ಬ್ರೇಕಿಂಗ್ ನ್ಯೂಸ್
14-04-21 09:18 pm Source: MYKHEL ಕ್ರೀಡೆ
ರಾಜಸ್ಥಾನ್ ರಾಯಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಎಡವಿ ಸೋಲು ಕಂಡಿತು. ಈ ಸೋಲಿನ ನಂತರ ಮತ್ತೊಂದು ಆಘಾತ ರಾಜಸ್ಥಾನ ತಂಡಕ್ಕೆ ಎದುರಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವ ಅಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಪಡೆಯುವ ವೇಳೆ ಬೆನ್ ಸ್ಟೋಕ್ಸ್ ಬೆರಳಿಗೆ ಗಾಯಮಾಡಿಕೊಂಡಿದ್ದರು. ಈಗ ಅವರ ಬೆರಳಿನ ಮೂಳೆ ಮುರಿತಕ್ಕೊಳಗಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಮುಖ ಆಲ್ರೌಂಡರ್ ಅವರನ್ನು ಮುಂದಿನ ಪಂದ್ಯಗಳಿಂದ ರಾಜಸ್ಥಾನ್ ರಾಯಲ್ಸ್ ಕಳೆದುಕೊಳ್ಳಲಿದೆ.
ಆದರೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಅವರ ಸ್ಥಾನಕ್ಕೆ ಸಮರ್ಥ ಪರ್ಯಾಯ ಆಟಗಾರನನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬೇಕಿದೆ. ಹಾಗಾದರೆ ತಂಡದಲ್ಲಿರುವ ಆಟಗಾರರ ಪೈಕಿ ಬೆನ್ ಸ್ಟೋಕ್ಸ್ ಸ್ಥಾನವನ್ನು ಆಕ್ರಮಿಸಬಲ್ಲ ಐವರು ಆಟಗಾರರು ಯಾರು ಎಂದು ಬನ್ನಿ ನೋಡೋಣ..
ಡೇವಿಡ್ ಮಿಲ್ಲರ್
ಬೆನ್ ಸ್ಟೋಕ್ಸ್ ಸ್ಥಾನವನ್ನು ಅತ್ಯಂತ ಸಮರ್ಥವಾಗಿ ತುಂಬಬಲ್ಲ ಪ್ರಮುಖ ಆಟಗಾರ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್. ದಕ್ಷಿಣ ಆಫ್ರಿಕಾದ ಈ ಆಟಗಾರ ಬೆನ್ ಸ್ಟೋಕ್ ಶೈಲಿಯಲ್ಲಿಯೇ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಬೌಲಿಂಗ್ ಸಾಮರ್ಥ್ಯವಿಲ್ಲದಿದ್ದರೂ ಬ್ಯಾಟಿಂಗ್ನಲ್ಲಿ ತಂಡಕ್ಕೆ ಅದ್ಭುತವಾಗಿ ನೆರವಾಗಬಲ್ಲರು. ಐಪಿಎಲ್ನಲ್ಲಿ ಅತ್ಯುತ್ತಮ ಅನುಭವ ಹೊಂದಿರುವ ಮಿಲ್ಲರ್ 80 ಪಂದ್ಯಗಳಲ್ಲಿ 1850 ರನ್ಗಳಿಸಿದ್ದಾರೆ. ಮಿಲ್ಲರ್ ಐಪಿಎಲ್ನಲ್ಲಿ ಒಂದು ಶತಕ ಹಾಗೂ 9 ಅರ್ಧ ಶತಕವನ್ನು ದಾಖಲಿಸಿದ್ದಾರೆ.
ಲಿಯಾಮ್ ಲೆವಿಂಗ್ಸ್ಟನ್
2021ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಿಯಾಮ್ ಲೆವಿಂಗ್ಸ್ಟನ್ ಅವರನ್ನು 75 ಲಕ್ಷ ರೂಪಾಯಿಗಳಿಗೆ ಕೊಂಡುಕೊಂಡಿದೆ. 2020 ಆವೃತ್ತಿಯಲ್ಲಿ ಇಂಗ್ಲೆಂಡ್ನ ಈ ಆಟಗಾರ ಐಪಿಎಲ್ನಲ್ಲಿ ಭಾಗಿಯಾಗಿರಲಿಲ್ಲ. ಆದರೆ 2019ರಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿಯೇ ಆಡಿದ್ದ ಇವರು 4 ಪಂದ್ಯಗಳಲ್ಲಿ 71 ರನ್ಗಳಿಸಿದ್ದಾರೆ.
ಆಂಡ್ರೋ ಟೈ
ಬೆನ್ ಸ್ಟೋಕ್ಸ್ ವಿದೇಶಿ ಆಟಗಾರನಾಗಿರುವ ಕಾರಣ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರನಾಗಿ ಆಂಡ್ರೋ ಟೈ ಅವರನ್ನು ಕೂಡ ಪರಿಗಣಿಸುವ ಅವಕಾಶವಿದೆ. ಬ್ಯಾಟಿಂಗ್ನಲ್ಲಿ ಅಲ್ಲದಿದ್ದರೂ ಬೌಲಿಂಗ್ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಕಾರಣವಾಗಲಿದೆ.
ಯಶಸ್ವಿ ಜೈಸ್ವಾಲ್
ಅನುಭವಿ ಬೆನ್ ಸ್ಟೋಕ್ಸ್ ಸ್ಥಾನವನ್ನು ತುಂಬಬಲ್ಲ ಇನ್ನೋರ್ವ ಆಟಗಾರ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್. 2020ರ ಐಪಿಎಲ್ಗೆ ಮುನ್ನ ಆರ್ಆರ್ ಜೈಸ್ವಾಲ್ ಅವರನ್ನು 2.4 ಕೋಟಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಕಳೆದ ಆವೃತ್ತಿಯಲ್ಲಿ ಜೈಸ್ವಾಲ್ 3 ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿದ್ದರು.
ಅನುಜ್ ರಾವತ್ 21ರ ಹರೆಯದ ಅನುಜ್
ರಾವತ್ ಬೆನ್ ಸ್ಟೋಕ್ಸ್ ಸ್ಥಾನಕ್ಕೆ ಸೂಕ್ತವೆನಿಸಬಲ್ಲ ಮತ್ತೋರ್ವ ಆಟಗಾರ. ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರವಾಗಿ ಮೊದಲ ಪಂದ್ಯದಲ್ಲಿ 8 ಬೌಲರ್ಗಳು ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದರು. ಹೀಗಾಗಿ ಆಲ್ರೌಂಡರ್ನ ಅವಶ್ಯಕತೆ ತಂಡಕ್ಕೆ ಅನಿವಾರ್ಯವಿಲ್ಲ. ಹೀಗಾಗಿ ಅನುಜ್ ರಾವತ್ ಅವರಂತಾ ಪೂರ್ಣಕಾಲಿಕ ಬ್ಯಾಟ್ಸ್ಮನ್ನನ್ನು ಸೇರಿಸಿಕೊಂಡರೆ ಅಚ್ಚರಿಯಿಲ್ಲ.
This News Article Is A Copy Of MYKHEL
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm