ಬ್ರೇಕಿಂಗ್ ನ್ಯೂಸ್
12-04-21 05:37 pm Source: MYKHEL ಕ್ರೀಡೆ
ಐಪಿಎಲ್ನಲ್ಲಿ ಪಂಜಾಬ್ ಫ್ರಾಂಚೈಸಿ ಪಾಲಾದ ಬಳಿಕ ಕೆಎಲ್ ರಾಹುಲ್ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಪಂಜಾಬ್ ಪರವಾಗಿ ಆಡಿದ ಪ್ರತಿ ಆವೃತ್ತಿಯಲ್ಲೂ ರಾಹುಲ್ 500+ರನ್ಗಳಿಸಿದ ಸಾಧನೆ ಮಾಡಿದ್ದಾರೆ. ಸತತವಾಗಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರಲ್ಲಿ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಾಹುಲ್. 2018ರ ಆವೃತ್ತಿಯಲ್ಲಿ ರಾಹುಲ್ 3ನೇ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿದ್ದರು.ಆ ಆವೃತ್ತಿಯಲ್ಲಿ ರಾಹುಲ್ 54.91ರ ಸರಾಸರಿಯಲ್ಲಿ 659 ರನ್ಗಳಿಸಿದ್ದರು. 158.41ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಆ ಆವೃತ್ತಿಯಲ್ಲಿ ರಾಹುಲ್ 6 ಅರ್ಧಶತಕ ಬಾರಿಸಿದ್ದಾರೆ.
2019ರ ಆವೃತ್ತಿಯಲ್ಲಿ ರಾಹುಲ್ 593 ರನ್ಗಳಿಸಿ ಎರಡನೇ ಟಾಪ್ ಸ್ಕೋರರ್ ಎನಿಸಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ್ದ ರಾಹುಲ್ 14 ಪಂದ್ಯಗಳಲ್ಲಿ 670 ರನ್ಬಾರಿಸಿದ್ದರು. ಇದು ಆವೃತ್ತಿಯೊಂದರಲ್ಲಿ ಪಂಜಾಬ್ ಕಿಂಗ್ಸ್ ಆಟಗಾರನೋರ್ವ ದಾಖಲಿಸಿದ ಅತಿ ಹೆಚ್ಚಿನ ಸ್ಕೋರ್ ಕೂಡ ಆಗಿದೆ. ಈ ಮೂಲಕ ಕಳೆದ ಐಪಿಎಲ್ನಲ್ಲಿ ರಾಹುಲ್ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದರು.
ಈ ಬಾರಿಯ ಐಪಿಎಲ್ನಲ್ಲಿ ರಾಹುಲ್ ತಲುಪುವ ಸಾಧ್ಯತೆಯಿರುವ ಮೈಲಿಗಲ್ಲುಗಳು:
ಪಂಜಾಬ್ ಕಿಂಗ್ಸ್ ತಂಡದ ಪರವಾಗಿ 2000 ರನ್ ಪೂರೈಸಲು ರಾಹುಲ್ಗೆ 78 ರನ್ಗಳ ಅವಶ್ಯಕತೆಯಿದೆ. ಶಾನ್ ಮಾರ್ಶ್ ಬಳಿಕ ಈ ಸಾಧನೆ ಮಾಡುವ ಎರಡನೇ ಆಟಗಾರನಾಗಲಿದ್ದಾರೆ ರಾಹುಲ್. 158 ರನ್ಗಳಿಸಿದರೆ ರಾಹುಲ್ 5000 ಟಿ20 ರನ್ಗಳನ್ನು ಪೂರೈಸಿದಂತಾಗುತ್ತದೆ. ಟಿ20ಯಲ್ಲಿ 200 ಸಿಕ್ಸರ್ ಗಳಿಸಲು ರಾಹುಲ್ಗೆ 8 ಸಿಕ್ಸರ್ಗಳ ಅವಶ್ಯಕತೆಯಿದೆ. 3 ಅರ್ಧ ಶತಕ ಬಾರಿಸಿದರೆ ಪಂಜಾಬ್ ಪರ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಆಟಗಾರ ಎನಿಸಲಿದ್ದಾರೆ ರಾಹುಲ್. ರಾಹುಲ್ 19 ಅರ್ಧ ಶತಕ ಗಳಿಸಿದ್ದು ಶಾನ್ ಮಾರ್ಶ್ 21 ಅರ್ಧ ಶತಕ ಗಳಿಸಿ ಮುಂದಿದ್ದಾರೆ. ಈ ಆವೃತ್ತಿಯಲ್ಲಿ ರಾಹುಲ್ 20 ಸಿಕ್ಸರ್ ಬಾರಿಸಿದರೆ ಪಂಜಾಬ್ ಪರವಾಗಿ ಸಿಕ್ಸರ್ಗಳ ಶತಕ ಬಾರಿಸಿದಂತಾಗುತ್ತದೆ. ರಾಹುಲ್ ಪಂಜಾಬ್ ತಂಡದ ಪರವಾಗಿ 80 ಸಿಕ್ಸರ್ ಬಾರಿಸಿದ್ದಾರೆ. ಈ ಐಪಿಎಲ್ನಲ್ಲಿ ರಾಹುಲ್ 353 ರನ್ಗಳಿಸಿದರೆ 2000 ಐಪಿಎಲ್ ರನ್ಗಳನ್ನು ಗಳಿಸಿದಂತಾಗುತ್ತದೆ
This News Article Is A Copy Of MYKHEL
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
14-01-26 10:08 pm
HK News Desk
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 09:49 pm
Bangalore Correspondent
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm