ಬ್ರೇಕಿಂಗ್ ನ್ಯೂಸ್
07-04-22 02:25 pm Source: Vijayakarnataka ಕ್ರೀಡೆ
ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ 56 ರನ್ ಸಿಡಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮಿನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇತಿಹಾಸದಲ್ಲಿಯೇ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆ ಮೂಲಕ ಐಪಿಎಲ್ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಕೆ.ಎಲ್ ರಾಹುಲ್ ಅವರ ದಾಖಲೆಯನ್ನು ಕಮಿನ್ಸ್ ಸರಿಗಟ್ಟಿದ್ದಾರೆ.
ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 162 ರನ್ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್, ಪ್ಯಾಟ್ ಕಮಿನ್ಸ್ ಅವರ ಅರ್ಧಶತಕದ ಬಲದಿಂದ 5 ವಿಕೆಟ್ಗಳ ಗೆಲುವು ಪಡೆಯಿತು. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿತು.162 ರನ್ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಒಂದು ಹಂತದಲ್ಲಿ 101 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು. ಈ ವೇಳೆ ಕ್ರೀಸ್ಗೆ ಬಂದ ಪ್ಯಾಟ್ ಕಮಿನ್ಸ್ ಕೇವಲ 15 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 4 ಬೌಂಡರಿಯೊಂದಿಗೆ ಅಜೇಯ 56 ರನ್ ಸಿಡಿಸಿದರು.
ಇದರಲ್ಲಿ ಪ್ಯಾಟ್ ಕಮಿನ್ಸ್ ಕೇವಲ 14 ಎಸೆತಗಳಲ್ಲಿಯೇ ಅರ್ಧಶತಕದ ಗಡಿ ದಾಟಿದ್ದರು. ಆ ಮೂಲಕ ಇಷ್ಟೇ ಎಸೆತಗಳಲ್ಲಿ ಈ ಹಿಂದೆ ಐಪಿಎಲ್ನ ವೇಗದ ಅರ್ಧಶತಕ ಸಿಡಿಸಿದ್ದ ಕೆ.ಎಲ್ ರಾಹುಲ್ ಅವರ ಜಂಟಿ ದಾಖಲೆಗೆ ಭಾಜನರಾದರು. 2018ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧ ರಾಹುಲ್ ಈ ಸಾಧನೆ ಮಾಡಿದ್ದರು.
ಕೊನೆಯಲ್ಲಿ 60 ರನ್ಗಳು ಅಗತ್ಯವಿದ್ದಾಗ ಪ್ಯಾಟ್ ಕಮಿನ್ಸ್ ಒಬ್ಬರೇ 56 ರನ್ಗಳನ್ನು ಸಿಡಿಸಿದ್ದು ವಿಶೇಷವಾಗಿತ್ತು. ವೆಂಕಟೇಶ್ ಅಯ್ಯರ್, ಕಮಿನ್ಸ್ ಬ್ಯಾಟಿಂಗ್ ಅಬ್ಬರವನ್ನು ನೋಡುತ್ತ ಮತ್ತೊಂದು ತುದಿಯಲ್ಲಿ ನಿಂತು ಬಿಟ್ಟಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಕಮಿನ್ಸ್ ಪಾಲಿಗೆ ಇದು ಮೊದಲನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಬೌಲಿಂಗ್ನಲ್ಲಿ ಅವರು ಎರಡು ವಿಕೆಟ್ ಕಿತ್ತಿದ್ದರು.
ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಹಲವು ಸ್ಪೋಟಕ ಅರ್ಧಶತಕಗಳನ್ನು ನೋಡಿದ್ದೇವೆ. ಕೆ.ಎಲ್ ರಾಹುಲ್ ಹಾಗೂ ಪ್ಯಾಟ್ ಕಮಿನ್ಸ್ ಬಳಿಕ ಈ ಪಟ್ಟಿಯಲ್ಲಿ ಸುನೀಲ್ ನರೈನ್ ಎರಡನೇ ಸ್ಥಾನದಲ್ಲಿದ್ದಾರೆ. ಕೆಕೆಆರ್ನ ಮತ್ತೊರ್ವ ಆಟಗಾರ ನರೈನ್ 2017ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು.
ಆ ವೇಳೆ ಕ್ರಿಸ್ ಲೀನ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಸುನೀಲ್ ನರೈನ್ ಅವರು ಪವರ್ಪ್ಲೇನಲ್ಲಿ 100 ರನ್ಗಳ ಜೊತೆಯಾಟವನ್ನು ಆಡಿದ್ದರು. ಕೆಕೆಆರ್ನ ಮಾಜಿ ಆಟಗಾರ ಯೂಸಫ್ ಪಠಾಣ್ 2014ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅಂದಿನ ಪಂದ್ಯದಲ್ಲಿ ಯೂಸಫ್ ಕೇವಲ 22 ಎಸೆತಗಳಲ್ಲಿ 72 ರನ್ ಸಿಡಿಸಿದ್ದರು.
Ipl 2022 Pat Cummins Equalled Kl Rahul's Record For The Fastest Fifty In The History Of The Ipl.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm