ಬ್ರೇಕಿಂಗ್ ನ್ಯೂಸ್
06-04-22 01:31 pm Source: Vijayakarnataka ಕ್ರೀಡೆ
ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ನೀಡಿದ್ದ 170 ರನ್ ಗುರಿ ಹಿಂಬಾಲಿಸಿದ ಆರ್ಸಿಬಿ ಒಂದು ಹಂತದಲ್ಲಿ 87 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಮೂಲಕ ಕೇವಲ 42 ಎಸೆತಗಳಲ್ಲಿ ಆರ್ಸಿಬಿಗೆ 82 ರನ್ ಅಗತ್ಯವಿತ್ತು. ಈ ವೇಳೆ ಆರ್ ಅಶ್ವಿನ್ ಅವರ 4ನೇ ಓವರ್ನಲ್ಲಿ ದಿನೇಶ್ ಕಾರ್ತಿಕ್ 19 ರನ್ ಸಿಡಿಸಿದ ಬಳಿಕ ಪಂದ್ಯದ ದಿಕ್ಕು ಆರ್ಸಿಬಿ ಪರ ಬದಲಾಯಿತು.
ಕಾರ್ತಿಕ್ಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಶಹಬಾಜ್ ಅಹ್ಮದ್(45) ಕೂಡ ಆರ್ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. 4 ವಿಕೆಟ್ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಹಾಗೂ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.
"ಒತ್ತಡವನ್ನು ಸಂಪೂರ್ಣವಾಗಿ ಹೊರಗೆಳೆಯಲು ಒಂದು ಮಹತ್ವದ ಪಾತ್ರ ನಿಮಗೆ ಬೇಕಾಗುತ್ತದೆ. ಇದನ್ನು ನಾವು ದಿನೇಶ್ ಕಾರ್ತಿಕ್ ಅವರಲ್ಲಿ ಕಂಡುಕೊಂಡಿದ್ದೇವೆ. ಒತ್ತಡದ ಸನ್ನಿವೇಶದಲ್ಲಿ ಅವರು ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಅವರು ನಿಜಕ್ಕೂ ಶಾಂತ ಸ್ವರೂಪದ ವ್ಯಕ್ತಿ ಹಾಗೂ ನಮ್ಮ ತಂಡಕ್ಕೆ ಪ್ರಮುಖ ಅಸ್ತ್ರ," ಎಂದು ಡು ಪ್ಲೆಸಿಸ್ ಗುಣಗಾನ ಮಾಡಿದರು.
"18ನೇ ಓವರ್ವರೆಗೂ ನಾವು ಅತ್ಯುತ್ತಮವಾಗಿ ಬೌಲ್ ಮಾಡಿದ್ದೇವೆ ಹಾಗೂ ಕೊನೆಯಲ್ಲಿ ಜೋಸ್ ಬಟ್ಲರ್ ಕೆಲ ಅತ್ಯುತ್ತಮ ಶಾಟ್ಗಳನ್ನು ಆಡಿದರು. ಪಿಚ್ ಹಾಗೂ ಸನ್ನಿವೇಶವನ್ನು ಆಧರಿಸಿ ನಾವು ಅಂದುಕೊಂಡಿದ್ದ ಮೊತ್ತಕ್ಕಿಂತ ಸ್ವಲ್ಪ ಜಾಸ್ತಿ ರನ್ಗಳನ್ನು ಬಿಟ್ಟುಕೊಟ್ಟಿದ್ದೇವೆ," ಎಂದು ಹೇಳಿದರು.
"ಪಂದ್ಯಗಳನ್ನು ಗೆಲ್ಲಲು ತಂಡದ ಸಂಪೂರ್ಣ ಸಾಮರ್ಥ್ಯ ಹೊರ ಬಂದಿರುವುದು ನಮ್ಮ ಪಾಲಿನ ಅದ್ಭುತ ಸಂಗತಿಯಾಗಿದೆ. ಶಹಬಾಝ್ ಅಹ್ಮದ್ ಅವರನ್ನು ಎಲ್ಲರೂ ಸಣ್ಣ ಹುಡುಗ ಎಂದು ಭಾವಿಸಿದ್ದಾರೆ. ಆದರೆ ಅವರು ದೊಡ್ಡ ಅಂತರದಲ್ಲಿ ಸಿಕ್ಸರ್ ಬಾರಿಸಬಲ್ಲರು. ಚೆಂಡು ತೇವವಾಗಿದ್ದರಿಂದ ಅವರಿಗೆ ನಾವು ಬೌಲಿಂಗ್ ಕೊಟ್ಟಿರಲಿಲ್ಲ," ಎಂದು ತಿಳಿಸಿದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಾಕಷ್ಟು ತಯಾರಿ ನಡೆಸಿದ್ದೇನೆ ಹಾಗೂ ಅದರಂತೆ ಇದೀಗ ಉತ್ತಮ ಪ್ರದರ್ಶನ ತೋರುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು.
"ನನಗೆ ನಾನೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ನಾನು ಅಂದುಕೊಂಡಿದ್ದ ಹಾದಿಯಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕಳೆದ ಆವೃತ್ತಿಗಿಂತ ನನ್ನ ತಯಾರಿ ಅತ್ಯುತ್ತಮವಾಗಿದೆ. ಇದರ ಶ್ರೇಯ ತರಬೇತಿಯಲ್ಲಿ ನನ್ನ ಜೊತೆಗಿದ್ದ ವ್ಯಕ್ತಿಗೆ ಸಲ್ಲಬೇಕು," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
Ipl 2022He Is Really Calm And Such A Great Asset To UsRcb Skipper Faf Du Plessis Praised On Dinesh Karthik For Match Finishing Job.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm