ಬ್ರೇಕಿಂಗ್ ನ್ಯೂಸ್
09-04-25 08:15 pm HK News Desk ಕ್ರೈಂ
ಕಲಬುರಗಿ, ಎ.9 : ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಬೀದರ್ ಎಸ್ಬಿಐ ಎಟಿಎಂ ದರೋಡೆ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಸಹ ಎಸ್ಬಿಐ ಎಟಿಎಂ ದರೋಡೆ ಮಾಡಲಾಗಿದೆ. ತಡರಾತ್ರಿ ಎಟಿಎಂ ನುಗ್ಗಿದ ದರೋಡೆಕೋರ ಗ್ಯಾಂಗ್, ಸಿಸಿ ಕ್ಯಾಮರಾಕ್ಕೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿ ಬಳಿಕ ಗ್ಯಾಸ್ ಕಟರ್ನಿಂದ 18 ಲಕ್ಷ ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದೆ.
ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರ ಬಡಾವಣೆಯ ಬಳಿಯ ಎಸ್.ಬಿ.ಐ ಎಟಿಎಮ್ನಲ್ಲಿ ದರೋಡೆ ಮಾಡಲಾಗಿದೆ. ಜನವರಿ 16 ರಂದು ಬೀದರ್ನಲ್ಲಿ ಎಟಿಎಮ್ಗೆ ಹಣ ತುಂಬುವ ಸಿಬ್ಬಂದಿಗಳ ಮೇಲೆ ದರೋಡೆಕೋರರ ಗ್ಯಾಂಗ್ ಫೈರಿಂಗ್ ಮಾಡಿ 80 ಲಕ್ಷಕ್ಕೂ ಅಧಿಕ ಹಣ ದರೋಡೆ ಮಾಡಿಕೊಂಡು ಹೋಗಿತ್ತು. ಆ ಪ್ರಕರಣದ ಆರೋಪಿಗಳು ಇನ್ನೂ ಸಿಕ್ಕಿಲ್ಲ.. ಇದೀಗ ಕಲಬುರಗಿಯಲ್ಲಿ ಸಹ ಬುಧವಾರ ನಸುಕಿನ ಜಾವ 3 ಗಂಟೆಯಿಂದ 4 ಗಂಟೆಯ ಅವಧಿಯಲ್ಲಿ ಇಬ್ಬರು ದರೋಡೆಕೋರರು, ಎಟಿಎಮ್ ನಲ್ಲಿನ ಸಿಸಿ ಕ್ಯಾಮರಾಗಳಿಗೆ ಬ್ಕ್ಯಾಕ್ ಸ್ಪ್ರೇ ಮಾಡಿದ ಬಳಿಕ ಗ್ಯಾಸ್ ಕಟರ್ನಿಂದ ಮಶೀನ್ ಕಟ್ ಮಾಡಿ 18 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.
ದರೋಡೆ ನಡೆಸಿದವರ ಚಲನವಲನ ಪಕ್ಕದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎಟಿಎಮ್ ಮುಂಭಾಗದಲ್ಲಿ ಐ20 ಕಾರೊಂದು ಹೋಗಿದ್ದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೀದರ್ನಲ್ಲಿ ಎಟಿಎಮ್ಗೆ ಹಣ ತುಂಬುವಾಗ ದರೋಡೆ ಘಟನೆ ಬಳಿಕ ಕಲಬುರಗಿ ಪೊಲೀಸರು ಎಲ್ಲಾ ಬ್ಯಾಂಕ್ ಮತ್ತು ಎಟಿಎಮ್ಗೆ ಹಣ ತುಂಬುವ ಏಜೆನ್ಸಿಗಳ ಮುಖ್ಯಸ್ಥರ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಆದರೆ ಇಲ್ಲಿ ದರೋಡೆಯಾದ ಎಟಿಎಮ್ಗೆ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಇದೇ ಎಟಿಎಂ ಮೆಶಿನ್ನಿಗೆ ಸುಮಾರು 18 ಲಕ್ಷ ರೂಪಾಯಿ ಹಣವನ್ನ ತುಂಬಲಾಗಿತ್ತು.. ಈ ವೇಳೆ ದರೋಡೆಕೋರ ಗ್ಯಾಂಗ್ ಗ್ರಾಹಕರ ಸೋಗಿನಲ್ಲಿ ಬಂದು ಎಟಿಎಮ್ ಬಳಿಯ ಚಲನವಲನ ಗಮನಿಸಿ ಹೋಗಿದ್ದಾರೆ. ಅದರಂತೆ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಎಟಿಎಮ್ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಸುರಕ್ಷತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ದರೋಡೆ ಕೃತ್ಯ ಆಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಉತ್ತರ ಪ್ರದೇಶ ಅಥವಾ ಬಿಹಾರ್ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
An incident of theft of Rs 18 lakh from an ATM by spraying black paint on the CCTV camera installed inside the kiosk was reported in the city past midnight on Wednesday.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm