ಬ್ರೇಕಿಂಗ್ ನ್ಯೂಸ್
10-07-25 01:05 pm HK News Desk ಕ್ರೈಂ
ಬೆಂಗಳೂರು, ಜುಲೈ 10: 300ಕ್ಕೂ ಹೆಚ್ಚು ಮಂದಿಗೆ 50 ಕೋಟಿಗೂ ಅಧಿಕ ರೂಪಾಯಿ ದೋಖಾ ಮಾಡಿ ನಾಪತ್ತೆಯಾಗಿರುವ ಕೇರಳ ಮೂಲದ ದಂಪತಿ ವಿದೇಶಕ್ಕೆ ಪರಾರಿಯಾದ ಶಂಕೆ ವ್ಯಕ್ತವಾಗಿದ್ದು, ಕೆನ್ಯಾ ದೇಶಕ್ಕೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರು ಪೊಲೀಸರು ದಂಪತಿಯ ಪಾಸ್ ಪೋರ್ಟ್ ಚೆಕ್ ಮಾಡುತ್ತಿದ್ದು, ಇವರು ಪ್ರೀ ಪ್ಲಾನ್ಡ್ ಆಗಿ ಆಫ್ರಿಕಾ ದೇಶಕ್ಕೆ ಹಾರಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಂದ ಸಿಕ್ಕಿದೆ.
ಬೆಂಗಳೂರಿನ ಕೆಆರ್ ಪುರಂನಲ್ಲಿ ವಾಸವಿದ್ದ ಟೋಮಿ ವರ್ಗೀಸ್ ಮತ್ತು ಪತ್ನಿ ಶೈನಿ ಟೋಮಿ ದಂಪತಿ ಜುಲೈ 3ರಂದು ದಿಢೀರ್ ನಾಪತ್ತೆಯಾಗಿದ್ದು ಇದರ ಬೆನ್ನಲ್ಲೇ ನೂರಾರು ಮಂದಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ದೂರು ಹೇಳಿಕೊಂಡಿದ್ದಾರೆ. ಸದ್ಯ 368 ಮಂದಿ ದೂರು ಹೇಳಿಕೊಂಡಿದ್ದು, 40 ಕೋಟಿ ಮೋಸ ಮಾಡಿದ್ದಾಗಿ ತಿಳಿಸಿದ್ದಾರೆ. ತಮ್ಮ ಮನೆ, ಕಾರುಗಳನ್ನು ಮಾರಾಟ ಮಾಡಿ ತೆರಳಿರುವುದರಿಂದ ದಂಪತಿ ಮೊದಲೇ ಪ್ಲಾನ್ ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ದಂಪತಿಯ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡಿದಾಗ, ಅದರಿಂದ ಹಣ ಡ್ರಾ ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ.
ಜುಲೈ 5ರಂದು ಕೇರಳದ ಕೊಟ್ಟಾಯಂ ಮೂಲದ 64 ವರ್ಷದ ಪಿಟಿ ಸಾವಿಯೋ ಅವರು ಚಿಟ್ ಫಂಡ್ ನಲ್ಲಿ 70 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಮೋಸ ಮಾಡಿಕೊಂಡು ಹೋಗಿದ್ದಾರೆ ಎಂದು ರಾಮಮೂರ್ತಿ ನಗರ ಠಾಣೆಯಲ್ಲಿ ದಂಪತಿ ವಿರುದ್ಧ ಕೇಸು ದಾಖಲಿಸಿದ್ದರು. ಪೊಲೀಸರ ಪ್ರಕಾರ, 700ಕ್ಕೂ ಹೆಚ್ಚು ಮಂದಿ ಇವರ ಜಾಲದಲ್ಲಿ ಸಿಲುಕಿದ್ದು, ಇನ್ನೂ ಹೆಚ್ಚಿನ ಮಂದಿ ದೂರು ಹೇಳಿಕೊಂಡು ಬಂದರೆ ನಷ್ಟದ ಮೊತ್ತ ನೂರು ಕೋಟಿ ದಾಟಬಹುದು ಎಂದಿದ್ದಾರೆ. ಟೋಮಿ ವರ್ಗೀಸ್ ದಂಪತಿ ಎ ಅಂಡ್ ಎ ಫೈನಾನ್ಸ್ ಕಂಪನಿ ಹೆಸರಲ್ಲಿ 2005ರಿಂದ ಚಿಟ್ ಫಂಡ್ ನಡೆಸುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಇವರ ಕಂಪನಿಯಲ್ಲಿ 750ರಿಂದ 800 ಜನರು ಹೂಡಿಕೆ ಮಾಡಿರುವ ಮಾಹಿತಿ ಸಿಕ್ಕಿದೆ. ದಿನವೂ ಮೋಸಕ್ಕೊಳಗಾದವರು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಟೋಮಿ ವರ್ಗೀಸ್ ದಂಪತಿ ಮೂಲತಃ ಕೇರಳದ ಆಲಪ್ಪುಳ ಜಿಲ್ಲೆಯ ಮಾಪುಝಕ್ಕೇರಿ ಎಂಬಲ್ಲಿನವರಾಗಿದ್ದು, 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊಟ್ಟಾಯಂ ಮೂಲದ ಸಾವಿಯೋ ದೂರಿನ ಪ್ರಕಾರ, ದಂಪತಿ ಹೆಚ್ಚಿನ ದರದ ಬಡ್ಡಿ ಆಮಿಷವೊಡ್ಡಿ ಹಣವನ್ನು ಹೂಡಿಕೆ ಮಾಡಲು ಹೇಳುತ್ತಿದ್ದರು. ಸಾವಿಯೋ ಮತ್ತು ಅವರ ಸಂಬಂಧಿಕರು ಅನೇಕ ಜನ ಹೂಡಿಕೆ ಮಾಡಿದ್ದರು. ಚಿಟ್ ಫಂಡ್ ಸಂಸ್ಥೆಯ ಖಾತೆ ಮತ್ತು ದಂಪತಿಯ ವೈಯಕ್ತಿಕ ಖಾತೆಗೂ ಹಣ ಸಂದಾಯ ಮಾಡಲಾಗುತ್ತಿತ್ತು. ಕೆಲವಾರು ಕೋಟಿ ಮೊತ್ತವನ್ನು ನಮ್ಮ ಸಂಬಂಧಿಕರೇ ಹೂಡಿಕೆ ಮಾಡಿದ್ದಾರೆ. ನಾವು ಅವರ ಕಚೇರಿಗೆ ಹೋಗಿ ನೋಡಿದಾಗ ಬಂದ್ ಆಗಿರುವುದು ತಿಳಿಯಿತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಚಿಟ್ ಫಂಡ್ ಆಕ್ಟ್ 1982 ಸೆಕ್ಷನ್ 4, ಅನಧಿಕೃತ ಡಿಪಾಸಿಟ್ ಸ್ಕೀಮ್ ವಿಧೇಯಕ 2019ರ ಸೆಕ್ಷನ್ 21 ಮತ್ತು ಬಿಎನ್ಎಸ್ 318, 319 ಪ್ರಕಾರ ನಂಬಿಕೆ ದ್ರೋಹ ಮತ್ತು ಮೋಸದ ಬಗ್ಗೆ ಪೊಲೀಸರು ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
A Kerala-based couple is suspected to have fled the country to Kenya after allegedly siphoning off crores of rupees from a chit fund operation in Bengaluru, according to police sources. The couple, identified as Linsa Babu and her husband Babu Joseph, originally from Pathanamthitta district in Kerala, were running a chit fund business in the Electronics City area of Bengaluru. The company, identified as D4U Group, reportedly attracted several investors with promises of high returns.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
10-07-25 11:07 pm
HK News Desk
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm