Mangalore Fraud, Online, Telagram: ಟೆಲಿಗ್ರಾಂನಲ್ಲಿ ಸಂಪರ್ಕ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಡಬಲ್ ಆಮಿಷ, ಅಪರಿಚಿತ ಮಹಿಳೆಯ ಮೋಸದ ಬಲೆಗೆ ಬಿದ್ದ ಮಂಗಳೂರಿನ ವ್ಯಕ್ತಿಗೆ ಬರೋಬ್ಬರಿ 76 ಲಕ್ಷ ದೋಖಾ  

22-03-25 10:51 pm       Mangalore Correspondent   ಕ್ರೈಂ

ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಮ್ ಏಪ್ ನಲ್ಲಿ ಪರಿಚಯವಾಗಿದ್ದ ಮಹಿಳೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಡಬಲ್ ಲಾಭ ಸಿಗುತ್ತದೆ ಎಂದು ನಂಬಿಸಿ ಹೂಡಿಕೆ ಮಾಡಿಸಿದ್ದು, ಮಂಗಳೂರು ಮೂಲದ ದುಬೈ ಉದ್ಯೋಗಿ ಬರೋಬ್ಬರಿ 76 ಲಕ್ಷ ರೂಪಾಯಿ ಕಳಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಮಾ.22 : ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಮ್ ಏಪ್ ನಲ್ಲಿ ಪರಿಚಯವಾಗಿದ್ದ ಮಹಿಳೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಡಬಲ್ ಲಾಭ ಸಿಗುತ್ತದೆ ಎಂದು ನಂಬಿಸಿ ಹೂಡಿಕೆ ಮಾಡಿಸಿದ್ದು, ಮಂಗಳೂರು ಮೂಲದ ದುಬೈ ಉದ್ಯೋಗಿ ಬರೋಬ್ಬರಿ 76 ಲಕ್ಷ ರೂಪಾಯಿ ಕಳಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

50 ವರ್ಷದ ಮಂಗಳೂರಿನ ವ್ಯಕ್ತಿ ದುಬೈನಲ್ಲಿ 18 ವರ್ಷಗಳಿಂದ ಪೆಟ್ರೋಲಿಯಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಆರು ತಿಂಗಳ ಹಿಂದೆ ರಜೆಯಲ್ಲಿ ಊರಿಗೆ ಮರಳಿದ್ದರು. ಈ ವೇಳೆ, ಕಳೆದ ಡಿಸೆಂಬರ್ 12ರಂದು ಸಾಗರಿಕ ಅಗರ್ವಾಲ್ ಎಂದು ಪರಿಚಯ ಮಾಡಿಕೊಂಡಿದ್ದ ಮಹಿಳೆ ಸಂಪರ್ಕವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ತಿಳಿಸಿದ್ದರು. ಆನಂತರ ವಾಟ್ಸಪ್ ಖಾತೆಯಲ್ಲಿ ಮೆಸೇಜ್ ಮಾಡುತ್ತ ಹೂಡಿಕೆ ಮಾಡಲು ಒತ್ತಾಯಿಸಿದ್ದರು.

Spreadxx.com ಹೆಸರಿನಲ್ಲಿ ಲಿಂಕ್ ಕಳುಹಿಸಿದ್ದು, ಅದರ ಮೂಲಕ ಗ್ರೂಪ್ ಜಾಯಿನ್ ಆಗಿದ್ದ ಮಂಗಳೂರಿನ ವ್ಯಕ್ತಿ ಮೊದಲಿಗೆ ತನ್ನ ದುಬೈ ಬ್ಯಾಂಕಿನಿಂದ 27600 ರೂ. ಅದೇ ಅಸಲಿ ಷೇರು ಮಾರುಕಟ್ಟೆಯೆಂದು ನಂಬಿ ಹೂಡಿಕೆ ಮಾಡಿದ್ದರು. ಆನಂತರ, ಮತ್ತಷ್ಟು ಹಣ ಹೂಡಿಕೆ ಮಾಡಲು ಆಮಿಷವೊಡ್ಡಿದ್ದು, ಮಂಗಳೂರಿನ ಯೆಯ್ಯಾಡಿ ಎಸ್ ಬಿಐ ಶಾಖೆಯ ಎನ್ಆರ್ ಐ ಖಾತೆಯಿಂದ 10.82 ಲಕ್ಷ ರೂ. ರವಾನೆ ಮಾಡಿದ್ದಾರೆ. ಆನಂತರ, ಡಿ.20ರಿಂದ 2025ರ ಮಾರ್ಚ್ 3ರ ವರೆಗೆ ಅಪರಿಚಿತ ವ್ಯಕ್ತಿಯ ವಿವಿಧ ಖಾತೆಗಳಿಗೆ ಹಣ ರವಾನಿಸಿದ್ದು ಒಟ್ಟು 76,32,146 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು.

ಷೇರು ಮಾರುಕಟ್ಟೆಯೆಂದು ತೋರಿಸುತ್ತಿದ್ದ ಏಪ್ ನಲ್ಲಿ ತಾನು ಹೂಡಿದ್ದ ಹಣವು ಡಬಲ್ ಆಗಿದ್ದಲ್ಲದೆ, ಒಂದು ಕೋಟಿ 36 ಲಕ್ಷ ಆಗಿರುವಂತೆ ಕಂಡುಬಂದಿತ್ತು. ಇದರಂತೆ, ಮಾರ್ಚ್ 13ರಂದು ಅದರ ಒಂದಷ್ಟು ಮೊತ್ತವನ್ನು ಹಿಂತಿರುಗಿಸಲು ವ್ಯಕ್ತಿ ಕೇಳಿಕೊಂಡಿದ್ದು, ಹಣ ಹಿಂತಿರುಗಿಸಬೇಕಿದ್ದರೆ ಇಂತಿಷ್ಟು ತೆರಿಗೆ ಕಟ್ಟಬೇಕೆಂದು ಕೇಳಿದ್ದಾರೆ. ಮತ್ತೆ ಮತ್ತೆ ತೆರಿಗೆ ಪಾವತಿಸಲು ಹೇಳಿದ್ದರಿಂದ ಸಂಶಯಗೊಂಡಿದ್ದು ಮೋಸದ ಅರಿವಾಗಿ ಮಂಗಳೂರಿನ ಉರ್ವಾ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

A case has been registered at the CEN police station after a man lost Rs 76,32,145 by falling prey to a stock market investment scam on Telegram.