Supreme Court, Actor Darshan Jail Order: ಸುಪ್ರೀಂಕೋರ್ಟ್ ನಲ್ಲಿ ಕೊಲೆ ಆರೋಪಿ ದರ್ಶನ್ ಜಾಮೀನು ರದ್ದು, ದರ್ಶನ್ ಗೆ ಮತ್ತೆ ಜೈಲು ಫಿಕ್ಸ್, ಜೈಲಲ್ಲಿ ಐಷಾರಾಮಿ ಟ್ರೀಟ್ಮೆಂಟ್ ಕೊಟ್ರೆ ಕಠಿಣ ಕ್ರಮ, ತಕ್ಷಣವೇ ಅರೆಸ್ಟ್ ಮಾಡಿ ! 

14-08-25 11:51 am       HK Staff   ಕ್ರೈಂ

ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. ನಟ ದರ್ಶನ್​ನನ್ನು ತಕ್ಷಣವೇ ಅರೆಸ್ಟ್ ಮಾಡಿ ಎಂದು ಸುಪ್ರೀಂಕೋರ್ಟ್ ಆದೇಶಿದೆ. ನಟ ದರ್ಶನ್ , ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಕೂಡ ತಕ್ಷಣವೇ  ಕೋರ್ಟ್​ಗೆ ಸರೆಂಡರ್ ಆಗ್ಬೇಕಿದೆ.

ಬೆಂಗಳೂರು, ಆ 14: ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್​​ನ ನ್ಯಾ.ಜೆ.ಬಿ.ಪರ್ದಿವಾಲಾ, ಆರ್.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಆದೇಶ ಹೊರಡಿಸಿದೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಂದೇ ಕೋರ್ಟ್​ಗೆ ಸರೆಂಡರ್ ಆಗಬೇಕಿದೆ. ಇಲ್ಲ ತಕ್ಷಣವೇ ಬಂಧಿಸಲಾಗುತ್ತೆ ಎನ್ನಲಾಗ್ತಿದೆ. 

ತಕ್ಷಣವೇ ಅರೆಸ್ಟ್ ಮಾಡಿ-ಸುಪ್ರೀಂ ;

ನಟ ದರ್ಶನ್​ನನ್ನು ತಕ್ಷಣವೇ ಅರೆಸ್ಟ್ ಮಾಡಿ ಎಂದು ಸುಪ್ರೀಂಕೋರ್ಟ್ ಆದೇಶಿದೆ. ನಟ ದರ್ಶನ್ , ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಕೂಡ ತಕ್ಷಣವೇ  ಕೋರ್ಟ್​ಗೆ ಸರೆಂಡರ್ ಆಗ್ಬೇಕಿದೆ. ಇಲ್ಲವಾದ್ರೆ ದರ್ಶನ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಲಿದ್ದಾರೆ. ಯಾವಾಗ ಸೆರೆಂಡರ್ ಆಗ್ಬೇಕು ಅನ್ನೋದು ಸುಪ್ರೀಂ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿರುತ್ತೆ.

ನಟ ದರ್ಶನ್​ಗೆ ಬಿಗ್​ ಶಾಕ್​! ;

ಡೆವಿಲ್ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದ ದರ್ಶನ್​ಗೆ ಈಗ ಬಿಗ್ ಶಾಕ್ ಆಗಿದ್ದು. ಮತ್ತೆ ದಾಸ ಜೈಲು ಪಾಲಾಗ್ತಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11 ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.

'ಹೈಕೋರ್ಟ್ ಆದೇಶದಲ್ಲಿ ದೋಷ';

‘ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ಕೆಲ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಜೈಲಲ್ಲಿ ಐಷಾರಾಮಿ ಜೀವನ ನಡೆಸಿದ ದರ್ಶನ್ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ. ಜೈಲು ಸೂಪರಿಂಟೆಂಡ್​ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪೆಂದು ಸುಪ್ರೀಂಕೋರ್ಟ್ ಹೇಳಿದೆ. ಎಲ್ಲಾ ದೇಶದ ಎಲ್ಲಾ ಹೈಕೋರ್ಟ್​ ಗಳಿಗೂ ಈ ತೀರ್ಪಿನ ಪ್ರತಿಯನ್ನು ತಲುಪಿಸಿ ಎಂದು ಸುಪ್ರೀಂ ಕರ್ಟ್​ ಆದೇಶ ನೀಡಿದೆ.

In a major setback to Kannada actor Darshan, the Supreme Court has cancelled the bail granted earlier by the Karnataka High Court and ordered his immediate arrest. The order was issued by a two-judge bench comprising Justice J.B. Pardiwala and Justice R. Mahadevan.