ಬ್ರೇಕಿಂಗ್ ನ್ಯೂಸ್
01-04-25 05:32 pm HK News Desk ಕ್ರೈಂ
ದಾವಣಗೆರೆ, ಎ.1 : ಉದ್ಯಮ ವಿಸ್ತರಿಸಲು ಸಾಲ ನೀಡಲಿಲ್ಲವೆಂದು ಸಿಟ್ಟಿನಲ್ಲಿ ಯುವಕನೊಬ್ಬ ಎಸ್ ಬಿಐ ಬ್ಯಾಂಕ್ ಕಚೇರಿಯನ್ನೇ ಲೂಟಿಗೈಯಲು ಸಂಚು ಹೂಡಿದ್ದಲ್ಲದೆ, ನೆಟ್ ಫ್ಲಿಕ್ಸ್ ಸರಣಿಗಳನ್ನು ನೋಡಿ ತಂಡ ಕಟ್ಟಿಕೊಂಡು ಸದ್ದಿಲ್ಲದೆ ದರೋಡೆ ಕೃತ್ಯ ನಡೆಸಿದ ಪ್ರಕರಣವನ್ನು ಆರು ತಿಂಗಳ ಬಳಿಕ ಪೊಲೀಸರು ಪತ್ತೆಹಚ್ಚಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ನೆಟ್ ಫ್ಲಿಕ್ಸ್ ನಲ್ಲಿ ದರೋಡೆ ಕೃತ್ಯದ ವೆಬ್ ಸೀರಿಸ್ ನೋಡಿ ಕಳ್ಳತನಕ್ಕೆ ಪ್ಲಾನ್ ಹಾಕಿದ್ದ ಆರು ಆರೋಪಿಗಳನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ತಮಿಳುನಾಡಿನ ಬಾವಿಯೊಂದರಲ್ಲಿ ಹಾಕಿಟ್ಟಿದ್ದ 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.
2024ರ ಅಕ್ಟೋಬರ್ 28ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಎಸ್ ಬಿಐ ಬ್ಯಾಂಕ್ ಕಚೇರಿಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು ಐದಾರು ತಂಡ ಕಟ್ಟಿಕೊಂಡು ಅಲೆದಾಡಿದ್ದರೂ ಸುಳಿವು ಸಿಕ್ಕಿರಲಿಲ್ಲ. ಆರು ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದು ತಮಿಳುನಾಡು ಮೂಲದ ವಿಜಯ ಕುಮಾರ್(30), ಅಜಯ್ ಕುಮಾರ್(28), ಪರಮಾನಂದ (30), ನ್ಯಾಮತಿ ನಿವಾಸಿ ಅಭಿಷೇಕ್ (23), ಆತನ ಸ್ನೇಹಿತ ಚಂದ್ರು (23) ಹಾಗೂ ಮಂಜುನಾಥ್ (32) ಬಂಧಿತರು.
15 ಲಕ್ಷ ಸಾಲಕ್ಕೆ ಅರ್ಜಿ, ಸಾಲ ಕೊಡದ ಬ್ಯಾಂಕನ್ನೇ ದರೋಡೆ
ಪ್ರಮುಖ ಆರೋಪಿ ವಿಜಯಕುಮಾರ್ ನ್ಯಾಮತಿ ಪಟ್ಟಣದಲ್ಲಿ 25-30 ವರ್ಷಗಳಿಂದ ವಿಐಪಿ ಸ್ನ್ಯಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯನ್ನು ತಂದೆಯೊಂದಿಗೆ ನಡೆಸಿಕೊಂಡು ಬಂದಿದ್ದ. ಮತ್ತಷ್ಟು ವ್ಯಾಪಾರ ಅಭಿವೃದ್ಧಿಗೆ ಯೋಜನೆ ಹಾಕಿ, 15 ಲಕ್ಷ ರೂ. ಸಾಲಕ್ಕಾಗಿ 2023ರ ಮಾರ್ಚ್ ತಿಂಗಳಲ್ಲಿ ನ್ಯಾಮತಿಯ ಎಸ್ಬಿಐ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದ. ಆದರೆ ಆತನ ಸಿಬಿಲ್ ಸ್ಕೋರ್ ಸರಿಯಾಗಿಲ್ಲದ್ದರಿಂದ ಬ್ಯಾಂಕ್ ಸಿಬ್ಬಂದಿ ಸಾಲಕ್ಕೆ ನಿರಾಕರಿಸಿದ್ದರು. ಆನಂತರ ಸಂಬಂಧಿಕರ ಹೆಸರಿನಲ್ಲು ಸಾಲ ಪಡೆಯುವುದಕ್ಕಾಗಿ ಮತ್ತೆ ಎಸ್ ಬಿಐ ಬ್ರಾಂಚ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ಸಾಲದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಇದರಿಂದಾಗಿ ವಿಜಯ ಕುಮಾರ್ ಬ್ಯಾಂಕ್ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದ.
ವೆಬ್ ಸಿರೀಸ್ ನೋಡಿ ಬ್ಯಾಂಕ್ ಲೂಟಿ
ಆರೋಪಿಗಳು ಬ್ಯಾಂಕ್ ದರೋಡೆ ಮಾಡುವುದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಯೂಟ್ಯೂಬ್ ಹಾಗೂ ವಿವಿಧ ಓಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಬ್ಯಾಂಕ್ ದರೋಡೆ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿ ಅನೇಕ ವಿಡಿಯೋಗಳನ್ನು ಸುಮಾರು 6 ತಿಂಗಳ ಕಾಲ ನೋಡಿದ್ದು ಅದರಂತೆ ಸಿದ್ಧತೆ ನಡೆಸಿದ್ದರು. ಕೃತ್ಯ ಎಸಗಲು ಆರು ತಿಂಗಳಿಂದ ಹೊಂಚು ಹಾಕಿದ್ದ ಆರೋಪಿಗಳು ದರೋಡೆಗೆ ಬೇಕಾಗುವ ಸಲಕರಣೆಗಳನ್ನು ಶಿವಮೊಗ್ಗ ಹಾಗೂ ನ್ಯಾಮತಿ ಪಟ್ಟಣದಲ್ಲಿ ಖರೀದಿಸಿದ್ದರು. ದರೋಡೆಗೂ ಮೂರು ತಿಂಗಳ ಹಿಂದೆ ಆರೋಪಿಗಳು ನ್ಯಾಮತಿ ತಾಲೂಕಿನ ಸುರಹೊನ್ನೆ ಶಾಲೆಯ ಬಳಿ ಕೃತ್ಯಕ್ಕೆ ರೂಪುರೇಷಗಳನ್ನು ತಯಾರಿಸಿದ್ದರು. ಇನ್ನುಳಿದ ಮಂಕಿ ಕ್ಯಾಪ್, ಗ್ಲೌಸ್, ಬ್ಲ್ಯಾಕ್ ಶರ್ಟ್ ಮತ್ತು ಪ್ಯಾಂಟ್ಗಳನ್ನು ಮಾರ್ಕೆಟ್ನಿಂದ ಖರೀದಿಸಿ ಇಟ್ಟುಕೊಂಡಿದ್ದರು.
ಕದ್ದ ಚಿನ್ನವನ್ನು ಬಾವಿಯಲ್ಲಿ ಮುಚ್ಚಿಟ್ಟಿದ್ದ ಕಳ್ಳರು
ಆರೋಪಿಗಳು ಕಳವು ಮಾಡಿದ್ದ ಚಿನ್ನದ ಪೈಕಿ ಸ್ವಲ್ಪ ಭಾಗವನ್ನು ವಿಜಯಕುಮಾರ್ ತನ್ನ ಮನೆಯಲ್ಲೇ ಇದ್ದ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ. ಇದಲ್ಲದೆ, ಒಂದಷ್ಟು ಚಿನ್ನವನ್ನು ಸಣ್ಣ ಲಾಕರ್ಗೆ ತುಂಬಿಸಿ ತಮಿಳುನಾಡಿನ ಮಧುರೈ ಬಳಿಯ ನಿರ್ಜನ ಪ್ರದೇಶದಲ್ಲಿ ಪಾಳು ಬಾವಿಯಲ್ಲಿ ಹಾಕಿಟ್ಟಿದ್ದ.
ಒಂದಷ್ಟು ಚಿನ್ನವನ್ನು ಬ್ಯಾಂಕ್ಗಳಲ್ಲಿ ಮತ್ತು ಚಿನ್ನದ ಅಂಗಡಿಗಳಲ್ಲಿ ವಿಜಯ್ ತನ್ನ ಹಾಗೂ ತನ್ನ ಸಂಬಂಧಿಕರ ಹೆಸರಿನಲ್ಲಿ ಅಡವಿಟ್ಟು ಹಣವನ್ನು ಪಡೆದಿದ್ದ. ಈ ಹಣದಿಂದ ಸ್ವಲ್ಪ ಹಣವನ್ನು ಅಭಿ, ಚಂದ್ರು, ಮಂಜುಗೆ ತಲಾ 01 ಲಕ್ಷದಂತೆ ಕೊಟ್ಟು ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿದ್ದು, ಕೆಲವು ನಿವೇಶನಗಳನ್ನು ಖರೀದಿ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಕೆರೆಗೆ ಎಸೆದಿದ್ದ ಕಳ್ಳರು
ಕೃತ್ಯಕ್ಕೆ ಬಳಸಿದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್ಗಳನ್ನು ನಾಶಪಡಿಸಿದ್ದು, ಇನ್ನುಳಿದ ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಇತರ ವಸ್ತುಗಳನ್ನು ಸವಳಂಗ ಕೆರೆಗೆ ಎಸೆದಿರುವುದಾಗಿ ತನಿಖೆಯಲ್ಲಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ಎಸ್ ಬಿಐ ಬ್ಯಾಂಕ್ ನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿ ನಂತರ ಕೆರೆಗೆ ಎಸೆದಿದ್ದಾಗಿ ಪೊಲೀಸರಿಗೆ ಹೇಳಿದ್ದಾರೆ.
2024 ಅಕ್ಟೋಬರ್ 28 ರಂದು ಕಳ್ಳರು ಯಾವುದೇ ಸುಳಿವು ಬಿಟ್ಟುಕೊಡದೆ ಎಸ್ ಬಿಐ ಬ್ಯಾಂಕ್ ದರೋಡೆ ಮಾಡಿದ್ದರು. ಕಿಟಕಿ ಮೂಲಕ ಬ್ಯಾಂಕ್ ಒಳನುಗ್ಗಿ ಗ್ಯಾಸ್ ಕಟರ್ ಮೂಲಕ ಲಾಕರ್ ಕತ್ತರಿಸಿ ಚಿನ್ನಾಭರಣ ದೋಚಿದ್ದರು. ಅಲ್ಲದೆ ಸಿಸಿಟಿವಿಯಲ್ಲು ಬರದಂತೆ ಸಾಕ್ಷಿ ಸಿಗದಂತೆ ಪ್ಲಾನ್ ಮಾಡಿದ್ದರು. ಬಡವರು, ರೈತರು ಬೇರೆ ಬೇರೆ ಸಂದರ್ಭದಲ್ಲಿ ಅಡವಿಟ್ಟಿದ್ದ 17 ಕೆಜಿ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದರು. ಕೆಲವು ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಆರೋಪಿ ವಿಜಯ್ ಕುಮಾರ್ ಬಗ್ಗೆ ಪೊಲೀಸರು ಸಂಶಯಪಟ್ಟು ತನಿಖೆ ನಡೆಸಲಾರಂಭಿಸಿದ್ದರು. ಆರು ಆರೋಪಿಗಳನ್ನು ಬಂಧಿಸಿದ್ದು ಕರಗಿಸದೆ ಉಳಿದಿದ್ದ 17.01 ಕೆಜಿ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ
ದರೋಡೆ ಪ್ರಕರಣವನ್ನು ಕೊನೆಗೂ ಭೇದಿಸಿದ 10 ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕವನ್ನು ಘೋಷಣೆ ಮಾಡಲಾಗಿದೆ.
Davangere police, Karnataka recovered 17 kg of gold accessories stolen from Nyamathi branch of State Bank of India in Davangere of Karnataka in previous October and the stolen golden accessories were hidden deep inside a well by bank robbery mastermind at a farm house in Islampetti of Madurai in Tamil Nadu belonging to his relative. It is alleged the accused had robbed gold accessories worth 17.5 kgs from the SBI, Nyamathi branch.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm