ಬ್ರೇಕಿಂಗ್ ನ್ಯೂಸ್
18-05-23 10:27 pm Satish, Crime Correspondent HK ಕ್ರೈಂ
ಪಾಲಕ್ಕಾಡ್, ಮೇ 18: ಅಪರಾಧಿಯೊಬ್ಬ ಎಷ್ಟೇ ನಿಷ್ಣಾತನಾಗಿದ್ದರೂ, ಪೊಲೀಸರು ವರ್ಕೌಟ್ ಮಾಡಿದರೆ ಎಂಥ ಅಪರಾಧಿಯನ್ನೂ ಕೋರ್ಟ್ ಕಟಕಟೆಯಲ್ಲಿ ಶಿಕ್ಷೆಯಾಗುವಂತೆ ಮಾಡಬಹುದು ಎಂಬುದಕ್ಕೆ ಈ ಸ್ಟೋರಿ ನಿದರ್ಶನ. ಕ್ರೈಮ್ ಸೀರಿಯಲ್ ಆಗಬಲ್ಲ ರೀತಿಯ ಈ ನೈಜ ಕತೆಯಲ್ಲಿ ಆರೋಪಿ ತಾನು ಯಾವುದೇ ರೀತಿಯಲ್ಲೂ ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಜಾಗ್ರತೆ ವಹಿಸಿದ್ದ. ಆದರೆ ಪೊಲೀಸರು ಆಧುನಿಕ ಟೆಕ್ನಾಲಜಿಯನ್ನು ಬಳಸ್ಕೊಂಡು ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದ್ದು ಕೋರ್ಟ್ ಒಪ್ಪುವಂತೆ ಮಾಡಿದ್ದಾರೆ.
ಅದು ಕಳೆದ ಬಾರಿ ಕೊರೊನಾ ಸೋಂಕು ಉತ್ತುಂಗದಲ್ಲಿ ಇದ್ದಾಗಿನ ಕತೆ. 2020ರ ಮಾರ್ಚ್ ತಿಂಗಳಲ್ಲಿ ಯಾರಿಗೂ ತಿಳಿಯದ ರೀತಿ ಬ್ಯೂಟಿಷಿಯನ್ ಆಗಿದ್ದ ಸುಚಿತ್ರಾ ಪಿಳ್ಳೆ (42) ಎಂಬ ಮಹಿಳೆಯನ್ನು ಸಂಗೀತ ಶಿಕ್ಷಕನಾಗಿದ್ದ ಆಕೆಯ ಗೆಳೆಯನೇ ಸದ್ದಿಲ್ಲದೆ ಮುಗಿಸಿ ಹಾಕಿದ್ದ ಪ್ರಕರಣ. ಆರೋಪಿ ಪ್ರಶಾಂತ್ ನಂಬ್ಯಾರ್ (34) ವಿರುದ್ಧ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್, ಪೂರಕ ಸಾಕ್ಷ್ಯಗಳನ್ನು ಪರಿಗಣಿಸಿ ಪಾಲಕ್ಕಾಡ್ ಜಿಲ್ಲಾ ಕೋರ್ಟ್ ಅಪರಾಧಿಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿದೆ. ಅಲ್ಲದೆ, ಎರಡೂವರೆ ಲಕ್ಷ ದಂಡ ಹೊರಿಸಿದ್ದು ಅದನ್ನು ಸಂತ್ರಸ್ತ ಮಹಿಳೆಯ ತಾಯಿಗೆ ನೀಡಲು ಆದೇಶ ಮಾಡಿದೆ.
ಸುಚಿತ್ರಾ ಪಿಳ್ಳೆ ಮೂಲತಃ ಕೊಲ್ಲಂ ನಿವಾಸಿಯಾಗಿದ್ದಳು. ಗಂಡನಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಪಾಲಕ್ಕಾಡಿನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ವೃತ್ತಿಯಲ್ಲಿ ಬ್ಯೂಟಿಶಿಯನ್ ಕಲಿಯುವ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಜೊತೆಗೆ, ತಾನೇ ಬ್ಯೂಟಿಶಿಯನ್ ಆಗಿಯೂ ಕೆಲಸ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ನಂಬ್ಯಾರ್ ಗೆ ತನ್ನ ಪತ್ನಿಯ ಮೂಲಕ ಸುಚಿತ್ರಾ ಪರಿಚಯ ಆಗಿತ್ತು. 2019ರ ಆರಂಭದಲ್ಲಿ ತನ್ನ ಮಗುವಿನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದ ಸುಚಿತ್ರಾ ಪಿಳ್ಳೆ ಸಂಪರ್ಕಕ್ಕೆ ಬಂದಿದ್ದಳು. ಪ್ರಶಾಂತ್ ನಂಬ್ಯಾರ್ ಪತ್ನಿಗೆ ದೂರದ ಸಂಬಂಧಿಯೂ ಆಗಿದ್ದಳು. ವಯಸ್ಸಿನಲ್ಲಿ ಹಿರಿಯಳಾಗಿದ್ದರಿಂದ ‘ಚೇಚಿ’ (ಅಕ್ಕ) ಎಂದೇ ಪ್ರಶಾಂತ್ ಆಕೆಯನ್ನು ಕರೆಯತೊಡಗಿದ್ದ.
ಆನಂತರ, ಚೇಚಿ ಜೊತೆಗಿನ ಕನೆಕ್ಷನ್ ಗರ್ಲ್ ಫ್ರೆಂಡ್ ಆಗುವಷ್ಟರ ಮಟ್ಟಿಗೆ ಬೆಳೆದಿತ್ತು. ಖಾಸಗಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿದ್ದ ಪ್ರಶಾಂತ್ ನಂಬ್ಯಾರ್, ತನ್ನ ಕುಟುಂಬಕ್ಕೆ ತಿಳಿಯದ ರೀತಿ ಸುಚಿತ್ರಾ ಪಿಳ್ಳೆ ಜೊತೆ ಬೆರೆಯತೊಡಗಿದ್ದ. ಹಣಕಾಸಿನಲ್ಲಿ ಸ್ವಲ್ಪಮಟ್ಟಿಗೆ ಗಟ್ಟಿ ಕುಳವಾಗಿದ್ದ ಸುಚಿತ್ರಾ ಪಿಳ್ಳೆ ಈ ನಡುವೆ ಪ್ರಶಾಂತ್ ನಂಬ್ಯಾರ್ ಗೆ 2.56 ಲಕ್ಷ ರೂಪಾಯಿ ಹಣವನ್ನು ವಿವಿಧ ಸಂದರ್ಭಗಳಲ್ಲಿ ನೀಡಿದ್ದಳು. ವರ್ಷದ ನಂತರ, ಸುಚಿತ್ರಾ ಹಣ ಕೇಳತೊಡಗಿದ್ದಳು. ಜೊತೆಗೆ, ತಾನು ಮದುವೆಯಾಗದೆ ಮಗುವನ್ನು ಹೊಂದಬೇಕೆಂದು ಬಯಕೆ ವ್ಯಕ್ತಪಡಿಸಿದ್ದಳು. ಕೃತಕ ಗರ್ಭದ ಮೂಲಕ ಮಗುವನ್ನು ಪಡೆಯಲು ನೀನು ಸಹಕರಿಸಬೇಕು ಎಂದು ಪ್ರಶಾಂತ್ ಬಳಿ ಹೊಸ ಬಯಕೆ ಹೇಳಿಕೊಂಡಿದ್ದಳು. ಆದರೆ ಪ್ರಶಾಂತ್ ನಂಬ್ಯಾರ್ ತಾನು ಮೊದಲೇ ಪತ್ನಿ ಸಹಿತ ಕುಟುಂಬವನ್ನು ಹೊಂದಿದ್ದರಿಂದ ಇದಕ್ಕೆ ಒಪ್ಪಿಗೆ ಹೊಂದಿರಲಿಲ್ಲ. ಅಲ್ಲದೆ, ಮಗುವನ್ನು ಹೊಂದಲು ಸಹಕರಿಸಿದರೆ ತನ್ನ ಕನೆಕ್ಷನ್ ಕುಟುಂಬಕ್ಕೂ ತಿಳಿಯುತ್ತೆ ಅಂತ ಉಪಾಯದಿಂದ ಆಕೆಯನ್ನೇ ಮುಗಿಸಲು ಪ್ಲಾನ್ ಹಾಕಿದ್ದ.
ಮಾರ್ಚ್ 17ರಂದು ಪಾಲಕ್ಕಾಡಿನ ಮನಾಲಿಯ ಶ್ರೀರಾಮ್ ನಗರದಲ್ಲಿರುವ ಬಾಡಿಗೆ ಮನೆಗೆ ತೆರಳಿದ್ದ ಪ್ರಶಾಂತ್ ನಂಬ್ಯಾರ್, ಸುಚಿತ್ರಾಳೊಂದಿಗೆ ಒಳ್ಳೆ ರೀತಿಯ ಸಂಬಂಧ ಇಟ್ಟುಕೊಂಡೇ ಮೂರು ದಿನ ಕಳೆದಿದ್ದ. ಮಾರ್ಚ್ 20ರಂದು ಆಕೆಯ ತಲೆಯನ್ನು ಗೋಡೆಗೆ ಬಡಿದಿದ್ದು ಕೊಲ್ಲುವ ಪ್ರಯತ್ನ ಮಾಡಿದ್ದ. ಕೊಸರಾಡಿದಾಗ ಆಕೆಯನ್ನು ನೆಲಕ್ಕೆ ಒತ್ತಿಯಿಟ್ಟು ಎಮರ್ಜೆನ್ಸಿ ಲೈಟರಿನ ಚಾರ್ಜರ್ ಕೇಬಲನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ. ನಗರದ ನಡುವೆ ಇದ್ದರೂ, ಆ ಬಾಡಿಗೆ ಮನೆ ಪಾಳು ಬಿದ್ದ ಕಟ್ಟಡದ ಹಿಂಭಾಗದಲ್ಲಿತ್ತು. ಹೀಗಾಗಿ ರಾತ್ರಿ ವೇಳೆ, ಯಾರಿಗೂ ತಿಳಿಯದ ರೀತಿ ಸುಚಿತ್ರಾ ದೇಹವನ್ನು ಕತ್ತರಿಸಿ, ಗುಂಡಿ ತೋಡಿ ಸಮಾಧಿ ಮಾಡಿದ್ದ. ಅಲ್ಲದೆ, ಸಮಾಧಿ ಮಾಡುವುದಕ್ಕೂ ಮುನ್ನ ಪೆಟ್ರೋಲ್ ಸುರಿದು ಅರೆಬರೆ ಸುಟ್ಟು ಹಾಕಿದ್ದ. ಸಮಾಧಿ ಜಾಗ ಸಂಶಯ ಬಾರದಂತೆ, ಪೂರ್ತಿ ಮಣ್ಣು ಮುಚ್ಚುವುದಕ್ಕು ಮುನ್ನ ಕಲ್ಲು, ಸಿಮೆಂಟ್ ಬ್ಲಾಕ್ ಗಳನ್ನು ತಂದು ಸುರಿದಿದ್ದ.
ಇದಲ್ಲದೆ, ಆಕೆಯ ಮೊಬೈಲನ್ನು ಎತ್ತಿಕೊಂಡು ತೃಶ್ಶೂರಿಗೆ ಒಯ್ದಿದ್ದು ಅಲ್ಲಿನ ನಿಗೂಢ ಜಾಗದಲ್ಲಿ ಸ್ವಿಚ್ ಆಫ್ ಮಾಡಿದ್ದ. ಸುಚಿತ್ರಾ ಕೊನೆಯ ಬಾರಿಗೆ ಆ ಜಾಗಕ್ಕೆ ಹೋಗಿ ಕಾಣೆಯಾಗಿದ್ದಾಳೆಂದು ಬಿಂಬಿಸಲು ಹಾಗೆ ಮಾಡಿದ್ದ. ಮೊಬೈಲ್ ಸಿಮ್ ತೆಗೆದು ತೃಶ್ಶೂರು- ಪಾಲಕ್ಕಾಡ್ ಹೈವೇಯಲ್ಲಿ ತುಂಡು ತುಂಡು ಮಾಡಿ ಎಸೆದು ಹೋಗಿದ್ದ. ಸುಚಿತ್ರಾ ಬಳಸುತ್ತಿದ್ದ ವ್ಯಾನಿಟಿ ಬ್ಯಾಗ್, ಬಟ್ಟೆ ಬರೆಗಳನ್ನು ಸಾಕ್ಷ್ಯಕ್ಕೂ ಸಿಗದಂತೆ ಸುಟ್ಟು ಬೂದಿ ಮಾಡಿದ್ದ. ಮನೆಯ ಒಳಗೆ ಫೀನಾಯಿಲ್ ಹಾಕಿ, ರಕ್ತದ ಕಲೆಗಳನ್ನು ಉಳಿಯದಂತೆ ಒರೆಸಿ ಕ್ಲೀನ್ ಮಾಡಿದ್ದ. ಸುಚಿತ್ರಾ ಬಳಸುತ್ತಿದ್ದ ಕಾಸ್ಮೆಟಿಕ್ ವಸ್ತುಗಳು, ದೇಹವನ್ನು ಕತ್ತರಿಸಲು ಬಳಸಿದ್ದ ಚೂರಿಯನ್ನು ಹೈವೇ ಬದಿಯ ಚರಂಡಿ ಒಂದಕ್ಕೆ ಎಸೆದಿದ್ದ.
ಏನೂ ಆಗಿಯೇ ಇಲ್ಲವೆಂಬಂತೆ ತನ್ನಷ್ಟಕ್ಕೆ ಕಾರಿನಲ್ಲಿ ಓಡಾಡುತ್ತಿದ್ದ ಪ್ರಶಾಂತ್ ನಂಬ್ಯಾರ್, ಕುಟುಂಬಸ್ಥರು, ಪೊಲೀಸರು ಎಲ್ಲರ ಮುಂದೆಯೂ ಸಂಭಾವಿತನ ರೀತಿಯಲ್ಲೇ ಇದ್ದ. ಕೆಲವು ದಿನಗಳ ನಂತರ, ಸುಚಿತ್ರಾ ಪಿಳ್ಳೆ ಕಾಣೆಯಾಗಿದ್ದಾಗಿ ಆಕೆಯ ತಾಯಿ ಪಾಲಕ್ಕಾಡ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಫೋನ್ ಕರೆ ಆಧರಿಸಿ, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದರು. ಆರೋಪಿ ಪ್ರಶಾಂತ್ ನಂಬ್ಯಾರ್ ಬಗ್ಗೆ ಸಂಶಯಗೊಂಡು ಆತನ ಮೊಬೈಲ್ ಪಡೆದು ತನಿಖೆ ನಡೆಸಿದಾಗ ಪೂರಕ ಮಾಹಿತಿಗಳು ಸಿಕ್ಕಿದ್ದವು.
ಕ್ಲೂ ಕೊಟ್ಟಿದ್ದೇ ಮೊಬೈಲ್ ಸರ್ಚಿಂಗ್
ಪೊಲೀಸರು ಪ್ರಶಾಂತನ ಮೊಬೈಲ್ ತೆಗೆದು ಸರ್ಚ್ ಮಾಡಿದಾಗ, ಆತ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ವಿಚಾರಗಳು ಗಮನ ಸೆಳೆದಿದ್ದವು. ಸುಚಿತ್ರಾ ನಾಪತ್ತೆಯಾಗಿದ್ದ ಮಾರ್ಚ್ 17ರ ಸಂದರ್ಭದಲ್ಲಿಯೇ ತನ್ನ ಪತ್ನಿಯನ್ನು ಸದ್ದಿಲ್ಲದೆ ಸಾಯಿಸುವುದು ಹೇಗೆ, ಸ್ಪಿರಿಚ್ವಲ್ ಗುರು ತನ್ನ ಪತ್ನಿಯನ್ನು ಸಾಯಿಸಿ ಮುಚ್ಚಿ ಹಾಕುವುದು ಹೇಗೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಗೂಗಲ್ ಗುರುವಿನಿಂದ ಉತ್ತರ ಪಡೆದಿದ್ದ. ಅಲ್ಲದೆ, ಯೂಟ್ಯೂಬಲ್ಲಿ ಕ್ರೈಮ್ ಸಿನಿಮಾಗಳನ್ನು ನೋಡುತ್ತಿದ್ದ ವಿಚಾರವೂ ಪೊಲೀಸರಿಗೆ ತಿಳಿದುಬಂದಿತ್ತು. ಪೊಲೀಸರು ಇದೇ ಸುಳಿವನ್ನು ಆಧರಿಸಿ ಪ್ರಶಾಂತ್ ನಂಬ್ಯಾರ್ ನನ್ನು ಬೆಂಡೆತ್ತಿದಾಗ, ನಿಜ ವಿಚಾರ ಹೊರಬಂದಿದೆ. ಇವೆಲ್ಲವನ್ನೂ ಕೋರ್ಟಿಗೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದು ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ. ಸಣ್ಣ ವಿಚಾರಕ್ಕೆ ಚೇಚಿ ಚೇಚಿ ಎನ್ನುತ್ತಿದ್ದ ಮಹಿಳೆಯನ್ನು ಭಯಾನಕವಾಗಿ ಕೊಂದು ಮುಗಿಸಿದ್ದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ, ಕೋರ್ಟಿನಲ್ಲಿ ಎರಡೇ ವರ್ಷದಲ್ಲಿ ವಿಚಾರಣೆ ಮುಗಿಸಿ ನ್ಯಾಯಾಧೀಶರು ಗರಿಷ್ಠ ಶಿಕ್ಷೆ ನೀಡುವಂತೆ ಮಾಡಿದ್ದಾರೆ.
18 circumstantial pieces of evidence were crucial in the beautician Suchitra murder case. The prosecution ensured punishment for the accused by unequivocally asserting these evidences before the court. The court sentenced accused Prashant Nambiar to life imprisonment and a fine of Rs 2 lakhs
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm