ಬ್ರೇಕಿಂಗ್ ನ್ಯೂಸ್
23-02-21 04:01 pm Mangalore Correspondent ಕ್ರೈಂ
ಮಂಗಳೂರು, ಫೆ.23: ಎಟಿಎಂ ಯಂತ್ರದಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಮಂಗಳಾದೇವಿ ಬಳಿ ನಡೆದಿದೆ.
ಮಂಗಳಾದೇವಿ ಪೆಟ್ರೋಲ್ ಪಂಪ್ ಮುಂದೆ ಹಾಡಹಗಲೇ ಘಟನೆ ನಡೆದಿದ್ದು, ಇಬ್ಬರು ಎಟಿಎಂ ಒಳಗಡೆ ಸಂಶಯಾಸ್ಪದವಾಗಿ ನಡೆದುಕೊಂಡಿದ್ದ ವೇಳೆ ಸಂಶಯಗೊಂಡ ಬಂಕ್ ಸಿಬಂದಿ ಮತ್ತು ಸ್ಥಳೀಯರು ಎಟಿಎಂ ಬಳಿ ತೆರಳಿದ್ದಾರೆ. ಮೂರ್ನಾಲ್ಕು ಯುವಕರು ಹೊರಗಡೆ ನಿಂತಿದ್ದನ್ನು ನೋಡಿದ ಯುವಕರಿಬ್ಬರು ಅಲ್ಲಿಂದ ಓಡಿ ತಪ್ಪಿಸಲು ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸಾರ್ವಜನಿಕರು ಹಿಡಿದು ಕೂಡಿಹಾಕಿದ್ದು, ಪಾಂಡೇಶ್ವರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರು ಆರೋಪಿಗಳಿಬ್ಬರನ್ನು ಹಿಡಿದಿಡುವ ವಿಡಿಯೋ ಸೆರೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಡಿಸಿಪಿ ಹರಿರಾಮ್ ಶಂಕರ್ ಅವರಲ್ಲಿ ಕೇಳಿದಾಗ, ಯುವಕರಿಬ್ಬರು ಎಟಿಎಂ ಸ್ಕಿಮ್ಮಿಂಗ್ ಯಂತ್ರ ಅಳವಡಿಸಲು ಸಂಚು ಹೂಡಿದ್ದರು ಎನ್ನೋ ವಿಚಾರವನ್ನು ಹೊರಗೆಡಹಿದ್ದಾರೆ. ಮಂಗಳೂರಿನಲ್ಲಿ ಕಳೆದ ಮೂರು ತಿಂಗಳಲ್ಲಿ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ನಕಲಿ ಕಾರ್ಡ್ ಗಳನ್ನು ತಯಾರಿಸಿ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುವ ಕೃತ್ಯ ಬೆಳಕಿಗೆ ಬಂದಿದೆ.

ಈ ರೀತಿಯ ಐದಾರು ಮಂದಿಯ ತಂಡ ಮಂಗಳೂರಿನಲ್ಲಿ ಸಕ್ರಿಯವಾಗಿದೆ ಎನ್ನಲಾಗಿದ್ದು, ಇದೇ ತಂಡದ ಇಬ್ಬರು ಈಗ ಸಿಕ್ಕಿಬಿದ್ದವರು ಎನ್ನಲಾಗುತ್ತಿದೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ಅವರ ಸಹಚರರ ಪತ್ತೆಗೆ ಬಲೆ ಬೀಸಿದ್ದಾರೆ.
Video:
Two persons have been detained in connection to attempt to ATM ‘skimming’ at Mangaladevi in Mangalore.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am