ಬ್ರೇಕಿಂಗ್ ನ್ಯೂಸ್
27-09-26 08:06 pm HK News Staffer ಕ್ರೈಂ
ಉಳ್ಳಾಲ, ಸೆ.27: ಹೆಲ್ಮೆಟ್ ರಹಿತ ಚಾಲನೆಯಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಲೇ ಇವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದೆಂಬ ಕಳಕಳಿಯಿಂದ ಸಾಮಾಜಿಕ ಕಾರ್ಯಕರ್ತರಾದ ಜಯಪ್ರಕಾಶ್ ಎಕ್ಕೂರು ಅವರು ಎಚ್ಚರಿಕೆಯ ಸಂದೇಶಗಳೊಂದಿಗೆ ಅದೃಷ್ಟ ಸಂಖ್ಯೆಗಳನ್ನೊಳಗೊಂಡ ಕರಪತ್ರಗಳನ್ನ ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರಿಗೆ ಹಂಚಿ ವಿಭಿನ್ನ ರೀತಿಯ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದಾರೆ.
ಭಾನುವಾರ ಜಯಪ್ರಕಾಶ್ ಅವರು ವಿದ್ಯಾರ್ಥಿಗಳೊಂದಿಗೆ ತೊಕ್ಕೊಟ್ಟು ಹೃದಯಭಾಗದ ಬಸ್ಸು ನಿಲ್ದಾಣ, ಫ್ಲೈ ಓವರ್ ಕೆಳಭಾಗದಲ್ಲಿ ಟ್ರಾಫಿಕ್ ಪೊಲೀಸರು, ವಾಹನ ಸವಾರರು, ವರ್ತಕರಿಗೆ ಕರಪತ್ರಗಳನ್ನ ಹಂಚಿ ವಿಶೇಷ ಜಾಗೃತಿ ಅಭಿಯಾನ ನಡೆಸಿದರು.




ಈ ವೇಳೆ ಮಾತನಾಡಿದ ಅವರು ಅನೇಕ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದ ಕಾರಣಕ್ಕಾಗಿಯೇ ಸಾವು, ನೋವುಗಳು ಸಂಭವಿಸಿವೆ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಬಾರದೆಂಬ ಕಳಕಳಿಯಿಂದ ಈ ಕರಪತ್ರ ಅಭಿಯಾನವನ್ನು ನಾವು ಹಮ್ಮಿಕೊಂಡಿದ್ದೇವೆ. ಸಾಮಾನ್ಯವಾಗಿರುವ ಕರಪತ್ರಗಳನ್ನ ಕೊಟ್ಟರೆ ಜನರು ತಕ್ಷಣವೇ ಅದನ್ನು ಎಸೆಯುತ್ತಾರೆ. ಅದಕ್ಕಾಗಿ ಕರಪತ್ರಗಳಲ್ಲಿ ಅದೃಷ್ಟ ಸಂಖ್ಯೆಗಳನ್ನ ಮುದ್ರಿಸಲಾಗಿದ್ದು, ಅಕ್ಟೋಬರ್ 10 ರಂದು ನಡೆಯುವ ಡ್ರಾ ಫಲಿತಾಂಶದಲ್ಲಿ ಅದೃಷ್ಟಶಾಲಿಯನ್ನ ಆಯ್ಕೆ ಮಾಡಲಿದ್ದೇವೆ. ಅದೃಷ್ಟಶಾಲಿಗೆ ಹೆಲ್ಮೆಟನ್ನೇ ಬಹುಮಾನವಾಗಿ ನೀಡಲಿದ್ದೇವೆ.
ಕರಪತ್ರಗಳು ಲಕ್ಕಿಡಿಪ್ ರೂಪದಲ್ಲಿ ಇದ್ದರೆ ಜನರು ಅದನ್ನ ಬಿಸಾಡದೆ ಸಂಪೂರ್ಣವಾಗಿ ಓದುತ್ತಾರೆ. ಇದರಿಂದ ನಾವು ಕೊಟ್ಟಿರುವ ಎಚ್ಚರಿಕೆಯ ಸಂದೇಶಗಳು ಒಂದಷ್ಟು ಜನರಿಗೆ ತಲುಪಿ ಸಮಾಜ ಜಾಗೃತಗೊಳ್ಳಲು ಸಾಧ್ಯವಿದೆ. ಪ್ರಸ್ತುತ ಎರಡು ಸಾವಿರ ಪ್ರತಿ ಕರಪತ್ರಗಳನ್ನ ಮುದ್ರಿಸಿದ್ದು, ಇದನ್ನು ಉಳ್ಳಾಲದ ವಿವಿಧ ಭಾಗಗಳಲ್ಲಿ ಹಂಚಲಿದ್ದೇವೆ. ಜನರು ನಮಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಬರುವ ವಾರವೂ ಕರಪತ್ರ ಹಂಚುವ ಅಭಿಯಾನ ನಡೆಸಲಿದ್ದೇವೆಯೆಂದು ಜಯಪ್ರಕಾಶ್ ತಿಳಿಸಿದರು.
ತೊಕ್ಕೊಟ್ಟು ಪ್ರದೇಶದಲ್ಲಿ ಹೆಲ್ಮೆಟ್ ಧರಿಸದೆ, ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ಸಂಖ್ಯೆ ಜಾಸ್ತಿ ಇದೆ. ಇದೇ ಪರಿಸರದ ಪರಿಚಯಸ್ಥರೋರ್ವರು ಹತ್ತು ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಹೆಲ್ಮೆಟ್ ಧರಿಸದ ಪರಿಣಾಮ ಕೋಮಾಕ್ಕೆ ಜಾರಿ ಇತ್ತೀಚಿಗೆ ಮರಣ ಹೊಂದಿದ್ದರು. ಅವರು ಕೋಮಾಕ್ಕೆ ಜಾರಿದ ಪರಿಣಾಮ ಅವರ ಮನೆ ಮಂದಿಯೂ ಹತ್ತು ವರುಷಗಳ ಕಾಲ ನರಕಯಾತನೆ ಅನುಭವಿಸುವಂತಾಯಿತೆಂದು ಜಯಪ್ರಕಾಶ್ ಹೇಳಿದರು.
ವಿದ್ಯಾರ್ಥಿಗಳಾದ ಪಲ್ಲವಿ, ನೇತ್ರ, ಗಗನ್ ಕರಪತ್ರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Rising fatalities and injuries linked to riding without helmets have prompted social activist Jayaprakash Ekkur to launch a unique road-safety awareness campaign, distributing leaflets carrying safety messages and lucky draw numbers to two-wheeler riders and the public.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
27-09-26 11:31 pm
HK News Desk
ವಿದ್ಯಾರ್ಥಿ ಸಂಘದ ಪದಗ್ರಹಣ ; ಮೊದಲ ಮಹಡಿಯ ಕಾಂಕ್ರೀಟ...
27-09-26 10:59 am
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ; ವಿದ್ಯಾರ್...
26-09-26 08:05 pm
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
27-09-26 08:06 pm
HK News Staffer
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am