ಬ್ರೇಕಿಂಗ್ ನ್ಯೂಸ್
04-03-22 08:37 pm HK Desk news ಕ್ರೀಡೆ
ನವದೆಹಲಿ, ಮಾ.4: ಆಸ್ಟ್ರೇಲಿಯಾ ಕ್ರಿಕೆಟ್ಟಿನ ದಂತಕತೆ ಎಂದೇ ಹೆಸರಾಗಿದ್ದ , ಸ್ಪಿನ್ ಮಾಂತ್ರಿಕ ಶೇನ್ ವಾರ್ನೆ ಥಾಯ್ಲೆಂಡ್ ನಲ್ಲಿ ನಿಗೂಢ ಸಾವು ಕಂಡಿದ್ದಾರೆ. ಸಾವಿಗೆ ಹೃದಯಾಘಾತ ಕಾರಣ ಆಗಿರಬೇಕೆಂದು ಶಂಕಿಸಲಾಗಿದೆ.
ಥಾಯ್ಲೆಂಡ್ ದ್ವೀಪ ಸಮೂಹದಲ್ಲಿ ತನ್ನ ಸ್ವಂತ ವಿಲ್ಲಾ ಖರೀದಿಸಿ, ಅಲ್ಲಿಯೇ ಜೀವನ ಕಳೆಯುತ್ತಿದ್ದ ಶೇನ್ ವಾರ್ನೆ ಶುಕ್ರವಾರ ಕೊಠಡಿ ಒಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೊಹ್ ಸಮು ಎಂಬಲ್ಲಿನ ವಿಲ್ಲಾದಲ್ಲಿ ಸಾವು ಕಂಡಿದ್ದಾರೆ. ವೈದ್ಯರ ಪ್ರಯತ್ನದ ಹೊರತಾಗಿಯೂ ಸಾವು ಸಂಭವಿಸಿದೆ ಎಂದು ಅವರ ಮ್ಯಾನೇಜ್ಮೆಂಟ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
1992ರಿಂದ 2007ರ ವರೆಗೆ 145 ಟೆಸ್ಟ್ ಮತ್ತು 194 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ವಾರ್ನೆ, ಒಟ್ಟು 1001 ವಿಕೆಟ್ ಪಡೆದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಅವರು, 708 ವಿಕೆಟ್ ಪಡೆಯುವ ಮೂಲಕ ಎರಡನೇ ಗರಿಷ್ಠ ವಿಕೆಟ್ ಕಿತ್ತ ಬೌಲರ್ ಎಂಬ ಶ್ರೇಯ ಹೊಂದಿದ್ದಾರೆ. ಕ್ರಿಕೆಟ್ ಜೀವನದಿಂದ ನಿವೃತ್ತಿಯಾದ ಬಳಿಕವೂ ಕಮೆಂಟರಿಯಲ್ಲಿ ತೊಡಗಿಸಿಕೊಂಡಿದ್ದ ವಾರ್ನೆ, ಕ್ರಿಕೆಟ್ ಗ್ರೌಂಡಿನಲ್ಲಿ ತನ್ನ ಇರವನ್ನು ತೋರಿಸಿಕೊಂಡಿದ್ದರು.
2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಕ್ರಿಕೆಟ್ ಆರಂಭಗೊಂಡಾಗ, ಶೇನ್ ವಾರ್ನೆ ಕ್ರಿಕೆಟ್ಟಿನಿಂದ ನಿವೃತ್ತಿಯಾಗಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ತಂಡ ಮೊದಲ ಸೀಸನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಅವರ ಕೊಡುಗೆ ಮಹತ್ವದ್ದಿತ್ತು.
Shane Warne, Australia cricket legend, died aged 52 on Friday. “Shane was found unresponsive in his villa and despite the best efforts of medical staff, he could not be revived,” Warne’s management confirmed in a statement to Australian media outlet Fox Sports.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm