ಬ್ರೇಕಿಂಗ್ ನ್ಯೂಸ್
12-07-24 10:19 pm Mangalore Correspondent ಕ್ರೈಂ
ಮಂಗಳೂರು, ಜುಲೈ 12: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡ್ಮೂರು ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 12.50 ಲಕ್ಷ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಜೇಶ್ವರ ಮೂಲದ ಮಹಮ್ಮದ್ ಸಿಯಾಬ್ ಯಾನೆ ಸಿಯಾ, ಬಜಪೆ ಮೂಲದ ಮಹಮ್ಮದ್ ಅರ್ಪಾಜ್ ಯಾನೆ ಅರ್ಪಾ ಮತ್ತು ಸಪ್ಪಾನ್ ಯಾನೆ ಸಪ್ಪಾ ಬಂಧಿತರು.
ಆರೋಪಿಗಳು ಮೂರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಬೀಗ ಹಾಕಿದ ಮನೆಗಳನ್ನು ಒಡೆದು ಒಟ್ಟು 9,25,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.
ಜುಲೈ 10ರಂದು ಕೊಣಾಜೆ ಠಾಣೆ ಪಿಎಸ್ಐ ವಿನೋದ್ ಹಾಗೂ ಸಿಬ್ಬಂದಿಗಳು ಬೆಳಗಿನ ಜಾವ ಪಾತೂರು ಕಡೆಯಿಂದ ಮುದುಂಗಾರಕಟ್ಟೆ ಚೆಕ್ ಪಾಯಿಂಟ್ ಬಳಿ ಕಾರಿನಲ್ಲಿ ಬಂದ ಮೂರು ಮಂದಿಯನ್ನು ವಿಚಾರಿಸಿದ್ದಾರೆ. ಕಾರನ್ನು ತಪಾಸಣೆಯನ್ನು ನಡೆಸಿದಾಗ ಕಾರಿನಲ್ಲಿ 2 ಡ್ರಾಗರ್, 3 ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್ಗಳು, ಹಾಗೂ ಹ್ಯಾಂಡ್ ಗೌಸ್ ಹಾಗೂ ಮನೆಯ ಬಾಗಿಲನ್ನು ಒಡೆಯಲು ಉಪಯೋಗಿಸುವ ಸಲಕರಣೆ ಪತ್ತೆಯಾಗಿದೆ. ಈ ವೇಳೆ ವಾಹನದಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕಳ್ಳತನ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಒಟ್ಟು 130 ಗ್ರಾಂ ತೂಕದ ಚಿನ್ನಾಭರಣ, 1 ವಾಚ್, ಕಾರು ಸೇರಿದಂತೆ ಒಟ್ಟು 12,50,000 ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಕೇರಳ ಮೂಲದ ಅಶ್ರಫ್ ಅಲಿ (ಈತ ಕೇರಳದ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದಾನೆ) ಎಂಬವನೊಂದಿಗೆ ಸೇರಿಕೊಂಡು ತನ್ನ ಸಹಚರರ ಜೊತೆಯಲ್ಲಿ ಬಾಡಿಗೆ ಕಾರುಗಳನ್ನು ತೆಗೆದುಕೊಂಡು ಹಗಲು ಹಾಗೂ ರಾತ್ರಿ ಮನೆ ಕಳವು ಮತ್ತು ದರೋಡೆ ನಡೆಸುವ ಪ್ರವೃತ್ತಿಯನ್ನು ಹೊಂದಿದವರಾಗಿದ್ದಾರೆ. ಮೊಹಮ್ಮದ್ ಸಿಯಾಬ್ ನೀಡಿದ ಮಾಹಿತಿಯಂತೆ ಸಜಿಪದ ನಿವಾಸಿ ಮೊಹಮ್ಮದ್ ಜಂಶೀರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು.
ಆರೋಪಿ ಮಹಮ್ಮದ್ ಸಿಯಾಬ್ (30) ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ ಸುಮಾರು 13 ಪ್ರಕರಣಗಳು ದಾಖಲಾಗಿದೆ. ಕೊಣಾಜೆ ಠಾಣೆಯಲ್ಲಿ 4 ದರೋಡೆ ಮತ್ತು ಮನೆ ಕಳ್ಳತನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟ 2 ಪ್ರಕರಣ, ಬಜಪೆ ಠಾಣೆಯಲ್ಲಿ 2 ಮನೆ ಕಳ್ಳತನದ ಪ್ರಕರಣ, ಕಡಬ ಠಾಣೆಯಲ್ಲಿ 1 ಹನಿಟ್ರ್ಯಾಪ್ ಪ್ರಕರಣ, ಕೇರಳ ರಾಜ್ಯದ ಕುಂಬ್ಳೆ ಠಾಣೆಯಲ್ಲಿ 3 ಮನೆ ಕಳ್ಳತನ ಪ್ರಕರಣ, ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ ಎಂದು ಕಮಿಷನರ್ ತಿಳಿಸಿದರು.
ಆರೋಪಿ ಮಹಮ್ಮದ್ ಅರ್ಪಾಜ್ (19) ಮೇಲೆ ಬಜಪೆ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ,ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ, ಹಾಸನ ಗ್ರಾಮಂತರ ಠಾಣೆಯಲ್ಲಿ 1 ದರೋಡೆ ಪ್ರಕರಣ ಸೇರಿ ಒಟ್ಟು 3 ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಸಪ್ಪಾನ್ (20) ಮೇಲೆ ಕಡಬ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಮೊಹಮ್ಮದ್ ಜಂಶೀರ್ (27) ಮೊದಲ ಬಾರಿ ಕೃತ್ಯದಲ್ಲಿ
ಭಾಗಿಯಾಗಿರುತ್ತಾನೆ. ಆರೋಪಿಗಳು ಮಂಗಳೂರು ನಗರ ಮತ್ತು ದ.ಕ. ಜಿಲ್ಲೆ, ಉಡುಪಿ, ಹಾಸನ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮನೆ ಕಳ್ಳತನ ಹಾಗೂ ದರೋಡೆ ನಡೆಸಿರುವ ಬಗ್ಗೆ ಮಾಹಿತಿ ಇದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಂದ್ರ, ಪಿಎಸ್ಐ ವಿನೋದ್, ಎಎಸ್ಐಗಳಾದ ಜಗನ್ನಾಥ ಶೆಟ್ಟಿ ಮತ್ತು ಸಂಜೀವ್, ಸಿಬ್ಬಂದಿಗಳಾದ ರಾಮ ನಾಯ್, ರೇಷ್ಮಾ, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಡೇವಿಡ್ ಡಿಸೋಜಾ, ಸಂತೋಷ್, ಬಸವನಗೌಡ, ಸುರೇಶ್ ತಲವಾರ, ದರ್ಶನ್, ಪ್ರಶಾಂತ ಪಾಲ್ಗೊಂಡಿದ್ದರು.
The Konaje Police of Mangaluru city have successfully arrested a group of inter-state thieves involved in stealing from locked houses. The police have seized property worth Rs 12,50,000 in total.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm