ಬ್ರೇಕಿಂಗ್ ನ್ಯೂಸ್
19-11-24 07:40 pm Udupi Correspondent ಕ್ರೈಂ
ಮಂಗಳೂರು, ನ.19: ಕರ್ನಾಟಕ ಮತ್ತು ಕೇರಳ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಗೌಡ (46) ಕಡೆಗೂ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾಗಿದ್ದಾನೆ. ನಿನ್ನೆ ತಡರಾತ್ರಿ ಎಎನ್ಎಫ್ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಹೆಬ್ರಿ ತಾಲೂಕಿನ ಪಶ್ಚಿಮ ಘಟ್ಟದ ಕಟ್ಟಕಡೆಯ ಗ್ರಾಮ ನಾಡ್ಪಾಲಿನ ಪೀತ್ ಬೈಲ್ ಎಂಬಲ್ಲಿ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ್ದಾರೆ.
ಕಳೆದ 15 ದಿನಗಳಿಂದ ವಿಕ್ರಂ ಗೌಡ ಕಬ್ಬಿನಾಲೆ, ನಾಡ್ಪಾಲು ಗ್ರಾಮಕ್ಕೆ ಬಂದು ಹೋಗುತ್ತಿದ್ದಾನೆ ಎಂಬ ಮಾಹಿತಿಯಿತ್ತು. ಇದರಿಂದಾಗಿ ಕಾರ್ಕಳದಲ್ಲಿ ಠಿಕಾಣಿ ಹೂಡಿದ್ದ ಎಎನ್ಎಫ್ ಜೊತೆಗೆ ಶಿವಮೊಗ್ಗದಿಂದ 25 ಮತ್ತು ಬೆಂಗಳೂರಿನ 75 ಮಂದಿಯಿದ್ದ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಇದಲ್ಲದೆ, ಮಂಗಳವಾರ ಸಂಜೆಯೇ ನಾಡ್ಪಾಲು ಗ್ರಾಮದ ಪೀತ್ ಬೈಲ್ ಮತ್ತು ತಿಂಗಳಮಕ್ಕಿ ಎಂಬ ಎರಡು ಕಡೆಯೂ ಜನರಿಗೆ ಭೀತಿ ಆವರಿಸಿತ್ತು. ಭಾರೀ ಸಂಖ್ಯೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಸದಸ್ಯರು ಕಾಡಿನತ್ತ ಲಗ್ಗೆ ಇಟ್ಟಿದ್ದರು.
ಮೋಸ್ಟ್ ವಾಂಟೆಡ್ ನಕ್ಸಲ್ ಮತ್ತು ಕರ್ನಾಟಕ ವಿಮೋಚನಾ ರಂಗದ ಮುಂಚೂಣಿ ನಾಯಕನಾಗಿದ್ದ ವಿಕ್ರಂ ಗೌಡ ಹತನಾಗಿರುವುದು ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ರೂಪಾ ಮೌದ್ಗಿಲ್ ಸ್ಥಳಕ್ಕೆ ಆಗಮಿಸಿದ್ದರು. ಸ್ಥಳಕ್ಕೆ ಬಂದಿದ್ದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರೂಪಾ ಅವರು, ಎಎನ್ಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು, ಪ್ರತಿದಾಳಿ ಮಾಡಲಾಗಿದೆ. ಈ ವೇಳೆ, ವಿಕ್ರಂ ಗೌಡ ಗುಂಡಿನ ಚಕಮಕಿಯಲ್ಲಿ ಹತನಗಿದ್ದಾನೆ. ಹತ್ತು ದಿನಗಳಿಂದ ಕಾಡಿನಲ್ಲಿ ಕಾರ್ಯಾಚರಣೆ ನಡೀತಾ ಇತ್ತು. ವಿಕ್ರಂ ಗೌಡ ಮೇಲೆ ನರಹತ್ಯೆ, ನಕ್ಸಲ್ ಕೃತ್ಯ ಸೇರಿ ಕೇರಳದಲ್ಲಿ 19 ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 61 ಪ್ರಕರಣಗಳಿದ್ದವು. ಎಎನ್ಎಫ್ ಎಸ್ಪಿ ಜಿತೇಂದ್ರ ಕಾರ್ಯಾಚರಣೆಯ ಮುಖ್ಯ ರೂವಾರಿಯಾಗಿದ್ದು, ಈ ಎನ್ಕೌಂಟರ್ ಎಎನ್ಎಫ್ ಪಾಲಿಗೆ ದೊಡ್ಡ ಗರಿಯಾಗಿದೆ ಎಂದು ತಿಳಿಸಿದ್ದಾರೆ.
ಎನ್ಕೌಂಟರ್ ಸಂದರ್ಭದಲ್ಲಿ ಬೇರೆ ಯಾರಿದ್ದರು, ಎಷ್ಟು ಮಂದಿ ಪರಾರಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರೂಪಾ ಮೌದ್ಗಿಲ್, ಘಟನೆ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು, ಎಷ್ಟು ಮಂದಿಯಿದ್ದರು ಎನ್ನುವ ಬಗ್ಗೆ ಇನ್ನಷ್ಟೇ ತಿಳಿದುರಬರಬೇಕು. ಈ ಹಂತದಲ್ಲಿ ಎಲ್ಲವನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಎನ್ಕೌಂಟರ್ ಜಾಗಕ್ಕೆ ಪ್ರವೇಶ ನಿರ್ಬಂಧ
ಪೀತ್ ಬೈಲ್ ನಲ್ಲಿ ಮೂರು ಮನೆಗಳಿದ್ದು, ಆ ಭಾಗಕ್ಕೆ ಮಾಧ್ಯಮದವರಿಗೆ ತೆರಳಲು ಅವಕಾಶ ನೀಡಿಲ್ಲ. ಸುಧಾಕರ ಗೌಡ, ಜಯಂತ್, ಬಾಬು ಗೌಡ ಎಂಬವರ ಮನೆಗಳಿದ್ದು, ಅಲ್ಲಿದ್ದ ನಿವಾಸಿಗಳನ್ನು ಬೇರೆ ಮನೆಗಳಿಗೆ ತೆರಳಲು ಸೂಚಿಸಲಾಗಿದೆ. ಪೀತ್ ಬೈಲ್ ಮತ್ತು ತಿಂಗಳಮಕ್ಕಿ ನಡುವೆ ಒಂದು ಸಣ್ಣ ತೊರೆ ಹರಿಯುತ್ತಿದ್ದು, ಅಡ್ಡಲಾಗಿ ಇತ್ತೀಚೆಗಷ್ಟೇ ಎಎನ್ಎಫ್ ಸಿಬಂದಿ ಹೊಸ ಸೇತುವೆ ರಚಿಸಿದ್ದಾರೆ. ಸುಧಾಕರ ಗೌಡರ ಮನೆಯ ಹಿಂಭಾಗದಲ್ಲಿ ಎನ್ಕೌಂಟರ್ ಆಗಿದೆ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಎಫ್ಎಸ್ಎಲ್, ಡಾಗ್ ಸ್ಕ್ವಾಡ್ ಆಗಮಿಸಿದ್ದು, ಪರಿಶೀಲನೆ ನಡೆಸಿದೆ. ಅಪರಾಹ್ನ 3.30ರ ವರೆಗೂ ಗುಡ್ಡದ ನಡುವಲ್ಲಿಯೇ ಶವ ಇತ್ತು. ಆನಂತರ, ಬಿದಿರಿನಲ್ಲಿ ಸ್ಟ್ರಚರ್ ರಚಿಸಿ ಪಿಕಪ್ ವಾಹನಕ್ಕೆ ತಂದು ತುಂಬಿಸಿದ್ದಾರೆ. ಸ್ಥಳಕ್ಕೆ ಆಂಬುಲೆನ್ಸ್ ಸಾಗಲು ಸಾಧ್ಯವಿಲ್ದದೇ ಇದ್ದುದರಿಂದ ಪಿಕಪ್ ಅನ್ನೇ ಶವ ಸಾಗಿಸಲು ಬಳಸಿದ್ದಾರೆ.
ಕಪ್ಪು ಶರ್ಟ್, ಬರ್ಮುಡಾ ಧರಿಸಿದ್ದ
ಸ್ಥಳದಲ್ಲಿ ನಿನ್ನೆ ರಾತ್ರಿಯಿಂದಲೂ ಹೆಬ್ರಿ, ಅಜೆಕಾರು, ಕಾರ್ಕಳ ಠಾಣೆಯ ಪೊಲೀಸರು ಬೀಡು ಬಿಟ್ಟಿದ್ದಾರೆ. ಭಾರೀ ಭದ್ರತೆಯೊಂದಿಗೆ ನಕ್ಸಲ್ ನಾಯಕನ ಶವವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಯ್ದಿದ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ವಿಕ್ರಂ ಗೌಡ ಕಪ್ಪು ಶರ್ಟ್ ಮತ್ತು ಬರ್ಮುಡಾ ಧರಿಸಿದ್ದ. ಕಟ್ಟುಮಸ್ತಾದ ದೇಹ ಇತ್ತು. ದೇಹದ ಯಾವ ಭಾಗಕ್ಕೆ ಗುಂಡು ತಗಲಿದೆ ಎನ್ನುವುದು ಗೊತ್ತಾಗಿಲ್ಲ, ರಾತ್ರಿ ವೇಳೆ ಗುಂಡಿನ ಚಕಮಕಿ ಆಗಿದ್ದು ಎಷ್ಟು ಗುಂಡು ಹೊಕ್ಕಿದೆ ಎನ್ನುವ ಬಗ್ಗೆ ಪತ್ತೆ ಆಗಬೇಕಷ್ಟೆ. ಆತನ ಜೊತೆಗೆ ಯಾರಿದ್ದರು ಎನ್ನುವುದು ತಿಳಿದುಬಂದಿಲ್ಲ. ಜೊತೆಗೆ ನಾಲ್ವರು ಇದ್ದರು ಎನ್ನುವ ಮಾಹಿತಿ ಇದೆ. ಶವ ಒಯ್ದ ಸಂದರ್ಭದಲ್ಲಿ ಮರದಿಂದ ತಯಾರಿಸಿದ್ದ ತಾತ್ಕಾಲಿಕ ಸ್ಟ್ರಚರ್ ನಲ್ಲಿ ದೇಹವನ್ನು ಕಟ್ಟಿದ್ದು, ದಪ್ಪ ಕಂಬಳಿಯಿಂದ ಸುತ್ತಿಡಲಾಗಿತ್ತು.
Report by: ಗಿರಿಧರ್ ಶೆಟ್ಟಿ , ಮಂಗಳೂರು | Giridhar Shetty
How was most wanted Naxal leader Vikram Gowda killed in Udupi encounter, ground report by Headline Karnataka Senior Journalist Giridhar Shetty. Naxal leader Vikram Gowda, wanted for over 20 years, was killed in an encounter with the Anti-Naxal Force (ANF) at Kabbinale forest, Udupi district in Karnataka, on Monday. The operation occurred during a combing exercise conducted by the ANF, acting on intelligence regarding Naxal activity in the forested region.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm