ಬ್ರೇಕಿಂಗ್ ನ್ಯೂಸ್
22-06-21 04:11 pm MYKHEL: Madhukara Shetty ಕ್ರೀಡೆ
ಒಲಿಂಪಿಕ್ಸ್ಗೆ ಇನ್ನೇನು ಒಂದು ತಿಂಗಳಷ್ಟೇ ದೂರದಲ್ಲಿದ್ದೇವೆ. ಈ ಮಹತ್ವದ ಕ್ರೀಡಾಕೂಟ ಈ ಬಾರಿ ಜಪಾನ್ನ ಟೋಕಿಯೋದಲ್ಲಿ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇಂದು ಅಂದರೆ ಜೂನ್ 22ರಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪ್ರತಿಷ್ಟಿತ ಕ್ರೀಡಾಕೂಟವಾಗಿರುವ ಒಲಿಂಪಿಕ್ಸ್ ಸುದೀರ್ಘ ಇತಿಹಾಸವಿದೆ. ಈಗ ನಡೆಸುತ್ತಿರುವ ಆಧುನಿಕ ಒಲಿಂಪಿಕ್ಸ್ಗೆ ಕ್ರಿಸ್ತ ಪೂರ್ವ 8ನೇ ಶತಮಾನದಿಂದ ಕ್ರಿಸ್ತ ಶಕ 4ನೇ ಶತಮಾನದವರೆಗೆ ಗ್ರೀಸ್ನ ಒಲಿಂಪಿಯಾದಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟವೇ ಪ್ರೇರಣೆಯಾಗಿತ್ತು. ಫ್ರಾನ್ಸ್ನ ಇತಿಹಾಸಕಾರನೋರ್ವ 19ನೇ ಶತಮಾನದಲ್ಲಿ ಈ ಮಹತ್ವದ ಕ್ರೀಡಾಕೂಟದ ಅಗತ್ಯವನ್ನು ಮನಗಂಡರು. ಇದು ಆಧುನಿಕ ಒಲಿಂಪಿಕ್ಸ್ಗೆ ನಾಂದಿಯಾಯಿತು
ಫ್ರಾನ್ಸ್ನ ಖ್ಯಾತ ಇತಿಹಾಸಕಾರ ಬೆರೋನ್ ಫಿರ್ರೆ ಡಿ ಕೌಬರ್ಟೀನ್ ಈ ಆಧುನಿಕ ಒಲಿಂಪಿಕ್ಸ್ನ ಹುಟ್ಟಿಗೆ ಕಾರಣವಾದ ವ್ಯಕ್ತಿ. ಇವರು 1894ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(IOC)ಯನ್ನು ಸ್ಥಾಪಿಸಿದರು. ಇದು 1896ರಲ್ಲಿ ಅಥೇನ್ಸ್ನಲ್ಲಿ ಮೊದಲ ಆಧುನಿಕ ಒಲಿಂಪಿಕ್ಸ್ ಆಯೋಜನೆಗೆ ಮಹತ್ವದ ಅಡಿಗಲ್ಲಾಗಿತ್ತು. ಈ ಮೂಲಕ ಬೆರೋನ್ ಫಿರ್ರೆ ಡಿ ಕೌಬರ್ಟೀನ್ ಅವರನ್ನು ಒಲಿಂಪಿಕ್ಸ್ನ ಪಿತಾಮಹ ಎನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಮಂಡಳಿ(IOC) ಈ ಪ್ರತಿಷ್ಟಿತ ಕ್ರೀಡಾಕೂಟದ ಆಡಳಿತ ಮಂಡಳಿಯಾಗಿದ್ದು ಈ ಕ್ರೀಡಾಕೂಟ ಸಂಪೂರ್ಣ ರೂಪುರೇಶೆಯ ಅಧಿಕಾರವನ್ನು ಹೊಂದಿದೆ. ಈ ಮಂಡಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಡಕ್ಕೆ ಉತ್ತೇಜನ ನೀಡುವ ದೃಷ್ಟಿಕೋನದಿಂದ 1948ರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನು ಪರಿಚಯಿಸಲಾಗಿದೆ. ಆಧುನಿಕ ಕ್ರೀಡಾಕೂಟ ಆರಂಭದ ನೆನಪಿಗಾಗಿ ಜೂನ್ 23ರಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ವಯಸ್ಸು ಮತ್ತು ದೈಹಿಕ ಸಾಮರ್ಥ್ಯದ ಯಾವುದೇ ತಾರತಮ್ಯವಿಲ್ಲದೆ ವಿಶ್ವಾದ್ಯಂತ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸುವ ಉದ್ಧೇಶದೊಂದಿಗೆ ಈ ಒಲಿಂಪಿಕ್ಸ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗಿಯಾಗುವಂತೆ ಮಾಡುವ ಹಿನ್ನೆಲೆಯಲ್ಲಿ ಈ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನಾಚರಣೆ ಮಹತ್ವದ ಪಾತ್ರವಹಿಸುತ್ತಿದೆ. 1978ರ ಒಲಿಂಪಿಕ್ಸ್ ಆವೃತ್ತಿಯ ನಂತರ ಎಲ್ಲಾ ದೇಶಗಳು ಕೂಡ ಒಲಿಂಪಿಕ್ಸ್ ದಿನವನ್ನು ಆಯೋಜನೆ ಮಾಡಲು ಶಿಫಾರಸು ಮಾಡುವ ಮೂಲಕ ಉತ್ತೇಜಿಸಲಾಗಿದೆ.
ಒಲಿಂಪಿಕ್ಸ್ನಲ್ಲಿ ಭಾರತ 1900 ರಲ್ಲಿ ಮೊದಲ ಬಾರಿಗೆ ಭಾಗವಹಿಸಿತು. ಸುದೀರ್ಘ ಕಾಲದಿಂದ ಈ ಮಹತ್ವದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರೂ ಪದಕ ಗಳಿಕೆಯಲ್ಲಿ ಭಾರತ ಹೇಳಿಕೊಳ್ಳುವಂತಾ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲ ವಿಭಾಗಗಳಲ್ಲಿ ಸ್ಪೂರ್ತಿದಾಯದ ಬೆಳವಣಿಗೆಗಳು ನಡೆಯುತ್ತಿದೆ. ಭಾರತದಲ್ಲಿ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಪ್ರತಿವರ್ಷ ಒಲಿಂಪಿಕ್ ಡೇ ಓಟವನ್ನು ಆಯೋಜಿಸುತ್ತದೆ ಈ ಮೂಲಕ ಹೆಚ್ಚಿನ ಜನರು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ
(Kannada Copy of Gizbot Kannada)
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm