ಬ್ರೇಕಿಂಗ್ ನ್ಯೂಸ್
10-11-24 06:57 pm Mangalore Correspondent ಕ್ರೈಂ
ಮಂಗಳೂರು, ನ.10: ಪತ್ನಿ ಮಗುವನ್ನು ಕೊಂದು ಮನೆಮಗ ಪಕ್ಷಿಕೆರೆಯ ಕಾರ್ತಿಕ್ ಭಟ್ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕ ಕುಟುಂಬಸ್ಥರು ಬಹಳಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದ ಶಿವಮೊಗ್ಗ ಮೂಲದ ಪ್ರಿಯಾಂಕ ತಾಯಿ ಮತ್ತು ದೊಡ್ಡಪ್ಪ, ನಮ್ಮ ಅಳಿಯ ಕಾರ್ತಿಕ್ ಪತ್ನಿ, ಮಗುವನ್ನು ಕೊಲ್ಲುವಂಥ ಮನಸ್ಥಿತಿಯವನೇ ಅಲ್ಲ. ಇದರ ಹಿಂದೆ ಬೇರೇನೋ ಇದೆ, ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹ ಮಾಡಿದ್ದಾರೆ.
ಪ್ರಿಯಾಂಕ ಅವರ ದೊಡ್ಡಪ್ಪ ಉಮಾಶಂಕರ ಉಪಾಧ್ಯಾಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕಾರ್ತಿಕ್ ಈ ರೀತಿಯ ಕೃತ್ಯ ಮಾಡುವ ಕಟುಕನಂತೂ ಅಲ್ಲ. ಪತ್ನಿ, ಮಗುವನ್ನು ಒಳ್ಳೆ ರೀತಿಯಲ್ಲಿ ನೋಡಿಕೊಂಡಿದ್ದ. ಆರ್ಥಿಕ ಸಂಕಷ್ಟ ಇತ್ತು ಎಂದು ಮಾಧ್ಯಮದಲ್ಲಿ ಹೇಳುತ್ತ ಇರುವುದು ಸುಳ್ಳು. ಆರ್ಥಿಕ ಸಂಕಷ್ಟದ ಬಗ್ಗೆ ನಮ್ಮಲ್ಲಿ ಹೇಳಿರಲಿಲ್ಲ. ಅವನನ್ನು ಯಾರಾದ್ರೂ ಕೊಂದು ರೈಲಿನಡಿಗೆ ಹಾಕಿದ್ದಿರಲಿಕ್ಕೂ ಸಾಕು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮರ್ಯಾದಸ್ಥ ಕುಟುಂಬ, ನಮ್ಮಲ್ಲಿ ಇಂಥ ಕೊಲೆ ಹಿಂದೆಂದೂ ಆಗಿಲ್ಲ. ನಾನು ಜೆಡಿಎಸ್ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷನಿದ್ದೇನೆ, ಪಿಎಲ್ ಡಿ ಬ್ಯಾಂಕಿನಲ್ಲಿ ನಾಲ್ಕು ಬಾರಿ ಅಧ್ಯಕ್ಷನಾಗಿದ್ದೇನೆ, ರಾಜಕೀಯ ಹಿನ್ನೆಲೆಯುಳ್ಳ ನಮ್ಮ ಕುಟುಂಬವಾಗಿದ್ದು, ನಾವು ರಾಜಕೀಯ ಬಳಸಿಕೊಳ್ಳುವುದಕ್ಕೆ ಪೊಲೀಸರು ಅವಕಾಶ ನೀಡಬಾರದು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಹೇಳಿದರು.
ಪ್ರಿಯಾಂಕ ತಾಯಿ ಸಾವಿತ್ರಿ ಮಾತನಾಡಿ, ಅಳಿಯ ಕಾರ್ತಿಕ್ ಒಳ್ಳೆ ಹುಡುಗನಾಗಿದ್ದ. ಮನೆಯಲ್ಲಿ ತಂದೆ, ತಾಯಿ ಕಿರುಕುಳ ನೀಡುತ್ತಾರೆಂದು ಹೇಳಿಕೊಂಡಿದ್ದ. ಮಗಳಿಗೂ ಅತ್ತೆ, ಸೊಸೆಯ ಕಿರುಕುಳ ಇತ್ತು. ಇವನು ಮದುವೆಗೆ ಮೊದಳು ನೈಜೀರಿಯಾದಲ್ಲಿ ಕೆಲಸದಲ್ಲಿದ್ದ. ಮದುವೆ ನಂತರವೂ ವಿದೇಶಕ್ಕೆ ಹೋಗುವಂತೆ ತಂದೆ, ತಾಯಿ ಒತ್ತಾಯ ಮಾಡುತ್ತಿದ್ದರು. ಮಗಳನ್ನೂ ಕೆಲಸಕ್ಕೆ ಹೋಗುವಂತೆ ಹೇಳುತ್ತಿದ್ದರು. ಮಗ, ತಂದೆ- ತಾಯಿ ಜೊತೆಗೆ ಮಾತು ಬಿಟ್ಟ ಮೇಲೆ ಮಗಳೂ ಮಾತು ಬಿಟ್ಟಿದ್ದಳು. ಕಾರ್ತಿಕ್ ಅಕ್ಕ ಕಣ್ಮನಿಯೂ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ಇವರು ಜಗಳ ಮಾಡೋದಕ್ಕೆ ಸಾಧ್ಯವೇ ಇಲ್ಲ. ಮಗಳು ಗುರುವಾರ ಫೋನ್ ಮಾಡಿ ಮಾತಾಡಿದ್ದಳು. ಡಿಸೆಂಬರ್ ನಲ್ಲಿ ಶಿವಮೊಗ್ಗಕ್ಕೆ ಬರೋದಾಗಿ ಹೇಳಿದ್ದಳು.
ಗಂಡ- ಹೆಂಡತಿ ಜಗಳ ಇರಲಿಲ್ಲ
ಗಂಡ- ಹೆಂಡತಿ ಜಗಳ ಮಾಡಿದ್ದಾರೆಂದು ಮಾಧ್ಯಮದಲ್ಲಿ ಸುಳ್ಳು ಯಾಕೆ ಕೊಟ್ಟಿರೋದು. ಅತ್ತೆ- ಮಾವ ಬೆಳಗ್ಗೆ ಆರೂವರೆಗೆ ಹೊಟೇಲಿಗೆ ಹೋಗಿದ್ದರೆ, ಇವರಿಗೆ ಹೇಗೆ ಗೊತ್ತು ಜಗಳ ಮಾಡೋದು. ಬೇರೆ ಮನೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಇದಕ್ಕಾಗಿ ಬೇರೆ ಮನೆಯನ್ನೂ ನೋಡುತ್ತಿದ್ದರು. ಮೊನ್ನೆ ನವರಾತ್ರಿಗೆ ಶಿವಮೊಗ್ಗ ಬಂದಿದ್ದವರು ಒಂದು ವಾರ ಇದ್ದರು. ಆನಂತರ, ಮಗು ಮಾತ್ರ ಪಕ್ಷಿಕೆರೆಗೆ ಹೋಗುವುದಿಲ್ಲ ಎಂದೇ ಅಳ್ತಾ ಇತ್ತು. ತಾಯಿ, ಮಗು ಬಳಿಕ ಅತ್ತು ಕರೆದು ಹೋಗಿದ್ದರು. ಗಂಡ- ಹೆಂಡತಿ ಅಷ್ಟು ಚೆನ್ನಾಗಿದ್ದವರು ಇವನೇ ಕೊಲ್ತಾನೆ ಅಂದ್ರೆ ನಂಬೋಕೆ ಆಗ್ತಿಲ್ಲ ಎಂದು ಹೇಳಿದರು.
ಇವರ ಕುಟುಂಬದ ಇನ್ನೊಬ್ಬ ವ್ಯಕ್ತಿಯಂತೂ ಮಂಗಳೂರು ಪೊಲೀಸರು ಸರಿಯಾದ ತನಿಖೆ ನಡೆಸದೇ ಇದ್ದರೆ ನಾವು ಗೃಹ ಸಚಿವರ ಬಳಿ ಹೋಗುತ್ತೇವೆ. ಬೇರೆ ಪೊಲೀಸರಲ್ಲಿ ತನಿಖೆಗೆ ಕೋರುತ್ತೇವೆ ಎಂದು ಹೇಳಿದರು. ಒಟ್ಟಿನಲ್ಲಿ ಪತ್ನಿ, ಮಗುವನ್ನು ಕಾರ್ತಿಕ್ ಭಟ್ ಕೊಲೆ ಮಾಡಿದ್ದಾನೆ ಎಂಬುದನ್ನು ಅವರು ನಂಬಲು ತಯಾರಿರಲಿಲ್ಲ. ಪಕ್ಷಿಕೆರೆಯ ಕೆಮ್ರಾಲ್ ನಲ್ಲಿ ವಾಸವಿದ್ದ ಜನಾರ್ದನ ಭಟ್ ಅವರ ಪುತ್ರ ಕಾರ್ತಿಕ್ ಭಟ್ ಮುಲ್ಕಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಪರಿಶೀಲನೆ ವೇಳೆ ಪತ್ನಿ ಪ್ರಿಯಾಂಕ ಮತ್ತು ನಾಲ್ಕು ವರ್ಷದ ಮಗುವನ್ನು ಹರಿತ ಆಯುಧದಿಂದ ಹತ್ಯೆ ಮಾಡಲಾಗಿತ್ತು. ಪೊಲೀಸರು ಮೇಲ್ನೋಟಕ್ಕೆ ಗಂಡನೇ ಪತ್ನಿ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಮ್ಮ ಶವಗಳನ್ನು ತಂದೆ, ತಾಯಿ ಮತ್ತು ಅಕ್ಕನಿಗೆ ಮುಟ್ಟಲೂ ಬಿಡಬೇಡಿ. ಪತ್ನಿಯ ಕಡೆಯವರಿಗೆ ಕೊಡಿ ಎಂದು ಬರೆದಿಟ್ಟಿದ್ದಾನೆ. ಒಂದೇ ಕುಟುಂಬದ ಮೂವರ ಸಾವು ಜನಮಾನಸದಲ್ಲಿ ಸಂಚಲನ ಮೂಡಿಸಿದೆ.
Mulki murder, inlaws allege involvement of son in law's parents in the murder at Pakshikere in Mangalore. Our son in law was not a bad guy but his parents were horrifc alleges parents of the wife of Karthik bhat. A 32-year-old man allegedly murdered his wife and four-year-old son before ending his life in Mangaluru.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm