ಬ್ರೇಕಿಂಗ್ ನ್ಯೂಸ್
16-02-21 10:23 pm Mangaluru Correspondant ಕ್ರೈಂ
ಮಂಗಳೂರು, ಫೆ.16: ಕಾಂಗ್ರೆಸ್ ಮುಖಂಡ ಕಳ್ಳಿಗೆ ತಾರನಾಥ್ ಶೆಟ್ಟಿ ಹಾಗೂ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ಅವರದೇ ಹೆಸರಲ್ಲಿ ನಕಲಿ ಖಾತೆ ತೆರೆದು ಆಪ್ತರಲ್ಲಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ ವಿಚಾರ ಬೆಳಕಿಗೆ ಬಂದಿದೆ.
ಐ.ಬಿ.ಸಂದೀಪ್ ಹೊಸ ದಿಗಂತ ಪತ್ರಿಕೆಯ ಪುತ್ತೂರು ವರದಿಗಾರರಾಗಿದ್ದು ಅವರ ಹೆಸರಲ್ಲಿ ಬೇರೆಯದ್ದೇ ಖಾತೆ ತೆರೆಯಲಾಗಿದ್ದು ಆಪ್ತರಲ್ಲಿ ಹಣ ಕೇಳಿದ್ದಾರೆ. ಹಣದ ಅಗತ್ಯವಿದೆ, ಗೂಗಲ್ ಪೇ ಅಕೌಂಟ್ ಇದ್ದರೆ ಕೂಡಲೇ ವರ್ಗಾಯಿಸುವಂತೆ ಕೇಳಿಕೊಂಡಿದ್ದರು. ಅಲ್ಲದೆ, ಕೆಲವರು ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸುವಂತೆ ಕೇಳಿಕೊಂಡಿದ್ದಾರೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಖಾತೆ ಸಂಖ್ಯೆಯನ್ನು ಹ್ಯಾಕರ್ಸ್ ಕಳಿಸಿದ್ದರು. ಆದರೆ, ಹಣ ಕಳಿಸುವ ಮೊದಲು ಮೊಬೈಲ್ ನಂಬರ್ ಇದ್ದವರು ಸಂದೀಪ್ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದಾರೆ. ಅಷ್ಟೊತ್ತಿಗೆ, ಫೇಸ್ಬುಕ್ ಹ್ಯಾಕ್ ಆಗಿದ್ದು ಗೊತ್ತಾಗಿದೆ. ಸ್ವತಃ ತನ್ನ ಖಾತೆ ಹ್ಯಾಕ್ ಆಗಿದ್ದು ಯಾರಾದ್ರು ಹಣ ನೀಡುವಂತೆ ಕೇಳಿಕೊಂಡರೆ ತನ್ನನ್ನು ಸಂಪರ್ಕಿಸುವಂತೆ ಹೇಳಿಕೊಂಡಿದ್ದಾರೆ.

ಇದೇ ವೇಳೆ, ಮಂಗಳೂರಿನ ಕಾಂಗ್ರೆಸ್ ಮುಖಂಡ ಕಳ್ಳಿಕೆ ತಾರನಾಥ್ ಶೆಟ್ಟಿಯವರ ಫೇಸ್ಬುಕ್ ಅನ್ನೂ ಯಾರೋ ಹ್ಯಾಕ್ ಮಾಡಿದ್ದು ತನ್ನ ಹೆಸರಲ್ಲಿ ಯಾರಾದ್ರೂ ಹಣ ಕೇಳಿದರೆ ಜಾಗ್ರತೆ ವಹಿಸಿ. ಅಂಥ ಮೆಸೇಜ್ ಹಾಕಿದರೆ ನನ್ನ ಗಮನಕ್ಕೆ ತನ್ನಿ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಈ ರೀತಿ ಫೇಸ್ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು ಕಾಮನ್ ಆಗಿದ್ದು ಆಗಂತುಕರು ದೂರದಲ್ಲಿ ಕುಳಿತು ಹಣ ಪೀಕಿಸುವ ವಿಚಾರ ಕರಾವಳಿಯಲ್ಲಿ ಪೊಲೀಸ್, ಪತ್ರಕರ್ತರು, ರಾಜಕೀಯ ಮುಖಂಡರ ಹೆಸರಲ್ಲಿ ಹಣ ಸಂಗ್ರಹಿಸುವ ಪ್ರಯತ್ನಗಳು ಹಲವು ಬಾರಿ ಬೆಳಕಿಗೆ ಬಂದಿದೆ.
Read: ಮಂಗಳೂರು ಪಾಲಿಕೆ ಉಪಾಯುಕ್ತರ ಹೆಸರಲ್ಲಿ ನಕಲಿ ಐಡಿ ; ಹಲವರಿಂದ ಹಣ ಪೀಕಿಸಿದ ಖದೀಮ !!
Online Fraudsters hack Facebook account of Senior Journalist and Congress leader of Mangalore and demand money from their friends on Facebook using messenger.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am