ಬ್ರೇಕಿಂಗ್ ನ್ಯೂಸ್
12-04-21 06:54 pm Source: MYKHEL ಕ್ರೀಡೆ
ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 11) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಿದ್ದವು. ರೋಚಕ ಹಂತಕ್ಕೆ ತಲುಪಿದ್ದ ಈ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ 10 ರನ್ಗಳ ಜಯ ದಾಖಲಿಸಿತ್ತು. ನಿತೀಶ್ ರಾಣಾ ಅವರ ಸ್ಫೋಟಕ ಅರ್ಧ ಶತಕದಿಂದಾಗಿ ಕೆಕೆಆರ್ ಟೂರ್ನಿಯಲ್ಲಿ ಶುಭಾರಂಭ ಕಾಣಲು ಸಾಧ್ಯವಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಬಂದಿದ್ದ ಎಡಗೈ ಬ್ಯಾಟ್ಸ್ಮನ್ ನಿತೀಶ್ ರಾಣಾ 56 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಆದರೆ ಇನ್ನಿಂಗ್ಸ್ ಮುಗಿಸಿ ಪೆವಿಲಿಯನ್ನತ್ತ ನಡೆಯುವಾಗ ರಾಣಾ ಮೂರು ಕೈಬೆರಳುಗಳನ್ನು ತೋರಿಸಿ ಏನೋ ಸನ್ನೆ ಮಾಡಿದ್ದರು.
ರಾಣಾ ಕೈಬೆರಳು ತೋರಿಸಿದ್ಯಾಕೆ?
ಬ್ಯಾಟಿಂಗ್ ಮುಗಿಸಿ ನಿರ್ಗಮಿಸುವಾಗ ನಿತೀಶ್ ರಾಣಾ ಅವರು ಕೈ ಬೆರಳು ತೋರಿಸಿ ಸನ್ನೆ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಅನ್ನೋದನ್ನು ರಾಣಾ ಹೇಳಿದ್ದಾರೆ. ತಂಡದ ಸಹ ಆಟಗಾರ ಹರ್ಭಜನ್ ಸಿಂಗ್ ಜೊತೆ ಮಾತನಾಡಿದ ರಾಣಾ, 'ನನ್ನೆಲ್ಲಾ ಸ್ನೇಹಿತರಿಗೆ ಪಂಜಾಬ್ ಭಾಷೆಯ 'ಬ್ರೌನ್ ಮುಂಡೆ' ಸಾಂಗ್ ಇಷ್ಟ. ಅದಕ್ಕಾಗಿ ನಾನು ಈ ಸನ್ನೆ ಮಾಡಿದೆ. ನಾನು ಯಾವಾಗೆಲ್ಲ ಈ ಸನ್ನೆ ಮಾಡುತ್ತೇನೋ ಅದರರ್ಥ ನಾವೆಲ್ಲ 'ಬ್ರೌನ್ ಮುಂಡೆ' ಎಂದು,' ಎಂದಿದ್ದಾರೆ.
ಯಾರ ಸಾಂಗ್ ಇದು?
ಪಂಜಾಬಿ ಗೀತೆರಚನೆಕಾರ, ಗೀತೆ ನಿರ್ಮಾಪಕ ಎಪಿ ಧಿಲ್ಲನ್ ಎಂದು ಕರೆಯಲ್ಪಡುವ ಅಮೃತ್ಪಾಲ್ ಸಿಂಗ್ ಧಿಲ್ಲನ್ ಅವರ 'ಬ್ರೌನ್ ಮುಂಡೆ' ಸಾಂಗ್ ಹೆಚ್ಚು ಜನಪ್ರಿಯತೆ ಗಿಟ್ಟಿಸಿತ್ತು. 2020ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿದ್ದ ಈ ಗೀತೆ ಯೂಟ್ಯೂಬ್ನಲ್ಲಿ 164,520,508 ಸಾರಿ ವೀಕ್ಷಿಸಲ್ಪಟ್ಟಿದೆ. ಈ ಗೀತೆಯ ವಿಡಿಯೋದಲ್ಲಿ ನಟರು ಕುಣಿಯುವಾಗ ಮೂರು ಬೆರಳು ತೋರಿಸಿ ಕೈ ಸನ್ನೆ ಮಾಡುತ್ತಾರೆ. ಇದೇ ರೀತಿ ರಾಣಾ ಕೂಡ ಕೈಸನ್ನೆ ಮಾಡಿದ್ದರು.
ಕೆಕೆಆರ್ vs ಎಸ್ಆರ್ಎಚ್ ಪಂದ್ಯದ ಸ್ಕೋರ್
* ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್, ರಾಣಾ 80 (56), ರಾಹುಲ್ ತ್ರಿಪಾಠಿ 53 (29) ರನ್ನೊಂದಿಗೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದು 187 ರನ್ ಬಾರಿಸಿತ್ತು.
* ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಮನೀಶ್ ಪಾಂಡೆ ಅಜೇಯ 61 (44), ಜಾನಿ ಬೇರ್ಸ್ಟೋವ್ 55 (40) ರನ್ನೊಂದಿಗೆ 20 ಓವರ್ಗೆ 5 ವಿಕೆಟ್ ನಷ್ಟದಲ್ಲಿ 177 ರನ್ ಬಾರಿಸಿ ಶರಣಾಯ್ತು.
* ಹೈದರಾಬಾದ್ನ ಮೊಹಮ್ಮದ್ ನಬಿ, ರಶೀದ್ ಖಾನ್, ಕೋಲ್ಕತ್ತಾದ ಪ್ರಸಿದ್ಧ್ ಕೃಷ್ಣ 2 ವಿಕೆಟ್ನೊಂದಿಗೆ ಗಮನ ಸೆಳೆದರು. ನಿತೀಶ್ ರಾಣಾ ಪಂದ್ಯಶ್ರೇಷ್ಠರೆನಿಸಿದರು.
This News Article Is A Copy Of MYKHEL
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm