ಬ್ರೇಕಿಂಗ್ ನ್ಯೂಸ್
11-03-21 12:04 pm Mangalore Correspondent ಕ್ರೈಂ
ಮಂಗಳೂರು, ಮಾ.11: ಮಂಗಳೂರು ಏರ್ಪೋರ್ಟಿನಲ್ಲಿ ಸರದಿಯಂತೆ, ಚಿನ್ನ ಕಳ್ಳಸಾಗಣೆ ಪತ್ತೆಯಾಗುತ್ತಿದೆ. ಈಗ ಮಹಿಳೆಯರು ಕೂಡ ಕಳ್ಳ ಸಾಗಣೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಕೇರಳದ ಕಾಸರಗೋಡು ಮೂಲದ ಮಹಿಳೆ 2.41 ಕೇಜಿ ಬಂಗಾರ ಅಕ್ರಮ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಕಾಸರಗೋಡು ಮೂಲದ ಮೊಹಮ್ಮದ್ ಅಲಿ ಸಮೀರ ಎಂಬ ಹೆಸರಿನ ಮಹಿಳೆಯನ್ನು ತಪಾಸಣೆ ನಡೆಸಿದಾಗ ಮೈಯಲ್ಲಿ ಚಿನ್ನ ಇರುವುದು ಕಂಡುಬಂದಿದೆ. ಬಳಿಕ ಮಹಿಳಾ ಅಧಿಕಾರಿಗಳು ಸೇರಿ ತಪಾಸಣೆ ನಡೆಸಿದ್ದಾರೆ. ಆಕೆಯ ಸ್ಯಾನಿಟರಿ ಪ್ಯಾಡ್, ಸಾಕ್ಸ್ ಸೇರಿದಂತೆ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಚಿನ್ನದ ಗಟ್ಟಿ ಪತ್ತೆಯಾಗಿದೆ. ಒಟ್ಟು 2.41 ಕೇಜಿ ಬಂಗಾರ ಸಿಕ್ಕಿದ್ದು ಇದರ ಮೌಲ್ಯ ಸುಮಾರು 1.10 ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿ ಮಹಿಳೆ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಳು.
ಆಕೆಯ ಬ್ಯಾಗಿನಲ್ಲಿ ವಿದೇಶಿ ನಿರ್ಮಿತ ಸಿಗರೇಟು ಪ್ಯಾಕೆಟ್ ಗಳು ಪತ್ತೆಯಾಗಿದ್ದು ಅವನ್ನು ವಶಕ್ಕೆ ಪಡೆಯಲಾಗಿದೆ. ಕೋಪ್ಟಾ ನೀತಿಯಡಿ ಸಿಗರೇಟ್ ಸಾಗಾಟ ಅಕ್ರಮವಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಇಲಾಖೆ ಡೆಪ್ಯುಟಿ ಕಮಿಷನರ್ ಕಪಿಲ್ ಗದೆ ನೇತೃತ್ವದಲ್ಲಿ ಸುಪರಿಡೆಂಟ್ ಪ್ರೀತಿ ಸುಮಾ, ರಾಕೇಶ್ ಕುಮಾರ್, ಕ್ಷಿತಿ ನಾಯಕ್ ಭಾಗವಹಿಸಿದ್ದರು.
Customs officers at Mangaluru International Airport seized gold and foreign origin cigarettes from a female passenger on Thursday March 11.The passenger, Mohammed Ali Sameera from Kasargod, came from Dubai by Air India flight.
21-03-25 10:41 pm
HK News Desk
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
Karnataka Bandh News Live: ಕರ್ನಾಟಕ ಬಂದ್ ಕರೆ...
21-03-25 08:06 pm
18 BJP MLAs suspended, assembly: ಸ್ಪೀಕರ್ ಪೀಠಕ...
21-03-25 05:46 pm
21-03-25 04:46 pm
HK News Desk
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
21-03-25 12:44 pm
Bangalore Correspondent
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm