Bangalore Fake Police, Crime: ಪಾರ್ಕ್‌ನಲ್ಲಿ ಜೋಡಿಗಳಿಗೆ ಪೊಲೀಸ್ ಸೋಗಿನಲ್ಲಿ ಸುಲಿಗೆ ; ಚಿನ್ನ, ಹಣ ಪೀಕಿ ಎಸ್ಕೇಪ್, ನಕಲಿ ಪೋಲಿಸಪ್ಪನ ಬೆಂಡೆತ್ತಿದ ಖಾಕಿ  

21-03-25 12:44 pm       Bangalore Correspondent   ಕ್ರೈಂ

ಪೊಲೀಸ್ ಎಂದು ಹೇಳಿಕೊಂಡು ರಾಜಧಾನಿಯ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ನಕಲಿ ಪೊಲೀಸ್‌ನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಮಾ 21: ಪೊಲೀಸ್ ಎಂದು ಹೇಳಿಕೊಂಡು ರಾಜಧಾನಿಯ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ನಕಲಿ ಪೊಲೀಸ್‌ನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.

ಆಸೀಫ್ ಬಂಧಿತ ಆರೋಪಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆಸೀಫ್ ಪೊಲೀಸ್ ಎಂದು ಹೇಳಿಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿರುವ ಜೋಡಿಗಳನ್ನ ಟಾರ್ಗೆಟ್ ಮಾಡಿಕೊಂಡು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ.

ಆಸಿಫ್ ಇಬ್ಬರಿಂದ 12 ಗ್ರಾಂನ ಚಿನ್ನದ ಸರ ಹಾಗೂ 5 ಗ್ರಾಂನ ರಿಂಗ್ ಹಾಗೂ 10,000 ರೂ. ಹಣ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದ. ಪೋಲಿಸ್ ಎಂದು ಹೇಳಿ ಪಾರ್ಕ್‌ನಲ್ಲಿ ಕೂರುವವರಿಂದ ಸುಲಿಗೆ ಮಾಡುತ್ತಿದ್ದ ಆಸೀಫ್, ಇದೇ ರೀತಿ ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಇದೀಗ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

In a swift operation, Bangalore Police have apprehended a man identified as Asif, who allegedly targeted unsuspecting couples in parks, posing as a police officer to loot cash and gold.