ಬ್ರೇಕಿಂಗ್ ನ್ಯೂಸ್
10-03-26 01:49 pm HK News Staffer ಕ್ರೈಂ
ಬಾಗಲಕೋಟೆ, ಮಾ.10: ಇತ್ತೀಚಿಗೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ವಯಸ್ಸಿನಲ್ಲೇ ಕೊಲೆ ಸುಲಿಗೆಯಂತಹ ಕೃತ್ಯಗಳಲ್ಲಿ ಅಪ್ರಾಪ್ತರು ಭಾಗಿಯಾಗ್ತಿರುವ ವಿಚಾರ ಆಘಾತಕಾರಿಯಾಗಿದೆ. ಬಳ್ಳಾರಿ ಗುರುಕುಲದಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಬಾಲಕನನ್ನ ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕನಿಂದ ಯುವಕನ ಕೊಲೆ ನಡೆದಿದೆ.
ಹೋಳಿ ಹಬ್ಬದಂದು ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಪರಿಚಿತರೇ ಆಗಿರೋ 16 ವರ್ಷದ ಅಪ್ರಾಪ್ತ ಬಾಲಕ ಹಾಗೂ ಕೊಲೆಯಾದ ರಾಹುಲ್ ಬಾಹುಬಲಿ ಸಪ್ತಸಾಗರ (19) ನಡುವೆ ಹೋಳಿ ಹಬ್ಬದಂದು ಜಗಳ ಶುರುವಾಗಿದೆ. ಜಗಳದಲ್ಲಿ ರಾಹುಲ್ ತನ್ನನ್ನು ಹೊಡೆದಿರುವುದಾಗಿ ಬಾಲಕ ತನ್ನ ಸ್ನೇಹಿತೆ ಹಾಗೂ ಗೆಳೆಯರ ಮುಂದೆ ಹೇಳಿಕೊಂಡಿದ್ದನಂತೆ. ಬಳಿಕ ಬಾಲಕನ ಬಿಲ್ಡಪ್ ವಿಚಾರ ಯುವಕನ ಕೋಪಕ್ಕೆ ಕಾರಣವಾಗಿದೆ.
ಮಾತುಕತೆ ವೇಳೆ ಇಬ್ಬರ ನಡುವೆ ವಾಗ್ವಾದ;
ಹೊಡೆದಿರೋದಾಗಿ ಹೇಳಿಕೊಂಡು ಓಡಾಡ್ತಿದ್ದ ಬಾಲಕನನ್ನ ಯುವಕ ರಾಹುಲ್ ಕಳೆದ ರಾತ್ರಿ ಮಾತಾಡಬೇಕು ಎಂದು ದೇವಸ್ಥಾನದ ಬಳಿ ಕರೆದಿದ್ದ. ಮಾತುಕತೆ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದೇ ವೇಳೆ ಇಬ್ಬರ ಜಗಳ ತಡೆಯಲು ಸ್ಥಳದಲ್ಲಿದ್ದ ಸ್ನೇಹಿತರು ಪ್ರಯತ್ನ ಮಾಡಿದ್ರು ಸಾಧ್ಯವಾಗಲಿಲ್ಲ.
ಕುತ್ತಿಗೆಗೆ ಇರಿದು ಕೊಲೆಗೈದ ಬಾಲಕ:
ಈ ವೇಳೆ ಬೈಕ್ ಕೀ ಚೈನ್ ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಗೆ ಇರಿದು ಬಾಲಕನೇ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಮೃತ ಯುವಕ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿ ಆಗಿದ್ದಾನೆ. ಇತ್ತ ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm