ಬ್ರೇಕಿಂಗ್ ನ್ಯೂಸ್
09-04-25 11:17 pm HK News Desk ಕ್ರೈಂ
ಜೈಪುರ, ಎ.9 : ಸಾಮೂಹಿಕ ವಿವಾಹದ ನೆಪದಲ್ಲಿ ಬಡ ಯುವತಿಯರನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್ ಎನ್ ಜಿಒ ತಂಡವನ್ನು ರಾಜಸ್ಥಾನ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ರಾಜಸ್ತಾನ ರಾಜಧಾನಿ ಜೈಪುರ ಸಮೀಪದಲ್ಲಿ ಸಾಮೂಹಿಕ ವಿವಾಹದ ಹೆಸರಲ್ಲಿ ಬಡ ಕುಟುಂಬದ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇದರೊಂದಿಗೆ ಬಹುದೊಡ್ಡ ಮಾನವ ಕಳ್ಳ ಸಾಗಣೆ ಜಾಲ ಬಯಲಿಗೆ ಬಂದಿದೆ. ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿದ್ದ ಎನ್ ಜಿಒ ಸಂಘಟನೆಯೊಂದು ಯುವತಿಯರನ್ನು 2.5 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿತ್ತು ಎಂಬ ಆರೋಪಗಳಿವೆ.
ಬಡ ಕುಟುಂಬಗಳ ಮಹಿಳೆಯರಿಗಾಗಿ ಎನ್ ಜಿಓ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿತ್ತು. ಬಡ ಕುಟುಂಬಗಳಿಂದ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್ಗಳಿಂದ 'ಖರೀದಿಸಿ' ವಧುವನ್ನು ಹುಡುಕುತ್ತಿರುವ ಯುವಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಪುರದಿಂದ ಸುಮಾರು 30 ಕಿ.ಮೀ ದೂರದ ಬಸ್ಸಿಯ ಸುಜನ್ಪುರ ಗ್ರಾಮದಲ್ಲಿ ಗಾಯತ್ರಿ ಸರ್ವ ಸಮಾಜ ಪ್ರತಿಷ್ಠಾನ ಎಂಬ ಎನ್ ಜಿಓ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂಸ್ಥೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಗಾಯತ್ರಿ ಎಂಬ ಮಹಿಳೆ ಇದರ ಮುಖ್ಯಸ್ಥಳಾಗಿದ್ದು, ಮದುವೆಯಾಗಲು ಬಯಸುತ್ತಿದ್ದ ಯುವಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರಿಂದ ಹಣ ಪಡೆದು ಯುವತಿಯರನ್ನು ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಂಗ್ನ ಸದಸ್ಯರು ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದ ಬಡ ಕುಟುಂಬಗಳ ಹುಡುಗಿಯರನ್ನು ಎನ್ಜಿಒ ನಿರ್ದೇಶಕಿ ಗಾಯತ್ರಿಗೆ ಒಪ್ಪಿಸುತ್ತಿದ್ದರು. ಬಳಿಕ ಆಕೆ ತನ್ನ ಸಂಸ್ಥೆಗೆ ಮದುವೆಯಾಗಲು ಬರುವ ಗಂಡು ಮಕ್ಕಳಿಗೆ ಯುವತಿಯರ ಫೋಟೋ ತೋರಿಸಿ ಸೌಂದರ್ಯದ ಆಧಾರದ ಮೇಲೆ 2.5 ಲಕ್ಷ ರೂ.ನಿಂದ 5 ಲಕ್ಷ ರೂ. ವರೆಗೆ ಬೆಲೆ ನಿರ್ಧರಿಸುತ್ತಿದ್ದಳು. ಅಪ್ರಾಪ್ತ ವಯಸ್ಕರಿಗೆ 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತೋರಿಸಲು ನಕಲಿ ಆಧಾರ್ ಕಾರ್ಡ್ಗಳನ್ನು ವ್ಯವಸ್ಥೆ ಮಾಡುತ್ತಿದ್ದಳು. ಈ ರೀತಿ ಸುಮಾರು 1,500 ವಿವಾಹಗಳನ್ನು ಮಾಡಿಸಿದ್ದಾಳೆಂದು ಆಕೆಯ ವಿರುದ್ಧ ಹತ್ತು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
A shocking human trafficking operation posing as a charitable NGO conducting mass weddings has been uncovered near Jaipur, Rajasthan.The NGO in question, operating under the name Gayatri Sarva Samaj Foundation, allegedly trafficked girls from economically weak families under the pretense of helping them get married.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm