ಬ್ರೇಕಿಂಗ್ ನ್ಯೂಸ್
15-04-21 10:58 am Source: MYKHEL ಕ್ರೀಡೆ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿದ್ದರೂ ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ಗೆ ಬಂದಾಗ ಪ್ರತಿ ಬಾರಿಯೂ ನೀರಸ ಪ್ರದರ್ಶನವನ್ನೇ ನೀಡುತ್ತಿದ್ದರು. ಕಳೆದ ಆವೃತ್ತಿಯಲ್ಲಂತೂ ಪಂಜಾಬ್ ಪರವಾಗಿ ಆಘಾತಕಾರಿ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಆದರೆ ಈ ಬಾರಿ ಆರ್ಸಿಬಿ ಪಾಳಯವನ್ನು ಸೇರಿಕೊಂಡಿರುವ ಮ್ಯಾಕ್ಸ್ವೆಲ್ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಮ್ಯಾಕ್ಸ್ವೆಲ್ ಯಶಸ್ಸಿನ ಹಿಂದೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಈ ಆವೃತ್ತಿಯಲ್ಲಿ ಹೊಸ ತಂಡದ ಪರವಾಗಿ ಆಡುತ್ತಿರುವುದು ಗ್ಲೆನ್ ಮ್ಯಾಕ್ಸ್ವೆಲ್ಗೆ ನಿಜವಾಗಿಯೂ ಸಹಾಯವಾಗುತ್ತಿದೆ. ಎರಡು ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ ವಿರಾಟ್ ಕೊಹ್ಲಿ ಜೊತೆಗೆ ಅದ್ಭುತವಾಗಿ ಆಡಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿ ಮ್ಯಾಕ್ಸ್ವೆಲ್ ಪಾಲಿಗೆ ದೊಡ್ಡ ಶಕ್ತಿಯಾಗಿದ್ದಾರೆ ಎನಿಸುತ್ತದೆ" ಎಂದು ಬ್ರೇಟ್ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ! "ವಿರಾಟ್ ಕೊಹ್ಲಿ ಮ್ಯಾಕ್ಸ್ವೆಲ್ ಅವರ ಏಕಾಗ್ರತೆಯನ್ನು ಮರಳುವಂತೆ ಮಾಡಿದ್ದಾರೆ. ಅವರ ಎದೆ ಬಡಿತವನ್ನು ಕಡಿಮೆಯಾಗುವಂತೆ ಮಾಡಿದ್ದಾರೆ. ಮ್ಯಾಕ್ಸ್ವೆಲ್ಗೆ ಕೊಹ್ಲಿ ಅತ್ಯುತ್ತಮ ಜೊತೆಗಾರನಾಗಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಅತ್ಯುತ್ತಮ ಮನಸ್ಥಿತಿಯನ್ನು ಅವರು ವ್ಯಕ್ತಪಡಿಸಿದ್ದು ಟೂರ್ನಿಯನ್ನು ಅದ್ಭುತವಾಗಿ ಆರಂಭಿಸಿದ್ದಾರೆ" ಎಂದು ಮ್ಯಾಕ್ಸ್ವೆಲ್ ಮೇಲೆ ವಿರಾಟ್ ಕೊಹ್ಲಿ ಬೀರಿದ ಪರಿಣಾಮವನ್ನು ಬ್ರೇಟ್ ಲೀ ವಿವರಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 41 ಎಸೆತಗಳಲ್ಲಿ 59 ರನ್ ಬಾರಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದರು. ಎಂಎ ಚಿದಂಬರಂ ಸ್ಟೇಡಿಂನ ಕಠಿಣವಾದ ಪಿಚ್ನಲ್ಲಿ ಆರ್ಸಿಬಿ ತಂಡದ ಪ್ರಮುಖ ಆಟಗಾರರು ಶೀಘ್ರವಾಗಿ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್ವೆಲ್ ಇನ್ನಿಂಗ್ಸ್ ತಂಡವ ಮೊತ್ತವನ್ನು ಉತ್ತಮಗೊಳಿಸಲು ಕಾರಣವಾಗಿತ್ತು.
ಗ್ಲೆನ್ ಮ್ಯಾಕ್ಸ್ವೆಲ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬಾರಿಸಿದ ಅರ್ಧ ಶತಕ ಕಳೆದ ನಾಲ್ಕು ಆವೃತ್ತಿಗಳಲ್ಲಿ ಬಂದ ಮೊದಲ 50+ ರನ್ ಆಗಿದೆ. ಇದು ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಬಾರಿಸಿದ ಕೇವಲ 7ನೇ ಅರ್ಧ ಶತಕವಾಗಿದೆ.
This News Article Is A Copy Of MYKHEL
15-10-25 03:35 pm
Bangalore Correspondent
ರಘು ದೀಕ್ಷಿತ್ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ; 50ರ...
15-10-25 03:32 pm
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ರೈಲಿನಡಿಗೆ...
14-10-25 11:24 am
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 05:36 pm
Mangalore Correspondent
ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು ;...
15-10-25 12:12 pm
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm