ಬ್ರೇಕಿಂಗ್ ನ್ಯೂಸ್
29-03-21 11:08 am Source: MYKHEL ಕ್ರೀಡೆ
ಈ ಕ್ರಿಕೆಟ್ ಋತು ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳುವಂತಾ ಋತು ಎಂದು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಬಯೋ ಬಬಲ್ನಂತಾ ಕಠಿಣ ವಾತಾವರಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿ ಗೆಲುವು ಹಾಗೂ ಇಂಗ್ಲೆಂಡ್ ವಿರುದ್ಧದ ಮೂರು ಮಾದರಿಯಲ್ಲೂ ಭಾರತದ ಸರಣಿ ಗೆಲುವಿನ ಸಾಧನೆಯನ್ನು ದೃಷ್ಟಿಯಲ್ಲಿಟ್ಟು ಈ ಮಾತುಗಳನ್ನು ಆಡಿದ್ದಾರೆ ರವಿ ಶಾಸ್ತ್ರಿ.
"ಅಭಿನಂದನೆಗಳು ಟ್ರೋಫಿಯನ್ನು ಎತ್ತಿ ಹಿಡಿದಿರುವುದಕ್ಕಾಗಿ. ವಿಶ್ವದ ಎರಡು ಅತ್ಯುತ್ತಮ ತಂಡಗಳ ವಿರುದ್ಧ ಎಲ್ಲಾ ಮಾದರಿಯಲ್ಲಿ ಕಠಿಣ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜೀವಮಾನದ ಋತುವನ್ನು ಹೊಂದಿದ್ದೀರಿ. ಅಭಿನಂದನೆಗೆ ನೀವು ಅತ್ಯಂತ ಅರ್ಹರು" ಎಂದು ಶಾಸ್ತ್ರಿ ಆಟಗಾರರನ್ನು ಪ್ರಶಂಸಿಸಿದ್ದಾರೆ.
ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಈ ಹಿಂದೆ ಹಲವು ಬಾರಿ ಬಯೋಬಬಲ್ನಲ್ಲಿದ್ದು ಆಡುವ ಒತ್ತಡದ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದರು. ಈಗ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಟ್ವೀಟ್ ಮಾಡಿ ಭಾರತೀಯ ಆಟಗಾರರ ಪರವಾಗಿ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಭಾರತದ ಬಹುಪಾಲು ಆಟಗಾರರು ಕಳೆದ 7 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಪ್ರವಾಸದ ನಂತರದ ಒಂದು ವಾರವನ್ನು ಹೊರತು ಪಡಿಸಿ ಉಳಿದ ಎಲ್ಲಾ ಸಮಯಗಳನ್ನು ಬಯೋಬಬಲ್ನಲ್ಲಿಯೇ ಕಳೆದಿದ್ದಾರೆ.
ಕಳೆದ ಐಪಿಎಲ್ ಆವೃತ್ತಿ ಮುಕ್ತಾವಾಗುತ್ತಿದ್ದಂತೆಯೇ ಭಾರತದ ಬಿಡುವಿಲ್ಲದ ಋತು ಆರಂಭವಾಗಿತ್ತು. ಆರಂಭದಲ್ಲಿ ಏಕದಿನ ಸರಣಿ ಆಸ್ಟ್ರೇಲಿಯಾಗೆ 1-2 ಅಂತರದಿಂದ ಸೋಲುವ ಮೂಲಕ ಆರಂಭವಾಯಿತು. ಆದರೆ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ 2-1 ಅಂತರದಿಂದ ಗೆಲುವು ಸಾಧಿಸಿತು. ಅದಾದ ಬಳಿಕ ಬಹು ನಿರೀಕ್ಷಿತ ಟೆಸ್ಟ್ ಸರಣಿ ಭಾರತೀಯ ಅಭಿಮಾನಿಗಳ ಪಾಲಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಾದ್ದು.
ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ ಸ್ಟಾರ್ ಆಟಗಾರರ ಅಲಭ್ಯತೆಯ ಮಧ್ಯೆಯೂ ಭಾರತ ತಂಡದ ಆಟಗಾರರು ನೀಡಿದ ಪ್ರದರ್ಶನದಿಂದ ಭಾರತ 2-1 ಅಂತರದಿಂದ ಐತಿಹಾಸಿಕವಾಗಿ ಸರಣಿಯನ್ನು ಗೆದ್ದುಕೊಂಡಿತ್ತು.
ಬಳಿಕ ಭಾರತ ತವರಿನಲ್ಲಿಯೂ ಇದೇ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲಿಗೆ ಟೆಸ್ಟ್ನಲ್ಲಿ 3-1 ಅಂತರದಿಂದ ಭಾರತ ಗೆಲುವು ಸಾಧಿಸಿತ್ತು. ಬಳಿಕ ಸೀಮಿತ ಓವರ್ಗಳಲ್ಲಿ ಇಂಗ್ಲೆಂಡ್ ಕಠಿಣ ಪೈಪೋಟಿಯನ್ನು ನೀಡಿತಾದರೂ ಭಾರತದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
This News Article Is A Copy Of MYKHEKL
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm