Bangalore Kidnap, Nischith Murder: ಬೆಂಗಳೂರು ನಿಶ್ಚಿತ್ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ; ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ , ಕೊನೆಗೂ ರಿವೀಲ್​ ಆಯ್ತು ಡೆಡ್ಲಿ ರಹಸ್ಯ !

06-08-25 05:43 pm       Bangalore Correspondent   ಕ್ರೈಂ

ಹದಿಹರೆಯದ ಬಾಲಕ ನಿಶ್ಚಿತ್ ನನ್ನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದ್ದು, ಇದೀಗ ಬಾಲಕನ‌ ಕಿಡ್ನ್ಯಾಪ್ ಅಂಡ್ ಮರ್ಡರ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರು, ಆಗಸ್ಟ್ 06 : ಹದಿಹರೆಯದ ಬಾಲಕ ನಿಶ್ಚಿತ್ ನನ್ನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದ್ದು , ಇದೀಗ ಬಾಲಕನ‌ ಕಿಡ್ನ್ಯಾಪ್ ಅಂಡ್ ಮರ್ಡರ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ಪೊಲೀಸರ ತನಿಖೆ ವೇಳೆ ಆರೋಪಿ ಡ್ರೈವರ್ ಗುರುಮೂರ್ತಿಯ ಸೈಕೋ ಮನಸ್ಥಿತಿಯವನಾಗಿದ್ದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ವಿಷಯ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಬಾಲಕನಿಗೆ ಲೈಂಗಿಕವಾಗಿ ಹಿಂಸೆ ನೀಡಿದ್ದಾರೆ, ಈ ಹುಡುಗನನ್ನ ಮನೆಗೆ ಹೋಗಲು ಬಿಟ್ರೆ ಮನೆ ಮಂದಿಗೆ ವಿಷಯ ತಿಳಿಸುತ್ತಾನೆಂದು ಕೊಂದೇ ಬಿಟ್ಟಿದ್ದಾರೆ. 

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; 

ಸೈಕೋ ಮನಸ್ಥಿತಿಯ ಆರೋಪಿ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕ ವಿರೋಧ ವ್ಯಕ್ತಪಡಿಸಿದಕ್ಕೆ ಗಂಟಲಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದ. ಬಳಿಕ ಕೊಲೆ ವಿಷಯ ಮರೆಮಾಚಲು ಕಿಡ್ನಾಪ್ ಕಥೆ ಕಟ್ಟಿದ್ದು, ಬಾಲಕನ ಮನೆಯವರಿಗೆ ಕರೆ ಮಾಡಿ 5 ಲಕ್ಷ ರೂ. ಗೆ ಡಿಮ್ಯಾಂಡ್​ ಮಾಡಿದ್ದ. 

ಇನ್ನು ಈ ಕಂತ್ರಿ ಕಾಮುಕ 13 ವರ್ಷದ ಬಾಲಕಿಯನ್ನು ಬಿಟ್ಟಿರಲಿಲ್ಲ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. 2020 ರಲ್ಲಿ ಆರೋಪಿ ಮೇಲೆ ಪೋಕ್ಸೊ ಕೇಸ್ ದಾಖಲಾಗಿತ್ತು. ಕೋಣನಕುಂಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಬಳಿಕ ಬೇಲ್ ಮೇಲೆ ಹೊರಬಂದಿದ್ದ.

ಇತ್ತೀಚೆಗೆ ಹುಳಿಮಾವು ಪೊಲೀಸರು ಆರೋಪಿಗಳಾದ ಗುರುಮೂರ್ತಿ ಮತ್ತು ವೇಣುಗೋಪಾಲ್​ಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಅರಕೆರೆ ವೈಶ್ಯ ಬ್ಯಾಂಕ್ ಕಾಲೋನಿ ನಿವಾಸಿಯಾಗಿದ್ದ ಅಚ್ಯುತ್ ರೆಡ್ಡಿ ಮತ್ತು ಸವಿತಾ ಅವರ ಒಬ್ಬನೇ ಮಗ ಈ ನಿಶ್ಚಿತ್. ಅಚ್ಯುತ್ ರೆಡ್ಡಿ ಕಾಲೇಜೊಂದರಲ್ಲಿ ಪ್ರಾಧ್ಯಪಕಾರಾಗಿದರೆ, ತಾಯಿ ಸವಿತಾ ಸಾಫ್ಟವೇರ್ ಎಂಜಿನಿಯರ್. ಮಗನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಬರ ಸಿಡಿಲೇ ಬಂದೆರಗಿದಂತಗಾಗಿತ್ತು. ನಿಶ್ಚಿತ್​ನನ್ನ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.

ನಿಶ್ಚಿತ್​ನನ್ನ ಕೊಂದಿದ್ದು ಬೇರಾರೂ ಅಚ್ಯುತ್ ರೆಡ್ಡಿ ಮನೆಯಲ್ಲಿ ಸ್ಪೇರ್​ ಡ್ರೈವರ್​ ಆಗಿ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ ಮತ್ತು ಅವನ ಸ್ನೇಹಿತ ಗೋಪಾಲಕೃಷ್ಣ. ಸ್ಪೇರ್​ ಡ್ರೈವರ್ ಆಗಿದ್ರಿಂದ ಅಚ್ಯುತ್ ರೆಡ್ಡಿ ನಿವಾಸಕ್ಕೆ ಆಗಾಗ ಬಂದು ಹೋಗ್ತಿದ್ದ ಗುರುಮೂರ್ತಿ. ಹೀಗಾಗಿ ಬಾಲಕ ನಿಶ್ಚಿತ್​ಗೆ ಗುರುಮೂರ್ತಿ ಪರಿಚಯ ಇತ್ತು. ಆಗಸ್ಟ್ ಒಂದನೇ ತಾರೀಕು ಟ್ಯೂಶನ್​ಗೆ ಹೋಗಿದ್ದ ನಿಶ್ಚಿತ್​ನನ್ನ ಪಾನಿಪುರಿ ಕೊಡಿಸೋದಾಗಿ ಹೇಳಿ ಗುರುಮೂರ್ತಿ ಕರೆದೊಯ್ದಿದ್ದಾನೆ. ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ವೆಸಗಿ, ಹೆಣವಣ್ಣ ಸುಟ್ಟು ಪರಾರಿಯಾಗಿದ್ದರು.

In a horrific twist to the abduction and murder case of teenage boy Nischith near Bannerghatta, Bengaluru police have now revealed that the boy was sexually assaulted before being brutally killed and his body set on fire. The chilling details emerged during the ongoing police investigation, leading to the arrest of two suspects.