ಬ್ರೇಕಿಂಗ್ ನ್ಯೂಸ್
07-04-21 04:32 pm Headline Karnataka News Network ಕ್ರೈಂ
ಬೆಂಗಳೂರು, ಎ.7: ಗಂಡ- ಹೆಂಡತಿ ಜಗಳದಲ್ಲಿ ತಂದೆಯ ಪರ ನಿಲ್ಲುತ್ತಾಳೆಂಬ ಕೋಪದಲ್ಲಿ ತಾಯಿಯೇ ತನ್ನ ಮೂರು ವರ್ಷದ ಕಂದಮ್ಮನನ್ನು ಕತ್ತು ಹಿಸುಕಿ ಕೊಲೆಗೈದ ಅಮಾನವೀಯ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.
ಮಲ್ಲತಹಳ್ಳಿಯ ಈರಣ್ಣ ಎಂಬವರ ಪುತ್ರಿ ಮೂರು ವರ್ಷದ ವಿನುತಾ ಮೃತ ಮಗು. ಮಗಳನ್ನು ಕೊಂದ ತಾಯಿ ಸುಧಾಳನ್ನು ಪೊಲೀಸರು ಬಂಧಿಸಿದ್ದಾರೆ. ಈರಣ್ಣ ಹಾಗೂ ಸುಧಾ ಮಲ್ಲತಹಳ್ಳಿಯ ಫ್ಲಾಟ್ ಒಂದರಲ್ಲಿ ವಾಸವಿದ್ದರು. ಈರಣ್ಣ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸುಧಾ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದರು. ರಾತ್ರಿ ಮನೆಯಲ್ಲಿ ಟಿವಿ ನೋಡುವ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳವಾಗಿದ್ದು, ವಿನುತಾ ತಂದೆಯ ಪರ ನಿಂತಿದ್ದಾಳೆ.
ತಂದೆ ನ್ಯೂಸ್ ನೋಡುತ್ತಿದ್ದುದಕ್ಕೆ ಮಗಳು ವಿನುತಾ ಕೂಡ ದನಿಗೂಡಿಸಿದ್ದು, ತಂದೆಗೆ ಬೇಕಾದ ಚಾನೆಲ್ ಇಡುವಂತೆ ಹೇಳಿದ್ದಾಳೆ. ಹೀಗೆ ಅನೇಕ ವಿಚಾರದಲ್ಲಿ ಮಗಳು ತಂದೆ ಪರ ನಿಂತಿದ್ದರಿಂದ ಕೋಪಗೊಂಡಿದ್ದ ತಾಯಿ ಸುಧಾ ಮಂಗಳವಾರ ಸಂಜೆ ಮಗಳನ್ನು ಗೋಬಿ ಮಂಚೂರಿ ಕೊಡಿಸುವುದಾಗಿ ಹೇಳಿ ಬೇರೆ ಕಡೆಗೆ ಕರೆದೊಯ್ದಿದ್ದಾಳೆ.
ನಂತರ ನಿರ್ಮಾಣ ಹಂತದ ಕಟ್ಟಡದ ಬಳಿಗೆ ಕರೆದೊಯ್ದು ವೈಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಮಗಳು ಕಾಣೆಯಾಗಿದ್ದಾಳೆ ಎಂದು ಪತಿಯ ಬಳಿ ಹೇಳಿದ್ದಾಳೆ. ಈ ಬಗ್ಗೆ ಈರಣ್ಣ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾಗಲೇ ಇಂದು ಬೆಳಗ್ಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸಂಶಯದ ಮೇರೆಗೆ ತಾಯಿ ಸುಧಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ನಡೆಸಿದ್ದನ್ನು ಒಪ್ಪಿಕೊಂಡಿದ್ದಾಳೆ.
In a shocking incident, a three-year-old girl was killed by her own mother for supporting her father during a quarrel.
10-08-26 02:38 pm
HK News Staffer
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
10-08-26 11:09 am
HK News Staffer
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm
ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಶಾರ್ಪ್ ಶೂಟರ್ ರಾಜ...
09-08-26 03:34 pm
ಇನ್ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ...
09-08-26 12:56 pm