗೋಪಿ ಮಾಹಿತಿ ನೀಡಿದ್ದು, ಸುಮಾರು 120 ಮಂದಿಯನ್ನು ನಾವು ವಶಕ್ಕೆ ಪಡೆದಿದ್ದೇವೆ. ಅವರ ಬ್ಲಡ್ ಸ್ಯಾಂಪಲನ್ನೂ ಪಡೆದಿದ್ದು, ಪರೀಕ್ಷೆಗೆ ಒಳಪಡಿಸಿದ್ದೇವೆ,. ಈ ಪೈಕಿ 30 ಶೇಕಡಾ ಮಂದಿ ಬೆಂಗಳೂರಿನವರಾದ್ರೆ, ಉಳಿದವರೆಲ್ಲ ಮಂಗಳೂರಿನ ಮಂದಿ. ಅವರೆಲ್ಲ ಉದ್ಯೋಗಸ್ಥರು. ವಿದ್ಯಾರ್ಥಿಗಳು ಅಲ್ಲ ಎಂದು ಹೇಳಿದ್ದಾರೆ.
ಆನ್ಲೈನ್ ಮೂಲಕವೇ ಪಾರ್ಟಿಗೆ ಬರೋದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕೊನೆ ಕ್ಷಣದ ವರೆಗೂ ಎಲ್ಲಿ ಅನ್ನುವ ಬಗ್ಗೆ ಮಾಹಿತಿ ಕೊಡುವುದಿಲ್ಲ. ಆನ್ ಲೈನ್ ಮೂಲಕ ನಿಗೂಢವಾಗೇ ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಸುತ್ತಾರೆ. ನೈಟ್ ಕರ್ಫ್ಯೂ ಆಗಿರೋದ್ರಿಂದ ಮಂಗಳೂರು, ಬೆಂಗಳೂರಿನಲ್ಲಿ ಪಬ್, ಪಾರ್ಟಿ ಬಂದ್ ಆಗಿದ್ದರಿಂದ ಸಕಲೇಶಪುರಕ್ಕೆ ಬಂದಿದ್ದಾರೆ. ನಾರ್ಕೋಟಿಕ್ ಡ್ರಗ್ ಏಕ್ಟ್ ಪ್ರಕಾರ ಕೇಸು ದಾಖಲಿಸಿದ್ದೇವೆ ಎಂದು ಹಾಸನ ಎಸ್ಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
Over 100 youths have been arrested by the Hassan police in which most of them are from Mangalore and Bangalore. The police have also seized drugs and liquor from the spot. The owner of the homestay has been arrested too.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm