ಬ್ರೇಕಿಂಗ್ ನ್ಯೂಸ್
02-04-21 06:25 pm Source: MYKHEL ಕ್ರೀಡೆ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ ನಿಜ. ಆದರೆ ಹಿಂದಿನ ಸೀಸನ್ಗಳಲ್ಲಿನ ತಪ್ಪುಗಳನ್ನು ತಿದ್ದಿಕೊಂಡರೆ, ತಂಡದ ಬಲಿಷ್ಠ ಆಟಗಾರರೆಲ್ಲ ಜವಾಬ್ದಾರಿಯುತ ಪ್ರದರ್ಶನ ನೀಡಲಾರಂಭಿಸಿದರೆ ಆರ್ಸಿಬಿ ಈ ವರ್ಷ ಖಂಡಿತಾ ಕಪ್ ಗೆಲ್ಲಲು ಅವಕಾಶವಿದೆ.
ಏಪ್ರಿಲ್ 9ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಸೀಸನ್ನ ಚೊಚ್ಚಲ ಪಂದ್ಯದಲ್ಲೇ ಆರ್ಸಿಬಿ ಶುಭಾರಂಭ ಕಂಡರೆ ಆರ್ಸಿಬಿಯ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅದು ಟ್ರೋಫಿ ಗೆಲ್ಲಲು ನಾಂದಿಯಾಗಲಿದೆ.
ಉದ್ಘಾಟನಾ ಪಂದ್ಯದಲ್ಲೇ ಆರ್ಸಿಬಿ ವಿಜಯ ಪತಾಕೆ ಹಾರಿಸಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಬ್ರಾಡ್ ಹಾಗ್ ಬಲಿಷ್ಠ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.

ಆರಂಭಿಕ ಬ್ಯಾಟ್ಸ್ಮನ್ಗಳು
ಈ ಬಾರಿ ಆರ್ಸಿಬಿಯಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಯೆಂದರೆ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಪರ ಕೊಹ್ಲಿ ಮತ್ತು ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಆಡೋದು ಬಹುತೇಕ ಖಚಿತ. ಬ್ರಾಡ್ ಹಾಗ್ ನೆಚ್ಚಿನ ಪ್ಲೇಯಿಂಗ್ XIನಲ್ಲೂ ಕೊಹ್ಲಿ-ಪಡಿಕ್ಕಲ್ ಆರಂಭಿಕರಾಗಿ ಹೆಸರಿಸಲ್ಪಟ್ಟಿದ್ದಾರೆ.

ಬೆಸ್ಟ್ ಮಿಡ್ಲ್ ಆರ್ಡರ್
ಮೊದಲ ಐಪಿಎಲ್ ಪಂದ್ಯಕ್ಕೆ ಹಾಗ್ ಹೆಸರಿಸಿರುವ ಪ್ಲೇಯಿಂಗ್ XIನಲ್ಲಿ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್, ಸ್ಪೋಟಕ ಬ್ಯಾಟ್ಸ್ಮನ್ ಗಳಾದ ಗ್ಲೆನ್ ಮ್ಯಾಕ್ಸ್ವೆಲ್, ಡಾನ್ ಕ್ರಿಸ್ಚಿಯನ್ ಮತ್ತು ಮೊಹಮ್ಮದ್ ಅಜರುದ್ದೀನ್ ಕಾಣಿಸಿಕೊಂಡಿದ್ದಾರೆ. ಇದೇ ಪ್ರಕಾರ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಪ್ಲೇಯಿಂಗ್ XI ಇದ್ದರೆ ಇದು ನಿಜಕ್ಕೂ ಬಲಿಷ್ಠ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಅನ್ನಿಸಿಕೊಳ್ಳಲಿದೆ.

ಹಾಗ್ ನೆಚ್ಚಿನ ಆರ್ಸಿಬಿ ತಂಡ
1. ದೇವದತ್ ಪಡಿಕ್ಕಲ್, 2. ವಿರಾಟ್ ಕೊಹ್ಲಿ (ಸಿ), 3. ಎಬಿ ಡಿವಿಲಿಯರ್ಸ್, 4. ಗ್ಲೆನ್ ಮ್ಯಾಕ್ಸ್ ವೆಲ್, 5. ಡಾನ್ ಕ್ರಿಶ್ಚಿಯನ್, 6. ಮೊಹಮ್ಮದ್ ಅಜರುದ್ದೀನ್, 7. ವಾಷಿಂಗ್ಟನ್ ಸುಂದರ್, 8. ಮೊಹಮ್ಮದ್ ಸಿರಾಜ್, 9. ನವದೀಪ್ ಸೈನಿ, 10 ಕೇನ್ ರಿಚರ್ಡ್ಸನ್, 11. ಯುಜುವೇಂದ್ರ ಚಾಹಲ್.
This News Article Is A Copy Of MYKHEL
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm