ಬ್ರೇಕಿಂಗ್ ನ್ಯೂಸ್
01-08-20 02:12 pm Headline Karnataka News Network ಕ್ರೀಡೆ
ಮುಂಬಯಿ: ಐಪಿಎಲ್ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ. ಸೆ. 19ರಿಂದ ನ. 8ರ ವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ. ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಹಾಗೆಯೇ ಬಿಸಿಸಿಐ ಕೂಡ ಕೆಲವು ವಿಷಯಗಳಲ್ಲಿ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಲಿದೆ. ಸಭೆಯಲ್ಲಿ ಚರ್ಚೆಗೊಳಗಾಗುವ ಕೆಲವು ಮಹತ್ವದ ಸಂಗತಿಗಳು ಹೀಗಿವೆ…
ವೇಳಾಪಟ್ಟಿ
ಕೂಟದ ದಿನಾಂಕ ಈಗಾಗಲೇ ಅಂತಿಮಗೊಂಡಿದೆ. ಆದರೆ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕು. ಇದು ಖಚಿತಗೊಂಡರೆ ಫ್ರಾಂಚೈಸಿಗಳಿಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಲು ಅನುಕೂಲವಾಗುತ್ತದೆ. ಯುಎಇಯಲ್ಲಿರುವ 3 ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಫ್ರಾಂಚೈಸಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯ.
ನೀತಿ, ನಿಯಮಗಳು
ಎಲ್ಲ ಫ್ರಾಂಚೈಸಿಗಳಿಗೆ ಹಾಗೂ ಬಿಸಿಸಿಐಗೆ ಇರುವ ದೊಡ್ಡ ತಲೆನೋವು ಕೊರೊನಾ. ಸಾಮಾನ್ಯವಾಗಿ ಐಪಿಎಲ್ ನಡೆಸಲು ಬಿಸಿಸಿಐ ತನ್ನದೇ ಆದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್ಒಪಿ) ಹೊಂದಿರುತ್ತದೆ. ಈಗ ಕೊರೊನಾ ಇರುವುದರಿಂದ ಅದಕ್ಕೆ ತಕ್ಕಂತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಜೈವಿಕ ಸುರಕ್ಷಾ ವಲಯ, ಯುಎಇಯ ಏಕಾಂತವಾಸದ ನಿಯಮ, ಅಭ್ಯಾಸ ಹಾಗೂ ಪಂದ್ಯದ ವೇಳೆ ಎಷ್ಟು ಜನರಿಗೆ ಒಟ್ಟಿಗೆ ಇರಬಹುದು, ಕೂಟದ ವೇಳೆ ಬಿಸಿಸಿಐನ ವೈದ್ಯರ ಮಾತೇ ಅಂತಿಮವೇ ಅಥವಾ ಫ್ರಾಂಚೈಸಿಗಳ ಪ್ರತ್ಯೇಕ ವೈದ್ಯರಿಗೆ ಅಧಿಕಾರವಿರುತ್ತದೆಯೇ… ಇಂತಹ ಹಲವು ಪ್ರಶ್ನೆಗಳು ಫ್ರಾಂಚೈಸಿಗಳ ಮುಂದಿವೆ.
ವಿದೇಶಿ ಆಟಗಾರರ ಲಭ್ಯತೆ?
ಟಿ20 ವಿಶ್ವಕಪ್ ರದ್ದಾಗುತ್ತಿದ್ದಂತೆಯೆ ಎಲ್ಲ ದೇಶಗಳಲ್ಲಿ ಟಿ20 ಲೀಗ್ ದಿಢೀರನೆ ಆರಂಭವಾಗಿವೆ. ಆದ್ದರಿಂದ ಐಪಿಎಲ್ನಲ್ಲಿ ವಿದೇಶಿ ಆಟಗಾರರು ಸಮಯಕ್ಕೆ ಸರಿಯಾಗಿ ಲಭ್ಯರಾಗುವುದು, ಅವರು ಯುಎಇಯ ಕೊರೊನಾ ನಿಯಮಗಳನ್ನು ದಾಟಿ ಆಟಕ್ಕೆ ಲಭ್ಯವಾಗುವುದು… ಇವೆಲ್ಲ ವಿಮರ್ಶಿಸಬೇಕಾದ ಸಂಗತಿಗಳಾಗಿವೆ.
ವಿಂಡೀಸ್ ಆಟಗಾರರು ಸೆ. 10ಕ್ಕೆ ಸಿಪಿಎಲ್ ಮುಗಿಸಿ ಐಪಿಎಲ್ಗೆ ಬರಬೇಕು. ಹಾಗೆಯೇ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ ಇದೆ. ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಸೀಮಿತ ಓವರ್ಗಳ ಸರಣಿ ಮುಗಿಯುವುದೇ ಸೆ. 15ಕ್ಕೆ. ಅವರು ಅದೇ ದಿನ ಯುಇಎಗೆ ಬಂದರೂ ಕನಿಷ್ಠ ಒಂದು ವಾರ ಕೂಟಕ್ಕೆ ಲಭ್ಯರಿರುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೆಚ್ಚಿರುವುದರಿಂದ ಅಲ್ಲಿ ವಿಮಾನಗಳನ್ನು ನಿಷೇಧಿಸಲಾಗಿದೆ. ಆಫ್ರಿಕಾ ಆಟಗಾರರನ್ನು ಕರೆಸಿಕೊಳ್ಳಲು ಏನು ದಾರಿ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕಾಗಿದೆ.
ಕುಟುಂಬಕ್ಕೆ ಅವಕಾಶ ನೀಡಬೇಕೇ?
ಬಹುಮುಖ್ಯವಾಗಿರುವ ಇನ್ನೊಂದು ಪ್ರಶ್ನೆಯೆಂದರೆ, ಆಟಗಾರರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಒಯ್ಯಲು ಅವಕಾಶವಿದೆಯೇ ಎನ್ನುವುದು. ಕೋವಿಡ್ ನಿಂದಾಗಿ ಈ ಪ್ರಶ್ನೆ ಉದ್ಭವಿಸಿದೆ. ಕುಟುಂಬದವರನ್ನು ಒಯ್ಯದಿದ್ದರೆ 2 ತಿಂಗಳಿಗೂ ದೀರ್ಘ ಕಾಲ ಆಟಗಾರರು ಪರಿವಾರದ ಸದಸ್ಯರಿಂದ ದೂರವಿರಬೇಕಾಗುತ್ತದೆ ಎನ್ನುವುದು ಒಂದು ಸಮಸ್ಯೆ. ಒಯ್ದರೆ ಕುಟುಂಬ ಸದಸ್ಯರು ಯುಎಇಯ ಹೊಟೇಲ್ ಕೊಠಡಿಗಳಲ್ಲಿ ಬಂಧಿಗಳಾಗಬೇಕಾಗುತ್ತದೆ ಎನ್ನುವ ಇಕ್ಕಟ್ಟು! ಈ ಬಗ್ಗೆ ರವಿವಾರದ ಸಭೆಯಲ್ಲಿ ಬಿಸಿಸಿಐ ಖಚಿತ ಉತ್ತರ ಕಂಡುಕೊಳ್ಳಬೇಕಾಗಿದೆ.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm