ಬ್ರೇಕಿಂಗ್ ನ್ಯೂಸ್
07-07-21 01:19 pm MYKHEL: Madhukara Shetty ಕ್ರೀಡೆ
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ನ ಸಾಕಷ್ಟು ಪ್ರಮುಖ ಆಟಗಾರರು ಮಾಜಿ ನಾಯಕ ಎಂಎಸ್ ಧೋನಿಗೆ ಶುಭಹಾರೈಸಿದ್ದಾರೆ.
ಎಂಎಸ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಳೆದ ವರ್ಷ ಆಗಸ್ಟ್ 15ರಂದು ನಿವೃತ್ತಿಯನ್ನು ಘೋಷಿಸಿದರು. ಅಲ್ಲಿಗೆ ಧೋನಿಯ ಸುದೀರ್ಘ ವರ್ಣರಂಜಿತ ಅಂತಾರಾಷ್ಟ್ರೀಯ ವೃತ್ತಿ ಬದುಕು ಅಂತ್ಯವಾಯಿತು. ಗಮನಾರ್ಹ ವಿಷಯವೆಂದರೆ 2019ರ ವಿಶ್ವಕಪ್ನ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಘಾತಕಾರಿ ಸೋಲಿನ ನಂತರ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಂತರವನ್ನು ಕಾಯ್ದುಕೊಂಡಿದ್ದರು.
2007ರಲ್ಲಿ ಎಂಎಸ್ ಧೋನಿಗೆ ನಾಯಕತ್ವದ ಜವಾಬ್ಧಾರಿ ನೀಡಿದಾಗ ಎಲ್ಲರಿಗೂ ಅಚ್ಚರಿ ಮೂಡಿತ್ತು. ಆದರೆ ಮೊದಲ ಅವಕಾಶದಲ್ಲೇ ಧೋನಿ ತಾನೋರ್ವ ಅತ್ಯಂತ ಚಾಣಾಕ್ಷ ನಾಯಕ ಎಂದು ಸಾಬೀತುಪಡಿಸಿದ್ದರು. ಟಿ20 ವಿಶ್ವಕಪ್ನಲ್ಲಿ ಯುವ ತಂಡವನ್ನು ಕಟ್ಟಿಕೊಂಡು ಧೋನಿ ಗೆದ್ದುಬೀಗಿದ್ದರು. 200 ಏಕದಿನ ಪಂದ್ಯಗಳಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಧೋನಿ 110 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರು.
A legend and an inspiration! 🙌 🙌
— BCCI (@BCCI) July 6, 2021
Here's wishing former #TeamIndia captain @msdhoni a very happy birthday. 🎂 👏#HappyBirthdayDhoni pic.twitter.com/QFsEUB3BdV
ತವರಿನಲ್ಲಿ ಆಡಿದ 73 ಪಂದ್ಯಗಳಲ್ಲಿ 43ರಲ್ಲಿ ಗೆಲುವು ಸಾಧಿಸಿದ್ದರು. ಧೋನಿ 90 ಟೆಸ್ಟ್, 348 ಏಕದಿನ ಹಾಗೂ 98 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 10,000ಕ್ಕೂ ಅಧೀಕ ರನ್ಗಳಿಸಿರುವ ಧೋನಿ ಟೆಸ್ಟ್ ಮಾದರಿಯಲ್ಲಿ 5 ಸಾವಿರಕ್ಕೂ ಅಧಿಕ ರನ್ ಸಾಧನೆಯನ್ನು ಮಾಡಿದ್ದಾರೆ. ಎಂಎಸ್ ಧೋನಿಯ 40ನೇ ಹುಟ್ಟುಹಬ್ಬಕ್ಕೆ ಭಾರತೀಯ ಕ್ರಿಕೆಟ್ನ ತಾರೆಗಳು ಶುಭಹಾರೈಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿ ಜೊತೆಗಿನ ಫೋಟೋವನ್ನು ಹಂಚಿಕೊಂಡು ಶುಭಹಾರೈಸಿದ್ದು ಸುರೇಶ್ ರೈಮಾ, ಹಾರ್ದಿಕ್ ಪಾಂಡ್ಯ ಇಶಾಂತ್ ಶರ್ಮಾ ಸಹಿತ ಸಾಕಷ್ಟು ಕ್ರಿಕೆಟಿಗರು ಧೋನಿಗೆ ಶುಭಾಶಯ ತಿಳಿಸಿದ್ದಾರೆ.
(Kannada Copy of Mykhel Kannada)
Super Birthday to Namma #Thala @msdhoni 😍
— Chennai Super Kings - Mask P😷du Whistle P🥳du! (@ChennaiIPL) July 6, 2021
The one, the only one, now and forever who makes 💛 go 𝒯𝒽𝒶𝓁𝒶 𝒯𝒽𝒶𝓁𝒶! #THA7A #WhistlePodu #Yellove 🦁 pic.twitter.com/8U9BoJDLrZ
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:10 pm
Udupi Correspondent
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm